More

    ವಿಷವಿಕ್ಕಿ ಹುಲಿ ಕೊಂದ ದುರುಳರು? ಹೆತ್ತಮ್ಮನನ್ನು ಕಳೆದುಕೊಂಡ ಮರಿಗಳ ರೋದನ

    ಚಾಮರಾಜನಗರ: ದೇಶಾದ್ಯಂತ ಕೋಲಾಹಲ ಎಬ್ಬಿಸಿದ್ದ ಕೇರಳದ ಗರ್ಭಿಣಿ ಆನೆ ಕೊಲೆ ಪ್ರಕರಣ ಜನಮಾನಸದಲ್ಲಿ ಮರೆಯಾಗುವ ಮುನ್ನವೇ ದುರುಳರು ಗರ್ಭಿಣಿ ಕಾಡೆಮ್ಮೆಯನ್ನು ಬೇಟೆಯಾಡಿ ವಿಕೃತಿ ಮೆರೆದಿದ್ದರು. ಇದೀಗ ಇಂತಹದ್ದೇ ಮತ್ತೊಂದು ಆಘಾತಕಾರಿ ಘಟನೆ ತಮಿಳುನಾಡಿನ ಮಧುಮಲೈನಲ್ಲಿ ಸಂಭವಿಸಿದ್ದು, ಹುಲಿ ಮತ್ತು ಐದು ಕೆನ್ನಾಯಿಗಳು ಮೃತಪಟ್ಟಿವೆ.

    ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ಮತ್ತು ಐದು ಕೆನ್ನಾಯಿಗಳು ಮೃತಪಟ್ಟಿದ್ದು, ಕಾಡುಹಂದಿ ಮಾಂಸಕ್ಕೆ ವಿಷವಿಕ್ಕಿರುವ ಶಂಕೆ ವ್ಯಕ್ತವಾಗಿದೆ. ಹುಲಿ ಸತ್ತ ಜಾಗದಲ್ಲೇ ಎರಡು ಹುಲಿಮರಿಗಳನ್ನು ರಕ್ಷಣೆ ಮಾಡಲಾಗಿದ್ದು, ಹೆತ್ತಮ್ಮನನ್ನು ಕಳೆದುಕೊಂಡ ಮರಿಗಳ ಮೂಖರೋದನ ಮನಕಲಕುವಂತಿದೆ.

    ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ಸಿಂಗಾರಾ ಅರಣ್ಯ ವ್ಯಾಪ್ತಿಯಲ್ಲಿ ಕೆಲ ದಿನಗಳ‌ ಹಿಂದೆ ಹುಲಿ ಸತ್ತ ಜಾಗದಲ್ಲೇ 5 ಕೆನ್ನಾಯಿಗಳು ವಿಷ ಪ್ರಾಷನದಿಂದ ಮೃತಪಟ್ಟಿವೆ ಎನ್ನಲಾಗಿದೆ. ಇದೀಗ ಹುಲಿ ಸಾವಿನ‌ ಸುತ್ತ ಅನುಮಾನ ಹುತ್ತ ಬೆಳೆದಿದೆ.

    ಸೂಕ್ತ ತನಿಖೆ ನಡೆಸುವಂತೆ ಯುನೈಟೆಡ್ ಕನ್ಸರ್​ವೇಶನ್ ಮೂವ್​ಮೆಂಟ್ ವತಿಯಿಂದ ಪ್ರಧಾನಿಗೆ ಟ್ವೀಟ್ ಮಾಡಲಾಗಿದೆ.

    ಮಾಂಸದ ಹಸಿವಿನಿಂದ ಗರ್ಭಿಣಿ ಕಾಡೆಮ್ಮೆ ಹತ್ಯೆ, ಐವರ ಬಂಧನ

    ಆನೆಗಳನ್ನು ಹೀಗೆ ದಾರುಣವಾಗಿ ಕೊಲ್ಲುವುದು ಕೇರಳದಲ್ಲಿ ಮಾಮೂಲಿಯಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts