More

    ಲಕ್ಕವಳ್ಳಿಯಲ್ಲಿ ತಾಲೂಕು ಜಾನಪದ ಸಮ್ಮೇಳನ

    ತರೀಕೆರೆ: ತಾಲೂಕು ಮಟ್ಟದ ಜಾನಪದ ಸಮ್ಮೇಳನವನ್ನು ೆ.4ರಂದು ಲಕ್ಕವಳ್ಳಿಯ ಗಣಪತಿ ಪೆಂಡಾಲ್‌ನಲ್ಲಿ ಆಯೋಜಿಸಲು ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದ ತೀರ್ಮಾಣ ಕೈಗೊಳ್ಳಲಾಯಿತು.

    ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಜಾನಪದ, ಸಂಸ್ಕೃತಿ, ಕಲೆ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿ ಅರಿವು ಮೂಡಿಸುವ ಅನಿವಾರ್ಯವಿದೆ. ತಾಲೂಕಿನಲ್ಲಿ ಹಲವು ಜಾನಪದ ಕಲಾವಿದರಿದ್ದು, ಅವರಿಂದ ಕಲೆ ಜೀವಂತವಿರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
    ತಾಲೂಕಿನಲ್ಲಿ ಆಯೋಜಿಸಲು ಉದ್ದೇಶಿಸಿರುವ ಸಮ್ಮೇಳನ ಅರ್ಥಪೂರ್ಣವಾಗಿಸಲು ಹಿರಿಯ ಜಾನಪದ ಕಲಾ ಸಾಧಕರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು. ಮೆರವಣಿಗೆ ಮಾಡಿ ಸನ್ಮಾನಿಸಲಾಗುವುದು. ಭಾರತೀಯ ಎಲ್ಲ ಕಲೆಗಳ ತಾಯಿಬೇರು ಜಾನಪದ. ಅನ್ಯ ಸಂಸ್ಕೃತಿಯ ದಾಳಿಯಿಂದ ನಲುಗುತ್ತಿರುವ ಜಾನಪದವನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.
    ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಆರ್.ನಾಗೇಶ್ ಮಾತನಾಡಿ, ತಾಲೂಕಿನಲ್ಲಿರುವ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಸಮ್ಮೇಳನ ಉತ್ತಮ ವೇದಿಕೆ. ಸಮ್ಮೇಳನದಲ್ಲಿ ಯುವ ಸಾಹಿತಿಗಳು, ಹಾಡುಗಾರರು, ನೃತ್ಯಗಾರರು, ಕೋಲಾಟ, ವೀರಗಾಸೆ, ಡೊಳ್ಳು, ಕಂಸಾಳೆ ಭಜನೆ ಕಲಾವಿದರಿಗೆ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಮಾಡಿಕೊಡಲಾಗುವುದು. ದಾನಿಗಳು, ಕಲಾಸಕ್ತರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
    ತಾಪಂ ಮಾಜಿ ಅಧ್ಯಕ್ಷ ಅನ್ಬು, ಜಿಪಂ ಮಾಜಿ ಸದಸ್ಯ ರಾಮು, ಪ್ರಮುಖರಾದ ಸೀನೋಜಿ ರಾವ್, ರಮೇಶ್, ಕೆಂಪೇಗೌಡ, ದೇವರಾಜ್, ಮೋಹನ್‌ಕುಮಾರ್, ಸಂಧ್ಯಾ ದತ್ತಾತ್ರಿ, ನಂದಕುಮಾರ್, ಎಲ್.ಟಿ.ಹೇಮಣ್ಣ, ಚಕ್ರವರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts