More

    ಲಾರಿ ಚಾಲಕ-ಕ್ಲೀನರ್ ಟೆಸ್ಟ್ ಕುತೂಹಲ, ವರದಿ ಬರುವವರೆಗೂ ಜನತೆಗೆ ಆತಂಕ

    ತರೀಕೆರೆ: ಪಟ್ಟಣದ ಖಾಜಿ ಬೀದಿಯ ಲಾರಿ ಚಾಲಕ ಮತ್ತು ಕ್ಲೀನರ್ ಲಾರಿಯಲ್ಲಿ ಮಹಾರಾಷ್ಟ್ರದಿಂದ ಬರುವಾಗ ತೀರ್ಥಹಳ್ಳಿಯ ಕರೊನಾ ಸೋಂಕಿತನನ್ನು ಕರೆತಂದಿದ್ದರಿಂದ ಶುಕ್ರವಾರ ಸೀಲ್​ಡೌನ್ ಮಾಡಿದ್ದ ಬೀದಿಯನ್ನು ಶನಿವಾರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಆದರೆ ಇವರಿಬ್ಬರ ಗಂಟಲು ದ್ರವದ ಪರೀಕ್ಷಾ ವರದಿ ಬರುವವರೆಗೂ ಪಟ್ಟಣದ ಜನ ಆತಂಕದಲ್ಲಿ ಇರುವಂತಾಗಿದೆ.

    ತೀರ್ಥಹಳ್ಳಿಯ ಕರೊನಾ ಸೋಂಕಿತನನ್ನು ಲಾರಿಯಲ್ಲಿ ಕರೆತರುವಾಗ ಆತನೊಂದಿಗೆ ಸá-ದೀರ್ಘ ಕಾಲ ಸಂಪರ್ಕ ಹೊಂದಿದ್ದರು ಎಂಬ ಕಾರಣಕ್ಕೆ ಸೀಲ್​ಡೌನ್ ಮಾಡಲಾಗಿದ್ದ ಖಾಜಿ ಬೀದಿಯನ್ನು ಶನಿವಾರ ಪುರಸಭೆ ಅಧಿಕಾರಿಗಳು ತೆರವುಗೊಳಿಸಿ ಸೋಡಿಯಂ ಹೈಪೋಕ್ಲೋರೈಡ್ ರಾಸಾಯನಿಕ ದ್ರಾವಣ ಸಿಂಪಡಿಸಿದರು. ದುರ್ಗದ ಬೀದಿ, ಬಿಳಿಮಗ್ಗದ ಬೀದಿ, ಕುಂಬಾರ ಬೀದಿ, ಬ್ರಾಹ್ಮಣರ ಬೀದಿ, ಎಂ.ಜಿ.ರಸ್ತೆ ಸುತ್ತಮುತ್ತಲಿನ ಒಂದೂವರೆ ಕಿಮೀ ಪ್ರದೇಶದಲ್ಲಿ ಸುರಕ್ಷತಾ ಕವಚ ಧರಿಸಿದ ಪೌರಕಾರ್ವಿುಕರು ಔಷಧ ಸಿಂಪಡಿಸಿದರಲ್ಲದೆ ಎಲ್ಲ ಚರಂಡಿ ಸ್ವಚ್ಛಗೊಳಿಸಿದರು. ಜನ ಕೂಡ ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

    ಮಹಾರಾಷ್ಟ್ರದಿಂದ ಮೇ13ರಂದು ಬಂದ ಖಾಜಿ ಬೀದಿಯ ಲಾರಿ ಚಾಲಕ ಗುರುವಾರ ಸಂಜೆ ಸಂಬಂಧಿಕರ ಮಕ್ಕಳನ್ನು ಬೈಕ್​ನಲ್ಲಿ ಕೂರಿಸಿಕೊಂಡು ಪಟ್ಟಣದಲ್ಲಿ ಸಂಚರಿಸಿದ್ದ. ಅಷ್ಟು ಮಾತ್ರವಲ್ಲದೆ ಬಡಾವಣೆಯ ಅಂಗಡಿಯೊಂದಕ್ಕೆ ತೆರಳಿ ಸಿಗರೇಟ್ ಖರೀದಿಸಿದ್ದ. ಆದ್ದರಿಂದ ಆ ಅಂಗಡಿ ಬಾಗಿಲು ಮುಚ್ಚಿಸಲಾಗಿದೆ.

    ಲಾರಿ ಚಾಲಕ ಮತ್ತು ಕ್ಲೀನರ್ ಗಂಟಲು ದ್ರವ ಪರೀಕ್ಷಾ ವರದಿ ಮೇ 17ರಂದು ಬರಲಿದೆ. ಒಂದು ವೇಳೆ ಪಾಸಿಟಿವ್ ಬಂದರೆ ಜಿಲ್ಲೆಯ ಮೊದಲ ಪ್ರಕರಣ ಇದಾಗಲಿದ್ದು, ಹಸಿರು ವಲಯಕ್ಕೆ ಭಾರಿ ಆಪತ್ತು ಎದುರಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts