More

    ಪಾಕ್​ ಗಡಿಯ ಪ್ರಮುಖ ಪಟ್ಟಣವನ್ನು ಆಕ್ರಮಿಸಿಕೊಂಡ ತಾಲಿಬಾನ್

    ಇಸ್ಲಮಾಬಾದ್​ : ಆಫ್ಘಾನಿಸ್ತಾನದ ಹಲವು ಪಟ್ಟಣಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ತಾಲಿಬಾನ್ ಬುಧವಾರದಂದು ಕಂದಹಾರ್​ ಪ್ರಾಂತ್ಯದಲ್ಲಿನ ಪ್ರಮುಖ ಪಟ್ಟಣವೊಂದನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ವೇಶ್​ ಎಂಬ ಈ ಪಟ್ಟಣವು ಪಾಕಿಸ್ತಾನದ ಬಲೋಚಿಸ್ತಾನ್ ಪ್ರಾಂತ್ಯದ ಗಡಿಯಲ್ಲಿರುವ ಸ್ಪಿನ್ ಬೋಲ್ಡಕ್​ ಬಾರ್ಡರ್​ ಕ್ರಾಸಿಂಗ್ ಪ್ರದೇಶವಾಗಿದೆ ಎನ್ನಲಾಗಿದೆ.​

    ಈ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಜಹೀದ್​ ಹಫೀಜ್ ಚೌಧ್ರಿ ಇಂದು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವು, ಚಮನ್​-ಸ್ಪಿನ್​ ಬೋಲ್ಡಕ್​​ ಬಾರ್ಡರ್​ ಕ್ರಾಸಿಂಗ್​ಅನ್ನು ವ್ಯಾಪಾರವಹಿವಾಟು ಅಥವಾ ಯಾವುದೇ ಸಂಚಾರ ನಡೆಯದಂತೆ ಮುಚ್ಚಿದೆ ಎನ್ನಲಾಗಿದೆ. ಇದು ಕಂದಹಾರ್​ ನಗರಕ್ಕೆ ಪಾಕಿಸ್ತಾನದ ಪೋರ್ಟ್​ಗಳೆಡೆಗೆ ಸಂಪರ್ಕ ನೀಡುವ ಎರಡನೇ ಮುಖ್ಯ ಬಾರ್ಡರ್​ ಪೋಸ್ಟ್​ ಆಗಿದೆ. ಅಫ್ಘನ್ ಸರ್ಕಾರದ ಅಂಕಿಅಂಶಗಳ ಪ್ರಕಾರ ಪ್ರತಿದಿನ ಈ ಗಡಿಪ್ರದೇಶದಲ್ಲಿ ಸುಮಾರು 900 ಟ್ರಕ್​ಗಳ ಸಂಚಾರವಿರುತ್ತಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ತಾಲಿಬಾನ್​ ಆತಂಕ: ಕಂದಹಾರ್​ನ ಭಾರತೀಯ ದೂತಾವಾಸ ತೆರವು

    ಅಫ್ಘಾನಿಸ್ತಾನದಿಂದ ಅಮೆರಿಕದ ಸೇನೆಯನ್ನು ಹಿಂಪಡೆಯುವ ನಿರ್ಧಾರದ ನಂತರ ದೇಶಾದ್ಯಂತ ತಾಲಿಬಾನ್​ ದಾಳಿಗಳು ಹೆಚ್ಚಿವೆ. ಸುರಕ್ಷತೆಯ ದೃಷ್ಟಿಯಿಂದ ಕೆಲವು ದಿನಗಳ ಹಿಂದೆ, ಭಾರತ ಸರ್ಕಾರವು, ಕಂದಹಾರ್​ನಲ್ಲಿರುವ ತನ್ನ ದೂತಾವಾಸದ ಸುಮಾರು 50 ಡಿಪ್ಲೋಮಾಟ್​ಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ವಾಪಸ್​ ಕರೆಸಿಕೊಂಡಿತ್ತು. (ಏಜೆನ್ಸೀಸ್)

    ಸಿಧು v/s ಸಿಎಂ : ಪಂಜಾಬ್​ ಕಾಂಗ್ರೆಸ್​ನ ಅಂತಃಕಲಹಕ್ಕೆ ಹೊಸ ಪರಿಹಾರ!

    ಪಾಕಿಸ್ತಾನಕ್ಕೆ ಸೇನೆಯ ಮಾಹಿತಿ ನೀಡುತ್ತಿದ್ದ ಐಎಸ್​ಐ ಏಜೆಂಟ್​ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts