More

    ಸತತ 2ನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿದ ತಮಿಳುನಾಡು ತಂಡ

    ಅಹಮದಾಬಾದ್: ಅನುಭವಿ ಬ್ಯಾಟ್ಸ್‌ಮನ್ ಅರುಣ್ ಕಾರ್ತಿಕ್ (89*ರನ್, 54 ಎಸೆತ, 9 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಹಾಲಿ ರನ್ನರ್‌ಅಪ್ ತಮಿಳುನಾಡು ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಸತತ 2ನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿತು. ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಸಾರಥ್ಯದ ತಮಿಳುನಾಡು ತಂಡ 7 ವಿಕೆಟ್‌ಗಳಿಂದ ರಾಜಸ್ಥಾನ ತಂಡವನ್ನು ಮಣಿಸಿತು.

    ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ತಂಡಕ್ಕೆ 7 ವಿಕೆಟ್ ಜಯ

    ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ, ನಾಯಕ ಅಶೋಕ್ ಮೆನಾರಿಯಾ (51ರನ್, 32 ಎಸೆತ, 2 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್‌ಗೆ 154 ರನ್‌ಗಳಿಸಿದರೆ, ಪ್ರತಿಯಾಗಿ ತಮಿಳುನಾಡು ತಂಡ 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 158 ರನ್‌ಗಳಿಸಿ ಜಯದ ನಗೆ ಬೀರಿತು.

    ರಾಜಸ್ಥಾನ: 9 ವಿಕೆಟ್‌ಗೆ 154 (ಆದಿತ್ಯ ಎನ್ ಗರ್ವಾಲ್ 29, ಆಶೋಕ್ ಮೆನಾರಿಯಾ 51, ಅರ್ಜಿತ್ ಗುಪ್ತಾ 45, ಎಂ.ಮೊಹಮದ್ 24ಕ್ಕೆ 4, ಸಾಯಿ ಕಿಶೋರ್ 16ಕ್ಕೆ 2, ಸೋನು ಯಾದವ್ 27ಕ್ಕೆ 1, ಅಪರಾಜಿತ್ 20ಕ್ಕೆ 1, ಎಂ.ಅಶ್ವಿನ್ 35ಕ್ಕೆ 1), ತಮಿಳುನಾಡು: 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 158 (ಎನ್.ಜಗದೀಶನ್ 28, ಅರುಣ್ ಕಾರ್ತಿಕ್ 89*, ದಿನೇಶ್ ಕಾರ್ತಿಕ್ 26*, ತನ್ವೀರ್ ಉಲ್ ಹಕ್ 22ಕ್ಕೆ 1, ಅಂಕಿತ್ ಚೌಧರಿ 29ಕ್ಕೆ 1, ರವಿ ಬಿಷ್ಣೋಯಿ 32ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts