More

    ಹೊಸ ಅವತಾರದಲ್ಲಿ ಟಾಟಾ ನ್ಯಾನೋ; ಕೈಗೆಟಕುವ ದರದಲ್ಲಿ ಸಿಗುತ್ತಾ ಎಲೆಕ್ಟ್ರಿಕ್​ ಕಾರು.?!

    ನವದೆಹಲಿ: ಮಧ್ಯಮ ವರ್ಗದ ಜನರ ಅಚ್ಚುಮೆಚ್ಚಿನ ಕಾರು ಟಾಟಾ ನ್ಯಾನೋ ಇದೀಗ ಎಲೆಕ್ಟ್ರಿಕ್​ ಅವತರಣಿಕೆಯಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಹಿಂದೆ 2020ರಲ್ಲಿ ಟಾಟಾ ನ್ಯಾನೋದ ಉತ್ಪಾದನೆಯನ್ನೇ ನಿಲ್ಲಿಸಲಾಗಿತ್ತು. ಹೀಗಾಗಿ ನ್ಯಾನೋ ಕಾರಿನ ಎಲೆಕ್ಟ್ರಿಕ್​ ಆವೃತ್ತಿ ಈ ಕಾರಿಗೆ ಪುನರ್ಜನ್ಮವನ್ನೇ ನೀಡಲಿದೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಟಾಟಾ ಮೋಟರ್ಸ್​ ವಿವಿಧ ರೀತಿಯ ಎಲೆಕ್ಟ್ರಿಕ್​ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಟಾಟಾ ಟಿಯಾಗೋ, ಟಿಗೋರ್​, ನೆಕ್ಸಾನ್​ ಇವಿ ಕಾರುಗಳ ಸಾಲಿಗೆ ಇದೀಗ ಎಲೆಕ್ಟ್ರಿಕ್​ ನ್ಯಾನೋ ಸೇರಲಿದೆ. ಇದರಿಂದ ದೇಶದ ವಿವಿಧ ವರ್ಗಗಳ ಜನರು ಎಲೆಕ್ಟ್ರಿಕ್​ ವಾಹನಗಳನ್ನು ಖರೀದಿಸುವಂತೆ ಆಗಲಿದೆ.

    ಟಾಟಾ ಮೋಟರ್ಸ್​, ಹಳೆ ನ್ಯಾನೋ ಕಾರಿನ ಪೆಟ್ರೋಲ್​ ಇಂಜಿನ್​ ತೆಗೆದು ಎಲೆಕ್ಟ್ರಿಕ್​ ಮೋಟರ್​ ಹಾಕಲ್ಲವಂತೆ. ಬದಲಾಗಿ ಈ ಕಾರನ್ನು ಎಲೆಕ್ಟ್ರಿಕ್​ ಗಾಡಿಯಾಗಿ ಮರು ವಿನ್ಯಾಸ ಮಾಡಲಾಗಿದೆ ಅಂತೆ. ಹೊಸ ವಿನ್ಯಾಸದ ನ್ಯಾನೋನಲ್ಲಿ ಹೊಸ ಸಸ್ಪೆಂಶನ್​, ಟಯರ್​ಗಳು ಹಾಗೂ ಬಾಡಿಯನ್ನೂ ಹೊಸತಾಗಿ ವಿನ್ಯಾಸ ಮಾಡಿದ್ದಾರೆ. ಈ ಕಾರಿನ ಡಿಸೈನ್​ ಆಧುನಿಕ ಲುಕ್​ ಪಡೆಯಲಿದ್ದು ಡ್ಯಾಶ್​ ಬೋರ್ಡ್​ನಲ್ಲಿ ಆಧುನಿಕ ಟೆಕ್ನಾಲಜಿಯನ್ನು ಸೇರಿಸಲಾಗಿದೆ.

    ಇದರ ಎಲೆಕ್ಟ್ರಿಕ್​ ಮೋಟರ್​ ಸಿಟಿ ಲಿಮಿಟ್​ನಲ್ಲಿ ಸಂಚರಿಸಲು ಯೋಗ್ಯವಾಗಿರುವಂತೆ ಡಿಸೈನ್​ ಮಾಡಲಾಗಿದೆ. ಇದನ್ನು ಒಮ್ಮೆ ಚಾರ್ಜ್​ ಮಾಡಿದರೆ 200 ಕಿಮೀ ತನಕ ಓಡಲಿದೆ ಎಂದು ಹೇಳಲಾಗುತ್ತಿದೆ.

    ಇದರ ಬೆಲೆ ಜನರ ಕೈಗೆ ಎಟುಕುವಂತಿದ್ದರೆ ಮೆಟ್ರೋಪಾಲಿಟನ್​ ನಗರದಲ್ಲಿ ಭಾರೀ ಜನಪ್ರಿಯ ಆಗಲಿದೆ ಎಂದೇ ಹೇಳಲಾಗುತ್ತಿದೆ. ಇದಿಷ್ಟೇ ಅಲ್ಲದೇ ಟಾಟಾ ಮೋಟರ್ಸ್​ ಮುಂದಿನ 5 ವರಷಗಳಲ್ಲಿ 10ಕ್ಕೂ ಹೆಚ್ಚು ಬ್ಯಾಟರಿ ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts