More

    ಮಾತು ಉಳಿಸಿಕೊಳ್ಳಲು ಕಾಂಗ್ರೆಸ್ ತೊರೆದೆ

    ತೆಲಸಂಗ/ಕೊಟ್ಟಲಗಿ: ನೀರಾವರಿ ವಿಷಯದಲ್ಲಿ ಈ ಹಿಂದೆ ಎರಡೂ ಪಕ್ಷದವರು ನಿಮಗೆ ಮೋಸ ಮಾಡಿದ್ದಾರೆ. ನಾನು ಮತ್ತು ಮಹೇಶ ಕುಮಠಳ್ಳಿ ಸತ್ಯ ಮಾತನಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

    ಮಂಗಳವಾರ ಕೊಟ್ಟಲಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, 2018ರ ಚುನಾವಣೆಯಲ್ಲಿ ಮತಕ್ಷೇತ್ರದ ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದೆ. ಆದರೆ, ಭರವಸೆ ಈಡೇರಿಸುವ ಉದ್ದೇಶದಿಂದ ಸಮ್ಮಿಶ್ರ ಸರ್ಕಾರ ತೊರೆದು ಬಿಜೆಪಿ ಸೇರಿದೆ. ಸ್ವಾರ್ಥಕ್ಕಾಗಿ ನಾನು ಪಕ್ಷ ತೊರೆ ದಿಲ್ಲ. ರೈತರಿಗೆ ಕೊಟ್ಟ ಮಾತು ಉಳಿಸಿ ಕೊಳ್ಳಲು ನಾವು ಕಾಂಗ್ರೆಸ್‌ಪಕ್ಷ ಬಿಟ್ಟು ಹೊರಬಂದೆವು ಎಂದರು.

    ರೈತರ ಅಭಿವೃದ್ಧಿ ಉದ್ದೇಶ: 2018ರ ವಿಧಾನಸಭೆ ಚುನಾವಣೆ ಯಲ್ಲಿ ಅಥಣಿ ಮತ್ತು ಕಾಗವಾಡ ಕ್ಷೇತ್ರದ ಅರ್ಭ್ಯಥಿಗಳ ಪರವಾಗಿ ಪ್ರಚಾರಕ್ಕೆ ಬಂದಾಗ, ರೈತರು ನೀರಿಗಾಗಿ ಪರಿತಪಿಸುತ್ತಿದ್ದನ್ನು ಕಂಡು ಅಂದೇ ನಾನು ರೈತರಿಗಾಗಿ ಏನಾದರೂ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ. ಅದು ಈಗ ಸಾಕಾರಗೊಳ್ಳುತ್ತಿದೆ. ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದ ಅನುದಾನ ತಂದಿದ್ದೇನೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು. ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, 5 ಹೆಕ್ಟೇರ್ ಭೂಮಿಗೊಂದು ಕೃಷಿ ಹೊಂಡ ಮಾಡಿ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕಾರ್ಯ ಆರಂಭವಾಗಲಿದೆ. ರಮೇಶ ಜಾರಕಿಹೊಳಿ ಸಹಕಾರದಿಂದ ಸದ್ಯ ಅಥಣಿ ತಾಲೂಕು ನೀರಾವರಿ ಸೌಲಭ್ಯ ಪಡೆದಿದೆ. ಭವಿಷ್ಯದ ದಿನದಲ್ಲಿ ಹೆಚ್ಚಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಪಂ ಸದಸ್ಯರಾದ ಗುರಪ್ಪ ದಾಶ್ಯಾಳ, ಸಿದ್ದಪ್ಪ ಮುದಕಣ್ಣವರ, ಅಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts