More

    ವಿರಾಟ್​ ಕೊಹ್ಲಿ ಹೆಸರಿನಲ್ಲಿದ್ದ ಅನಪೇಕ್ಷಿತ ದಾಖಲೆಯನ್ನು ಸರಿಗಟ್ಟಿದ ತಮೀಮ್​ ಇಕ್ಬಾಲ್

    ಢಾಕಾ: ಬಾಂಗ್ಲಾದೇಶ ತಂಡದ ಆರಂಭಿಕ ಬ್ಯಾಟ್ಸ್​ಮನ್​ ತಮೀಮ್​ ಇಕ್ಬಾಲ್​ ವಿರಾಟ್​ ಕೊಹ್ಲಿ ಅವರ ಹೆಸರಿನಲ್ಲಿದ್ದ ದಾಖಲೆ ಒಂದನ್ನು ಸರಿಗಟ್ಟುವ ಮೂಲಕ ಸುದ್ದಿಯಾಗಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​ ಫಿನಾಲೆ ಪಂದ್ಯ ಈ ಘಟನೆಗೆ ಸಾಕ್ಷಿಯಾಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

    ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ನಡೆದ ರಂಗ್​ಪುರ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ಫಾರ್ಚೂನ್ ಬಾರಿಶಾಲ್ ತಂಡದ ನಾಯಕ ತಮೀಮ್ ಇಕ್ಬಾಲ್ ಅನಗತ್ಯ ದಾಖಲೆ ಬರೆದಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ದಾಖಲೆ ಎಂಬುದು ವಿಶೇಷ.

    ಈ ಡಕ್​ ಔಟ್​​ನೊಂದಿಗೆ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿರುವ ಸಕ್ರಿಯ ಆಟಗಾರರಲ್ಲಿ ಬಾಂಗ್ಲಾದೇಶ್ ಕ್ರಿಕೆಟಿಗ ತಮೀಮ್ ಇಕ್ಬಾಲ್ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರು. ಒಟ್ಟು 580 ಇನ್ನಿಂಗ್ಸ್​ ಆಡಿರುವ ವಿರಾಟ್​ ಕೊಹ್ಲಿ 35ಬಾರಿ ಶೂನ್ಯ ಸುತ್ತಿದ್ದಾರೆ. ಇದುವರೆಗೆ 452 ಇನಿಂಗ್ಸ್ ಆಡಿರುವ ಬಾಂಗ್ಲಾ ತಂಡದ ಎಡಗೈ ದಾಂಡಿಗ ತಮೀಮ್ ಇಕ್ಬಾಲ್ ಒಟ್ಟು 36 ಬಾರಿ ಡಕ್​ ಔಟ್ ಆಗುವ ಮೂಲಕ ಈ ಕಳಪೆ ದಾಖಲೆಯಲ್ಲಿ ತಮೀಮ್ ಇಕ್ಬಾಲ್ ತಮ್ಮದಾಗಿಸಿಕೊಂಡಿದ್ದಾರೆ.

    ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಓರ್ವನನ್ನು ವಶಕ್ಕೆ ಪಡೆದ ಪೊಲೀಸರು

    ಇನ್ನು ಈ ಅನಪೇಕ್ಷಿತ ದಾಖಲೆಯ ಮೂರನೇ ಸ್ಥಾನದಲ್ಲಿರುವುದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ನಾಲ್ಕಣೇ ಸ್ಥಾನದಲ್ಲಿ ಇರುವುದು ಇಂಗ್ಲೆಂಡ್​ ಜಾನಿ ಬೇರ್​ಸ್ಟೋ ಇದ್ದಾರೆ. 497 ಇನಿಂಗ್ಸ್ ಆಡಿರುವ ಹಿಟ್​ಮ್ಯಾನ್ ಒಟ್ಟು 33 ಬಾರಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದಾರೆ. 338 ಇನಿಂಗ್ಸ್​ಗಳಲ್ಲಿ ಕಣಕ್ಕಿಳಿದಿರುವ ಬೇರ್​ಸ್ಟೋ 31 ಬಾರಿ ಶೂನ್ಯ ಸುತ್ತಿದ್ದಾರೆ.

    ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಕಳಪೆ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. 328 ಇನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ಮಾಡಿರುವ ಮುರಳೀಧರನ್ 59 ಬಾರಿ ಸೊನ್ನೆ ಸುತ್ತಿದ್ದಾರೆ. ಈ ಮೂಲಕ ಅತೀ ಹೆಚ್ಚು ಬಾರಿ ಡಕ್​ ಔಟ್ ಆದ ವಿಶ್ವ ದಾಖಲೆ ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts