More

    ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಓರ್ವನನ್ನು ವಶಕ್ಕೆ ಪಡೆದ ಪೊಲೀಸರು

    ಬೆಂಗಳೂರು: ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ್ದ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ಧಾರೆ.

    ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಶಂಕಿತನನ್ನು ವಶಕ್ಕೆ ಪಡೆಯಲಾಗಿದ್ದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಉನ್ನತ ಸುದ್ದಿ ಮೂಲಗಳು ತಿಳಿಸಿವೆ.

    ಕೆಫೆಯ ಒಳಗಡೆ ಸ್ಫೋಟಕವನ್ನು ಇರಿಸಿದ ಬಳಿಕ ಬಾಂಬರ್‌ ಬೈಕ್‌ನಲ್ಲಿ ತೆರಳಿದ್ದ. ಬೈಕ್‌ ನಂಬರ್‌ ಆಧರಿಸಿ ಮಾಲೀಕನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಕಪ್ಪು ಬ್ಯಾಗ್ ಬೆನ್ನಿಗೆ ಹಾಕಿಕೊಂಡು ಹೋಟೆಲಿಗೆ ಬಂದಿದ್ದ ಬಾಂಬರ್ಆಹಾರ ಸೇವಿಸಿದ ಬಳಿಕ ಹ್ಯಾಂಡ್‌ವಾಶ್‌ ಮಾಡುವ ಜಾಗದಲ್ಲಿ ಬ್ಯಾಗ್‌ ಇಟ್ಟು ಹೋಗಿದ್ದ. ಸಿಸಿಟಿವಿಯಲ್ಲಿಆರೋಪಿಯ ಪ್ರತಿಯೊಂದು ಚಲನವಲನ ಸೆರೆಯಾಗಿದ್ದು, ಪೊಲೀಸರು ಇದನ್ನು ಆಧಾರವಾಗಿರಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

    ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ನಿವೃತ್ತ ಐಎಎಸ್​ ಅಧಿಕಾರಿ ಕೆ. ಶಿವರಾಮ್

    ಎಷ್ಟೊತ್ತಿಗೆ ಏನಾಯ್ತು?

    • 12.00- 25 ರಿಂದ 30 ವರ್ಷದ ಯುವಕ ಸ್ಪೋಟಕವಿದ್ದ ಬ್ಯಾಗ್​ನೊಂದಿಗೆ ಹೋಟೆಲ್​ಗೆ ಪ್ರವೇಶ.
    • 12.15- ಕೌಂಟರ್​ನಲ್ಲಿ ಟೋಕನ್ ಪಡೆದು ರವೆ ಇಡ್ಲಿ ಸೇವನೆ. ಕೈ ತೊಳೆವ ಜಾಗದಲ್ಲಿ ಬ್ಯಾಗ್ ಇಟ್ಟು ಪರಾರಿ.
    • 12.55- ಸ್ಪೋಟ, 10 ಸೆಕೆಂಡ್ ಅಂತರದಲ್ಲಿ ಎರಡನೇ ಬಾರಿ ಸ್ಪೋಟ.
    • 1.00- ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಟ್ಟು, ಆಸ್ಪತ್ರೆ ಸಾಗಿಸಿದ ಗ್ರಾಹಕರು
    • 1.15- ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ದೌಡು
    • 1.30- ವೈಟ್​ಫೀಲ್ಡ್ ಡಿಸಿಪಿ ಭೇಟಿ
    • 2.10- ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಆಗಮನ
    • 2.50- ಎಫ್​ಎಸ್​ಎಲ್ ತಜ್ಞರಿಂದ ಸಾಕ್ಷ್ಯ ಸಂಗ್ರಹ.
    • 3.30- ನಗರ ಪೊಲೀಸ್ ಆಯುಕ್ತರ, ಕೇಂದ್ರ ತನಿಖಾ ತಂಡಗಳು ಆಗಮನ
    • 4.00- ಡಿಜಿಪಿ ಡಾ.ಅಲೋಕ್ ಮೋಹನ್ ಸ್ಥಳ ಪರಿಶೀಲನೆ
    • 7.45- ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಭೇಟಿ
    • 9.00- ರಾಜ್ಯಪಾಲರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts