More

    ಕಾಫಿ ನಾಡು ಚಿಕ್ಕಮಗಳೂರು ಸದ್ಯ ಸೇಫ್

    ತರೀಕೆರೆ: ಎರಡು ಪ್ರಕರಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಸಂಭಾವ್ಯ ಕರೊನಾ ಸೋಂಕಿನ ಭೀತಿಯಿಂದ ಪಾರಾಗಿದೆ. ಕರೊನಾ ಸೋಂಕಿತನ ಸಂಪರ್ಕದಲ್ಲಿದ್ದ ತರೀಕೆರೆಯ ಲಾರಿ ಡ್ರೖೆವರ್ ಮತ್ತು ಕ್ಲೀನರ್ ಇಬ್ಬರಿಗೂ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ. ಮುಂಬೈನಿಂದ ಹಾಸನ ಜಿಲ್ಲೆ ಮಾರ್ಗವಾಗಿ ಚಿಕ್ಕಮಗಳೂರಿಗೆ ಬರುತ್ತಿದ್ದ ಯುವತಿಗೆ ಸೋಂಕು ಇರುವುದು ದೃಢಪಡುತ್ತಿದ್ದಂತೆ ಊರಿಗೆ ಕಳುಹಿಸದೆ ಹಾಸನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಭದ್ರಾವತಿಯಿಂದ ಮಹಾರಾಷ್ಟ್ರಕ್ಕೆ ಅಕ್ಕಿ ಚೀಲ ಸಾಗಿಸಿದ್ದ ತರೀಕೆರೆ ಲಾರಿ ಡ್ರೖೆವರ್ ಮೇ 11ರಂದು ವಾಪಸ್ ಬರುವ ಸಂದರ್ಭದಲ್ಲಿ ಪುಣೆಯಿಂದ ಹರಿಹರದವರೆಗೆ ತೀರ್ಥಹಳ್ಳಿ ತಾಲೂಕಿನ ಹಳ್ಳಿಬೈಲು ಗ್ರಾಮದ ವ್ಯಕ್ತಿಯನ್ನು ಕರೆತಂದಿದ್ದ. ಈ ವ್ಯಕ್ತಿ ಅತಿಹೆಚ್ಚು ಕರೊನಾ ಸೋಂಕು ಇರುವ ಮುಂಬೈನ ಧಾರಾವಿಯಿಂದ ಬಂದಿದ್ದ.

    ಊರಿಗೆ ಬಂದು ಎರಡು ದಿನಗಳ ನಂತರ ಈ ಹಳ್ಳಿಬೈಲಿನ ವ್ಯಕ್ತಿಗೆ ಸೋಂಕು ಇರುವುದು ದೃಢಪಡುತ್ತಿದ್ದಂತೆ ಈ ವ್ಯಕ್ತಿಯನ್ನು ಲಾರಿಯಲ್ಲಿ ಕರೆತಂದಿದ್ದ ತರೀಕೆರೆಯ ಡ್ರೖೆವರ್ ಮತ್ತು ಕ್ಲೀನರ್ ಇಬ್ಬರನ್ನೂ ಕ್ವಾರಂಟೈನ್ ಮಾಡಿ ಅವರ ಗಂಟಲು ದ್ರವವನ್ನು ಹಾಸನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.

    ಸೋಮವಾರ ಇಬ್ಬರ ವರದಿಯೂ ಬಂದಿದ್ದು, ಸೋಂಕು ತಗುಲಿಲ್ಲ ಎಂದು ಗೊತ್ತಾಗಿದೆ. ಇಬ್ಬರನ್ನೂ ಲಿಂಗದಹಳ್ಳಿ ಮೆಟ್ರಿಕ್​ಪೂರ್ವ ಹಾಸ್ಟೆಲ್​ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಮತ್ತೊಮ್ಮೆ (28ಕ್ಕೆ) ಅವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳಿಸಲು ನಿರ್ಧರಿಸಲಾಗಿದೆ. ಎರಡನೇ ಬಾರಿಯೂ ಅವರ ವರದಿ ನೆಗೆಟಿವ್ ಬಂದರೆ ಮನೆಗೆ ಕಳಿಸುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts