More

    ಜನರ ಗಮನ ಸೆಳೆದ ತಮನ್ನಾ-ವಿಜಯ್ ಉಡುಗೆಗಳು; ಟೇಬಲ್ ಕ್ಲಾಥ್ ಧರಿಸಿ ಬಂದ್ರಾ ಮಿಲ್ಕಿ ಬ್ಯೂಟಿ?

    ಮುಂಬೈ: ಬಿ ಟೌನ್‌ನ ಜನಪ್ರಿಯ ಪ್ರೇಮ ಪಕ್ಷಿಗಳಾದ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ತಮನ್ನಾ ಭಾಟಿಯಾ ವಿಜಯ್ ಅವರ ಮುಂಬರುವ ಚಿತ್ರ “ಮರ್ಡರ್ ಮುಬಾರಕ್ ” ವಿಶೇಷ ಪ್ರದರ್ಶನದಲ್ಲಿ ಹಾಜರಾಗಿದ್ದರು. ಈ ಸಮಯದಲ್ಲಿ ತಮನ್ನಾ-ವಿಜಯ್ ಜನರ ಗಮನ ಸೆಳೆದರು. ವಿಶೇಷವಾಗಿ ಅವರಿಬ್ಬರ ಉಡುಗೆಗಳು. ಅದರಲ್ಲೂ ತಮನ್ನಾ ಅವರ ಸ್ಟೈಲಿಶ್ ಅವತಾರ ಸದ್ಯ ಸುದ್ದಿಯಲ್ಲಿದೆ.

    ಇಷ್ಟೆಲ್ಲಾ ಸೆಲೆಬ್ರಿಟಿಗಳ ನಡುವೆ ಎಲ್ಲರ ಕಣ್ಣು ತಮನ್ನಾ ಮೇಲೆ ನೆಟ್ಟಾಗ ಏನಾದ್ರೂ ಸ್ಪೆಷಲ್ ಇರಬೇಕು ಅಂತ ಅರ್ಥವಲ್ಲವೇ, ಹೌದು, ತಮನ್ನಾ ವಿಶೇಷ ಉಡುಗೆ ಧರಿಸಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಿಳಿ ಬಣ್ಣದ ನೆಟ್ ಬಾಡಿಕಾನ್ ಡ್ರೆಸ್ ಧರಿಸಿದ್ದರು ತಮನ್ನಾ. ಡ್ರೆಸ್ ಸಹ ನೋಡಲು ಸಾಕಷ್ಟು ಸ್ಟೈಲಿಶ್ ಆಗಿತ್ತು. ಅದರ ಮೇಲೆ ಬಿಳಿ ಜಾಕೆಟ್ ಧರಿಸಲಾಗಿತ್ತು. ಒಂದು ವೇಳೆ ಆಕೆ ದೊಡ್ಡ ಗಾತ್ರದ ಜಾಕೆಟ್ ಧರಿಸದಿದ್ದರೆ ಮುಜುಗರ ಅನುಭವಿಸಬೇಕಾಗಿತ್ತು. ಈಗ ಬಳಕೆದಾರರು ನಟಿಯ ಈ ಡ್ರೆಸ್ ಬಗ್ಗೆ ಸದ್ಯ ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

    ಓರ್ವ ಬಳಕೆದಾರರು ತಮನ್ನಾ ಅವರ ಈ ಡಿಸೈನರ್ ಉಡುಪನ್ನು ಮೇಜಿನ ಮೇಲೆ ಬಳಸುವ ಬಟ್ಟೆಯೊಂದಿಗೆ ಹೋಲಿಸಿದ್ದಾರೆ. ಮತ್ತೆ ಕೆಲವರು ‘ಏನಾದರೂ ಧರಿಸಿ ಹೊರಗೆ ಹೋಗಿ’, ‘ಇಷ್ಟು ಹಣವಿದ್ದರೂ ಡ್ರೆಸ್ ಹರಿದಿದೆ’ ‘ಇವರ ಸ್ಟೈಲಿಸ್ಟ್ ಯಾರು’?, ‘ದಯವಿಟ್ಟು ಸರೋಜಿನಿ ಮಾರ್ಕೆಟ್‌ನಿಂದ ಸ್ವಲ್ಪ ಬಟ್ಟೆ ತಂದುಕೊಡಿ’ ‘ಡ್ರೆಸ್ ಅನ್ನು ಫೆವಿಕಾಲ್​​​​​​​​​ನೊಂದಿಗೆ ಅಂಟಿಸಲಾಗಿದೆಯೇ?’ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.


    ತಮನ್ನಾ ಬಟ್ಟೆಯ ಹೊರತಾಗಿ, ಜನರು ಆಕೆಯ ಗೆಳೆಯನನ್ನೂ ಟ್ರೋಲ್ ಮಾಡಿದ್ದಾರೆ. ವಿಜಯ್ ವರ್ಮಾ ತನ್ನ ಗೆಳತಿಯೊಂದಿಗೆ ಇರುವುದನ್ನು ನೋಡಿದ ಟ್ರೋಲರ್ಸ್, ‘ಲಂಗೂರ್ ಕೈಯಲ್ಲಿ ದ್ರಾಕ್ಷಿ ಇದೆ’, ‘ವಿಜಯ್ ಕೂಡ ಈಗ ತಮನ್ನಾ ಎಂದು ಭಾವಿಸಲು ಪ್ರಾರಂಭಿಸಿದ್ದಾರೆ’ ‘ಬಾಯ್‌ಫ್ರೆಂಡ್‌ಗಿಂತ ಅಂಗರಕ್ಷಕನಂತೆ ಕಾಣುತ್ತಾನೆ’. ‘ಇವರು ಎರಡನೇ ರಣವೀರ್ ಸಿಂಗ್’ ಎಂದೆಲ್ಲಾ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

    ಎರಡು ಬಾರಿ ಪ್ರೀತಿಯಲ್ಲಿ ಮೋಸ ಹೋದ ದಕ್ಷಿಣದ ನಟಿ, ಕೊನೆಗೆ ಸಹಾಯಕ ನಿರ್ದೇಶಕ ಇದಕ್ಕೋಸ್ಕರ ಮದುವೆಯಾದದ್ದು ದುರಂತ!

    ‘ಕೇಜ್ರಿವಾಲ್ ಯಾವತ್ತೂ ಸೂಟು ಬೂಟು ಹಾಕಿಕೊಂಡಿಲ್ಲ’ ಅಂತ ದೆಹಲಿ ಸಿಎಂ ಪರ ವಕೀಲರು ಕೋರ್ಟ್​​​​ನಲ್ಲಿ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts