More

    ಕೋವಿಡ್​ ವಿರುದ್ಧ ಹೋರಾಟದ ನಡುವೆ ಆರ್ಥಿಕ ಚೇತನ ಹೆಚ್ಚಿಸಿಕೊಳ್ಳಲು ತಮಿಳುನಾಡು ಯತ್ನ, ಚೀನಾದಿಂದ ಹೊರಹೋಗುತ್ತಿರುವ ಕಂಪನಿಗಳ ಮೇಲೆ ಕಣ್ಣು

    ಚೆನ್ನೈ: ತನ್ನ ರಾಜ್ಯದಲ್ಲಿ ಉಂಟಾಗಿರುವ ಕರೊನಾ ಸೋಂಕಿನ ಸಮಸ್ಯೆಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಪ್ರಯತ್ನಮುಖಿಯಾಗಿರುವ ತಮಿಳುನಾಡು ಆರ್ಥಿಕವಾಗಿ ಬಲಾಢ್ಯವಾಗುವ ಪ್ರಯತ್ನವನ್ನೂ ಜಾರಿಯಲ್ಲಿಟ್ಟಿದೆ. ಇದಕ್ಕಾಗಿ ಅದು ಕರೊನಾ ಸೋಂಕಿನ ಸಮಸ್ಯೆಯಿಂದ ಚೀನಾ ಮತ್ತಿತರ ರಾಷ್ಟ್ರಗಳಿಂದ ಹೊರಹೋಗುತ್ತಿರುವ ಕಂಪನಿಗಳ ಬೇಟೆಗೆ ಅದು ಮುಂದಾಗಿದೆ.

    ಇದಕ್ಕಾಗಿ ಅದು ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯಲ್ಲಿ ಚೀನಾದಿಂದ ಹೊರಹೋಗಲು ನಿರ್ಧರಿಸಿರುವ ಜಪಾನ್​ ಮತ್ತು ದಕ್ಷಿಣ ಕೊರಿಯಾ ಸೇರಿ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಇರಲಿದ್ದಾರೆ. ಇವರೆಲ್ಲರೂ ಸೇರಿ ಯಾವೆಲ್ಲ ಕಂಪನಿಗಳನ್ನು ತಮಿಳುನಾಡಿನತ್ತ ಆಕರ್ಷಿಸಬಹುದು ಎಂಬ ಬಗ್ಗೆ ಅಧ್ಯಯನ ನಡೆಸಿ, ಇನ್ನೊಂದು ತಿಂಗಳಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಲಿದ್ದಾರೆ.

    ಒಂದು ಮೂಲದ ಪ್ರಕಾರ ಜಪಾನ್​, ದಕ್ಷಿಣ ಕೊರಿಯಾ, ತೈವಾನ್​, ಅಮೆರಿಕ ಮತ್ತು ಸಿಂಗಾಪುರ ರಾಷ್ಟ್ರಗಳು ಚೀನಾ ಬದಲು ಭಾರತದಿಂದ ತಮ್ಮ ವಿತರಣಾ ಜಾಲವನ್ನು ನಿರ್ವಹಿಸಲು ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ ಆಯಾ ರಾಷ್ಟ್ರಗಳ ಕಂಪನಿಗಳನ್ನು ತಮ್ಮತ್ತ ಆಕರ್ಷಿಸುವುದು ತಮಿಳುನಾಡಿನ ನಿರ್ಧಾರವಾಗಿದೆ.

    ಈ ಎಲ್ಲ ರಾಷ್ಟ್ರಗಳ ಪಾಲಿಗೆ ಬಂಡವಾಳ ಹೂಡಿಕೆಗೆ ತಮಿಳುನಾಡು ಹೆಚ್ಚು ಪ್ರಶಸ್ತವಾದ ರಾಜ್ಯ ಎಂಬ ನಂಬಿಕೆ ಬೆಳೆಸಿಕೊಂಡಿವೆ. ಆದ್ದರಿಂದ ಈ ಕಂಪನಿಗಳು ತಮಿಳುನಾಡಿನಲ್ಲಿ ಬಂಡವಾಳ ಹೂಡಿಕೆ ಮಾಡುವುದು ಬಹುತೇಕ ನಿಶ್ಚಿತವಾಗಿದೆ ಎಂದು ತಮಿಳುನಾಡು ಸರ್ಕಾರದ ಒಂದು ಆದೇಶದಲ್ಲಿ ತಿಳಿಸಲಾಗಿದೆ.

    ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಅಂತಾರಾಜ್ಯ ಬಸ್​ ಸಂಚಾರ ಆರಂಭ, ಸಿಲುಕಿಕೊಂಡಿದ್ದ ವಲಸಿಗರಿಗೆ ಅನುಕೂಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts