More

    ಟಾಟಾ ಮೋಟಾರ್ಸ್ ಯೋಧ 2.0, ಇಂಟ್ರಾ ವಿ20, ಇಂಟ್ರಾ ವಿ50 ಪಿಕಪ್‍ ವಾಹನಗಳ ಬಿಡುಗಡೆ

    ಹೈದರಾಬಾದ್: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ಇಂದು Yodha 2.0, ಇಂಟ್ರಾ V20 ಬೈ-ಫ್ಯುಯಲ್ (ಸಿಎನ್​ಜಿ+ಪೆಟ್ರೋಲ್) ಮತ್ತು ಇಂಟ್ರಾ V50ಗಳ ಬಿಡುಗಡೆಯೊಂದಿಗೆ ಭಾರತದ ವೇಗವಾಗಿ ಬೆಳೆಯುತ್ತಿರುವ ಪಿಕಪ್ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.

    ಈ ಒರಟಾದ ಮತ್ತು ಕಠಿಣವಾದ ಪಿಕಪ್‍ ವಾಹನಗಳು ಎದ್ದುಕಾಣುವ ಹೊಸ ವಿನ್ಯಾಸದ ಜೊತೆಗೆ ಅತ್ಯಧಿಕ ಹೊರೆ-ಸಾಗಿಸುವ ಸಾಮರ್ಥ್ಯ, ದೀರ್ಘವಾದ ಡೆಕ್, ಸುರಕ್ಷಿತ ಮತ್ತು ಆರಾಮದಾಯಕ ಚಾಲನೆಗೆ ಅಗತ್ಯವಾದ ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ. ವಿವಿಧ ರೀತಿಯ ನಗರ ಮತ್ತು ಗ್ರಾಮೀಣ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿ ತಯಾರಿಸಲಾಗಿರುವ ಹೊಸ ಯೋಧ 2.0, ಇಂಟ್ರಾ V20 ಬೈ-ಫ್ಯುಯಲ್ ಮತ್ತು ಇಂಟ್ರಾ V50 ವೇಗವಾಗಿ ಬೆಳೆಯುತ್ತಿರುವ ಕೃಷಿ, ಕೋಳಿ ಮತ್ತು ಡೈರಿ ವಲಯಗಳ ವೈವಿಧ್ಯಮಯ ಚಲನಶೀಲತೆಯ ಅಗತ್ಯಗಳನ್ನು ಪೂರೈಸಲು ಸೂಕ್ತವಾಗಿದೆ. ಅಲ್ಲದೆ ವಿಸ್ತೃತಗೊಳ್ಳುತ್ತಿರುವ ಎಫ್​ಎಂಸಿಜಿ, ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ವಲಯಗಳ ವಿತರಣಾ ಅಗತ್ಯತೆಗಳನ್ನು ಪೂರೈಸಲು ಕೂಡ ಸೂಕ್ತವಾಗಿವೆ. ಈ ಪಿಕಪ್‍ ವಾಹನಗಳು ನಮ್ಮ ಗ್ರಾಹಕರು ಗರಿಷ್ಠ ಲಾಭವನ್ನು ಗಳಿಸಲು ಅನುಕೂಲಕರವಾಗಿವೆ. ಟಾಟಾ ಮೋಟಾರ್ಸ್ ದೇಶಾದ್ಯಂತ ಗ್ರಾಹಕರಿಗೆ ಇಂಥ 750 ವಾಹನಗಳನ್ನು ವಿತರಿಸುವ ಮೂಲಕ ಭಾರತದ ಅತ್ಯುತ್ತಮ ಪಿಕಪ್​ಗಳ ಬಿಡುಗಡೆ ಆಚರಿಸಿತು.

    ಹೊಸ ಶ್ರೇಣಿಯ ಪಿಕಪ್‍ಗಳನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್‍ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್​ ಮಾತನಾಡಿ, ನಮ್ಮ ಸಣ್ಣ ವಾಣಿಜ್ಯ ವಾಹನಗಳು ಲಕ್ಷಾಂತರ ಗ್ರಾಹಕರಿಗೆ ಜೀವನೋಪಾಯ ಒದಗಿಸಲು ಮತ್ತು ಅವರ ಯಶಸ್ಸನ್ನು ಸಕ್ರಿಯಗೊಳಿಸಲು ಹೆಸರುವಾಸಿಯಾಗಿದೆ ಎಂದು ಹೇಳಿದರು. ವ್ಯಾಪಾರದ ಅಭಿವೃದ್ಧಿ ಮತ್ತು ಉತ್ತಮ ಜೀವನಕ್ಕಾಗಿ ಅವರ ಮಹತ್ವಾಕಾಂಕ್ಷೆ ದೃಢವಾಗುತ್ತಿದ್ದಂತೆ, ಅವರು ನಮ್ಮ ಹೊಸ ಶ್ರೇಣಿಯ ಪಿಕಪ್‍ಗಳಲ್ಲಿ ಆದರ್ಶ ಹೊಂದಿಕೆಯನ್ನು ಕಂಡುಕೊಳ್ಳುತ್ತಾರೆ. ಏಕೆಂದರೆ ಇವುಗಳನ್ನು ಅವರ ವಿಕಸನದ ಆಕಾಂಕ್ಷೆಗಳನ್ನು ಪೂರೈಸಲು ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದೆ. ಈ ಪಿಕಪ್‍ಗಳ ಪ್ರತಿ ಅಂಶ ನಗರ, ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಬಳಕೆಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.

    ಟಾಟಾ ಮೋಟಾರ್ಸ್ ಯೋಧ 2.0, ಇಂಟ್ರಾ ವಿ20, ಇಂಟ್ರಾ ವಿ50 ಪಿಕಪ್‍ ವಾಹನಗಳ ಬಿಡುಗಡೆ

    ಇವು ಒತ್ತಡ-ರಹಿತ ಚಾಲನೆಗಾಗಿ ಆಧುನಿಕ ಸುರಕ್ಷತೆ ಮತ್ತು ಸೌಕರ್ಯದ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ದೂರದ ಸ್ಥಳಗಳನ್ನು ತಲುಪಲು, ಎಲ್ಲಾ ಭೂಪ್ರದೇಶದ ಪ್ರವೇಶ ಮತ್ತು ಭಾರತದ ಅತಿದೊಡ್ಡ ಡೀಲರ್ ಮತ್ತು ಸೇವಾ ನೆಟ್‍ವರ್ಕ್‍ನ ಬೆಂಬಲದೊಂದಿಗೆ, ನಮ್ಮ ಸಮಗ್ರ ಶ್ರೇಣಿಯ ಪಿಕಪ್‍ಗಳು ನೀಡುವ ಸಮಗ್ರ ಮೌಲ್ಯದ ಪ್ರತಿಪಾದನೆ ಅಜೇಯವಾಗಿದೆ. ಈ ಹೊಸ ಯುಗದ ಪಿಕಪ್‍ಗಳ ಪರಿಚಯ ಹೆಚ್ಚಿನ ಪ್ರಗತಿ ಮತ್ತು ಯಶಸ್ಸಿಗಾಗಿ ಗ್ರಾಹಕರನ್ನು ಉತ್ತಮ ದರ್ಜೆಯ ವಾಹನಗಳೊಂದಿಗೆ ಯಾವಾಗಲೂ ಸಬಲೀಕರಿಸುವ ಮತ್ತು ಸಜ್ಜುಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದೂ ಹೇಳಿದರು.

    ಯೋಧ 2.0 ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯದೊಂದಿಗೆ ಅತ್ಯಧಿಕ 2000 ಕೆ.ಜಿ. ಪ್ರಮಾಣದ ಪೇಲೋಡ್ ಸಾಮರ್ಥ್ಯದ್ದಾಗಿದೆ. ಅದರ ಒರಟಾದ ಸಂಯೋಜನೆಗಳೊಂದಿಗೆ ಹೊಸ ಯೋಧ 2.0 ಕಠಿಣ ಭೂಪ್ರದೇಶವನ್ನು ಸುಲಭವಾಗಿ ನಿಭಾಯಿಸಬಲ್ಲದು. ಈ ಮೂಲಕ ದೇಶದ ದೂರದ ಭಾಗಗಳಲ್ಲಿ ತಡೆರಹಿತ ಮತ್ತು ವೇಗವಾದ ಸರಕು ಸಾಗಣೆಯನ್ನು ಖಚಿತಪಡಿಸುತ್ತದೆ. ಯೋಧ 2.0 ಒರಟಾದ ನೋಟ, ಟಾಟಾ ಸಿಗ್ನೇಚರ್ ‘ಟ್ರಸ್ಟ್ ಬಾರ್’ ಮತ್ತು ಇತರ ಕ್ರಿಯಾತ್ಮಕ ನವೀಕರಣಗಳ ನಡುವೆ ಸೊಗಸಾದ ಗ್ರಿಲ್‍ನೊಂದಿಗೆ ನವೀಕರಿಸಿದ ವಿನ್ಯಾಸವನ್ನು ಹೊಂದಿದೆ.

    ಟಾಟಾ ಮೋಟಾರ್ಸ್ ಯೋಧ 2.0, ಇಂಟ್ರಾ ವಿ20, ಇಂಟ್ರಾ ವಿ50 ಪಿಕಪ್‍ ವಾಹನಗಳ ಬಿಡುಗಡೆ

    ಯೋಧ 1200, 1500 ಮತ್ತು 1700 ಕೆ.ಜಿ. ಪೇಲೋಡ್ ಆಯ್ಕೆಗಳಲ್ಲಿ ಲಭ್ಯವಿದ್ದು, 4×4 ಮತ್ತು 4×2 ಕಾನ್​ಫಿಗರೇಷನ್​ಗಳಲ್ಲಿ ಬರುತ್ತದೆ. ಸಿಂಗಲ್ ಕ್ಯಾಬ್ ಮತ್ತು ಕ್ರೂ ಕ್ಯಾಬ್ ಆಯ್ಕೆಗಳಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ತಮ್ಮ ಪರಿಪೂರ್ಣ ಮಾದರಿ ಮತ್ತು ಕ್ಯಾಬ್ ಪ್ರಕಾರವನ್ನು ಆಯ್ಕೆ ಮಾಡಲು ಅನುಕೂಲವಾಗುವಂತಿದೆ.

    ಇಂಟ್ರಾ ವಿ50 ಸ್ಮಾರ್ಟ್ ಪಿಕಪ್, ಅತ್ಯಧಿಕ 1500 ಕೆ.ಜಿ. ಪ್ರಮಾಣದ ಪೇಲೋಡ್ ಸಾಮರ್ಥ್ಯ ಮತ್ತು ದೊಡ್ಡ ಡೆಕ್ ಹೊಂದಿದೆ. ಹೊಸ ಇಂಟ್ರಾ ವಿ50 ತನ್ನ ಹೆಚ್ಚಿನ ಪೇಲೋಡ್ ಸಾಮರ್ಥ್ಯ, ಅತ್ಯಾಧುನಿಕ ಕ್ಯಾಬಿನ್ ಸೌಕರ್ಯ, ಉದ್ದವಾದ ಲೋಡ್ ಡೆಕ್, ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿನ ಎಲ್ಲ ಭೂಪ್ರದೇಶದ ಕಾರ್ಯಾಚರಣೆಗಳಿಗಾಗಿ ಚಿಂತೆರಹಿತ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್​ ವಿಭಾಗದಲ್ಲಿ ಹೊಸ ಮಾದರಿಗಳನ್ನು ಹೊಂದಿದೆ. ಇಂಟ್ರಾ ವಿ20, 1000 ಕೆ.ಜಿ. ಪೇಲೋಡ್ ಮತ್ತು 600 ಕಿ.ಮೀ.ಗಿಂತಲೂ ಹೆಚ್ಚು ಉದ್ದದ ವ್ಯಾಪ್ತಿಗಳೊಂದಿಗೆ ಭಾರತದ ಮೊದಲ ಬೈ-ಫ್ಯುಯಲ್ ಪಿಕಪ್ ಆಗಿದೆ.

    ಒಂದು ಲಕ್ಷಕ್ಕೂ ಹೆಚ್ಚು ಸಂತೋಷದ ಗ್ರಾಹಕರ ಆದ್ಯತೆಯ ಪಿಕಪ್, ಇಂಟ್ರಾ ಅನೇಕ ಅಪ್ಲಿಕೇಶನ್‍ಗಳಿಗೆ ಸೂಕ್ತವಾಗಿದೆ. ಟಾಟಾ ಮೋಟಾರ್ಸ್‍ನ ಯಶಸ್ವಿ ‘ಪ್ರೀಮಿಯಂ ಟಫ್’ ವಿನ್ಯಾಸದ ತತ್ವದ ಮೇಲೆ ನಿರ್ಮಿಸಲಾದ ಇಂಟ್ರಾ ಶ್ರೇಣಿಯು ವಾಕ್‍ಥ್ರೂ ಕ್ಯಾಬಿನ್, ಡ್ಯಾಶ್-ಮೌಂಟೆಡ್ ಗೇರ್ ಲಿವರ್​​ನಂಥ ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಮತ್ತು V10 ಮತ್ತು V30 ಸ್ಪೆಕ್ಸ್​ಗಳನ್ನು ಸಹ ಒಳಗೊಂಡಿದ್ದು, ಇದು ವಿವಿಧ ಬಳಕೆಗಳಿಗೆ ಸ್ಮಾರ್ಟ್ ಪಿಕಪ್ ಆಯ್ಕೆಯಾಗಿದೆ.

    ಟಾಟಾ ಮೋಟಾರ್ಸ್ ಯೋಧ 2.0, ಇಂಟ್ರಾ ವಿ20, ಇಂಟ್ರಾ ವಿ50 ಪಿಕಪ್‍ ವಾಹನಗಳ ಬಿಡುಗಡೆ

    ಹೆಚ್ಚುವರಿಯಾಗಿ, ಸಂಪೂರ್ಣ ಸೇವಾ 2.0 ಕಾರ್ಯಕ್ರಮದ ಅಡಿಯಲ್ಲಿ ಗ್ರಾಹಕರು ಉದ್ಯಮದಲ್ಲಿ ಅತ್ಯುತ್ತಮವಾದ ಮಾರಾಟ ನಂತರದ ಸೇವೆ, ಬಿಡಿಭಾಗಗಳ ಸುಲಭ ಲಭ್ಯತೆ ಮತ್ತು ನೀಡಲಾಗುವ ಮೌಲ್ಯವರ್ಧಿತ ಸೇವೆಗಳ ಪ್ರಯೋಜನ ಪಡೆಯುತ್ತಾರೆ, ಇದರಲ್ಲಿ ಈ ಕೆಳಗಿನ ಎಲ್ಲವೂ ಸೇರಿವೆ.

    • ಟಾಟಾ ಜಿಪ್ಪಿ: 48 ಗಂಟೆಗಳ ಒಳಗಿನ ಸಮಸ್ಯೆ ಪರಿಹಾರ ಸಹಿತದ ದುರಸ್ತಿಯ ಸಮಯದ ಭರವಸೆ ಕಾರ್ಯಕ್ರಮ
    • ಟಾಟಾ ಅಲರ್ಟ್: ವಾರಂಟಿ ಅಡಿಯಲ್ಲಿನ ವಾಹನಗಳಿಗೆ 24 ಗಂಟೆಗಳ ಒಳಗೆ ಸಮಸ್ಯೆ ಪರಿಹಾರದ ಭರವಸೆ ಸಹಿತದ ರೋಡ್ ಸೈಡ್ ಅಸಿಸ್ಟೆನ್ಸ್ ಕಾರ್ಯಕ್ರಮ.
    • ಟಾಟಾ ಗುರು: ದೇಶಾದ್ಯಂತ ದುರಸ್ತಿ ಮತ್ತು ಸೇವೆಗಳಿಗಾಗಿ ರೋಡ್ ಸೈಡ್ ಮತ್ತು ವರ್ಕ್‍ಶಾಪ್ ಸಹಾಯ ಒದಗಿಸಲು ತರಬೇತಿ ಪಡೆದ 50,000ಕ್ಕೂ ಅಧಿಕ ತಂತ್ರಜ್ಞರು.
    • ಟಾಟಾ ಬಂಧು: ಅಗತ್ಯವಿರುವಾಗ ಟಾಟಾ ಗುರುಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಎಲ್ಲಾ ಪಾಲುದಾರರನ್ನು-ಮೆಕ್ಯಾನಿಕ್​, ಡ್ರೈವರ್​ ಮತ್ತು ಫ್ಲೀಟ್ ಮಾಲೀಕರನ್ನು ಒಂದೇ ವೇದಿಕೆಯಲ್ಲಿ ತರುವ ವಿಶಿಷ್ಟ ಅಪ್ಲಿಕೇಷನ್.

    ಹೊಸದಾಗಿ ಪರಿಚಯಿಸಲಾದ ಪಿಕಪ್‍ಗಳ ಬಹುಮುಖಗಳು ಮತ್ತು ವೈಶಿಷ್ಟ್ಯಗಳಿಗೆ ಜೀವ ತುಂಬುವ ಭಾವನಾತ್ಮಕ ಕಥಾನಕದ ಮೂಲಕ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು 360 ಡಿಗ್ರಿ, ರಾಷ್ಟ್ರೀಯ ಮಲ್ಟಿಮೀಡಿಯಾ ಮಾರ್ಕೆಟಿಂಗ್ ಅಭಿಯಾನ ಪ್ರಾರಂಭಿಸಲಾಗಿದೆ. ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ತರುವ ಇಂಜಿನಿಯರಿಂಗ್ ಸಾಮರ್ಥ್ಯ, ಸೇವಾ ಪರಿಸರ ವ್ಯವಸ್ಥೆ ಮತ್ತು ಪ್ರವೇಶದ ಸುಲಭತೆಯೊಂದಿಗೆ ವಿವಿಧ ಪಿಕಪ್‍ಗಳ ಪ್ರಮುಖ ಗುಣಲಕ್ಷಣಗಳನ್ನು ಈ ಅಭಿಯಾನಗಳು ಪರಿಣಾಮಕಾರಿಯಾಗಿ ಎತ್ತಿ ತೋರಿಸುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts