More

    ವಿವಿಧ ಕಾಮಗಾರಿಗೆ ಕುಷ್ಟಗಿ ಶಾಸಕ ಬಯ್ಯಪುರ ಭೂಮಿಪೂಜೆ

    ತಾವರಗೇರಾ: ಪಟ್ಟಣದ ವಿವಿಧ ವಾರ್ಡ್‌ಗಳ ನಾನಾ ಕಾಮಗಾರಿಗಳಿಗೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

    1, 12, 13, 14 ಮತ್ತು 15ನೇ ವಾರ್ಡ್‌ಗಳಲ್ಲಿ ಬಿಟಿ ರಸ್ತೆ ಮತ್ತು ಚರಂಡಿ ನಿರ್ಮಾಣ, ರಾಯನಕೆರೆಯ ಹಿಂಭಾಗದಿಂದ ಕಡೆಕೊಡಕ್ಕೆ ನೀರು ಹರಿದು ಹೋಗಲು ರಾಜ ಕಾಲುವೆ ನಿರ್ಮಾಣ, 18ನೇ ವಾರ್ಡ್‌ನ ವಿಠಲಾಪುರದಲ್ಲಿ ಮಹಿಳೆಯರಿಗಾಗಿ ಹೈಟೆಕ್ ಸಾಮೂಹಿಕ ಶೌಚಗೃಹ, ಪಟ್ಟಣದ ಸರ್ಕಾರಿ ಕಟ್ಟಡಗಳಿಗೆ, ಸರ್ಕಾರಿ ಶಾಲೆಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ರ‌್ಯಾಂಪ್ ಮತ್ತು ಗ್ರಿಲ್ ಅಳವಡಿಕೆ, ಬಸವಣ್ಣ ಕ್ಯಾಂಪ್‌ನಲ್ಲಿ ಚರಂಡಿ ನಿರ್ಮಾಣ, ಪಪಂ ವ್ಯಾಪ್ತಿಯ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಿಂದ ಮುಖ್ಯ ರಸ್ತೆಯ ವರೆಗೆ ಬಿಟಿ ರಸ್ತೆ ನಿರ್ಮಾಣ, ನಾರಿನಾಳ ರಸ್ತೆಗೆ ಸಿಸಿ ಡ್ರೇನ್ ಮತ್ತು ಬಿಟಿ ರಸ್ತೆ, ಪಟ್ಟಣದಿಂದ 16ನೇ ವಾರ್ಡ್‌ನ ಕೃಷ್ಣಗಿರಿಯಲ್ಲಿ ಸಿಡಿ ನಿರ್ಮಾಣ ಮೊದಲಾದ ಕಾಮಗರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

    ಪ್ರಮುಖರಾದ ಡಾ. ಶ್ಯಾಮೀದ್ ದೋಟಿಹಾಳ, ನಾರಾಯಣಗೌಡ ಮೆದಿಕೇರಿ, ವಿಕ್ರಮ್ ರಾಯ್ಕರ್, ಚಂದ್ರಶೇಖರ ನಾಲತವಾಡ, ಲಿಂಗರಾಜ ಹಂಚಿನಾಳ, ರುದ್ರಗೌಡ ಕುಲಕರ್ಣಿ, ವೀರೇಶ ತಾಳಿಕೋಟಿ, ವೀರನಗೌಡ ಪಾಟೀಲ್, ಬಸನಗೌಡ, ಪಪಂ ಮುಖ್ಯಾಧಿಕಾರಿ ನಬಿಸಾಬ್ ಖುದನವರ್ ಸೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts