More

    ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಿ: ರೇಣುಕಾ ಕಲ್ಬುರ್ಗಿ

    ತಾಳಿಕೋಟೆ: ಜೀಜಾಬಾಯಿ ಕಲಿಕೆಯ ಅನುಗುಣವಾಗಿ ಬೆಳೆದು ಹಿಂದುವಿ ಸಾಮ್ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜರಿಗೆ ತಾಯಿಯ ಸ್ಪೂರ್ತಿಯೇ ಮೇಲ್ಮಟ್ಟಕ್ಕೆ ತರಲು ಕಾರಣವಾಯಿತ್ತೆಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಕಲ್ಬುರ್ಗಿ ಹೇಳಿದರು.

    ಸ್ಥಳೀಯ ಕುಮಾರೇಶ್ವರ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತಿ, ಶಿಕ್ಷಕ ಮಾತನಾಡಿ, ಮಕ್ಕಳಲ್ಲಿ ಶಿಸ್ತು, ಸಮಯ ಪಾಲನೆ ಅನುಸರಿಸಲು ತಿಳಿಹೇಳಿದರು. ಪಾಲಕರು ಮಕ್ಕಳಲ್ಲಿ ಧೈರ್ಯ ತುಂಬಬೇಕು ಎಂದರು.

    ಸಂಗಮೇಶ ಶರಣರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್.ಎಸ್. ಪಾಟೀಲ(ಕೂಚಬಾಳ), ಆರ್.ಬಿ. ದಮ್ಮೂರಮಠ ಮಾತನಾಡಿದರು. ಮುಖ್ಯೋಪಾಧ್ಯಾಯ ಅರ್ಜುನ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಾಸ್ಗತೇಶ್ವರ ಮಠದ ಸಂಗಯ್ಯ ವಿರಕ್ತಮಠ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಸಿಒ ಆರ್.ಎಸ್.ಸಿಕಳವಾಡಿ, ಸಿಆರ್‌ಪಿ ಸುರೇಶ ವಾಲಿಕಾರ, ಪ್ರತಿಭಾ ಆಕಡೆಮಿ ನಿರ್ದೇಶಕರ ಶ್ರೀಕಾಂತ ಪತ್ತಾರ, ಪುರಸಭೆ ಸದಸ್ಯ ಪರಶುರಾಮ ತಂಗಡಗಿ, ಪತ್ರಕರ್ತ ಜಿ.ಟಿ. ಘೋರ್ಪಡೆ, ಪುರಸಭೆ ಮಾಜಿ ಸದಸ್ಯ ಮಾನಸಿಂಗ್ ಕೊಕಟನೂರ ಮತ್ತಿತರರು ಉಪಸ್ಥಿತರಿದ್ದರು.

    ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಿದ್ದನಗೌಡ ಚೌದ್ರಿ ಸ್ವಾಗತಿಸಿದರು. ಜ್ಯೋತಿ ನಾಯಕ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts