More

    ಯಲ್ಲಪ್ಪ ಸುಬೇದಾರ ಅರಕೇರಾ ತಹಸೀಲ್ದಾರ್

    ಅರಕೇರಾ: ನೂತನ ತಾಲೂಕು ಕೇಂದ್ರ ಅರಕೇರಾಕ್ಕೆ ಯಲ್ಲಪ್ಪ ಸುಬೇದಾರ ತಹಸೀಲ್ದಾರ್ ಆಗಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.

    ತಾಲೂಕಿನ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರಿಗೆ ಕಂದಾಯ ಸೇವೆಗಳು ಲಭ್ಯವಾಗಲು ಹಾಗೂ ದಾಖಲೆಗಳ ಬದಲಾವಣೆಗೆ 6ರಿಂದ 8 ತಿಂಗಳು ಕಾಲಾವಕಾಶ ಬೇಕಾಗುತ್ತದೆ. ತಾಲೂಕು ಕಚೇರಿಗೆ 28 ಸಿಬ್ಬಂದಿ ಹಾಗೂ ದಾಖಲೆಗಳ ಸಂಗ್ರಹಕ್ಕೆ ಕಟ್ಟಡದ ಅವಶ್ಯ ಇದೆ. ತಾತ್ಕಾಲಿಕವಾಗಿ ಗ್ರಾಮದ ಡಿಪ್ಲೊಮಾ ಕಾಲೇಜು ಕಟ್ಟಡದಲ್ಲಿ ತಹಸೀಲ್ದಾರ್ ಕಚೇರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಯಲ್ಲಪ್ಪ ಸುಬೇದಾರ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.

    ಉಪತಹಸೀಲ್ದಾರ್ ಮನೋಹರ ನಾಯಕ, ಕಂದಾಯ ನಿರೀಕ್ಷಕ ಬಸವರಾಜ ಹೂನುರು, ಗ್ರಾಮ ಲೆಕ್ಕಾಧಿಕಾರಿಗಳಾದ ಮಲ್ಲಪ್ಪ ಜಾಗಟಗಲ್, ಅರುಣ, ಸಿಬ್ಬಂದಿ ಕನಕರೆಡ್ಡಿ, ವೆಂಕಟೇಶ, ಮೌನೇಶ ಛಲವಾದಿ, ಕರಿಯಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts