More

    VIDEO| ‘ತೇರಿ ಮೇರಿ ಕಹಾನಿ’ ಹಾಡಿಗೆ ಮಾಲೀಕನೊಂದಿಗೆ ಧ್ವನಿಗೂಡಿಸಿದ ಶ್ವಾನ: ವಿಡಿಯೋ ನೋಡಿ ನಗಬೇಡಿ ಎಂದ ಮಾಲೀಕ!

    ನವದೆಹಲಿ: ಶ್ವಾನ ಮನುಷ್ಯನ ಉತ್ತಮ ಸ್ನೇಹಿತ ಎನ್ನುವುರದಲ್ಲಿ ಯಾವುದೇ ಅನುಮಾನವಿಲ್ಲ. ಯಾರಿರುತ್ತಾರೋ ಬಿಡುತ್ತಾರೋ ಆದರೆ, ಸಾಕಿದ ನಾಯಿಯಂತೂ ಎಂದಿಗೂ ಮಾಲೀಕನ ಕೈಬಿಡುವುದಿಲ್ಲ. ಆತನ ಸುಖ-ದುಃಖಗಳಲ್ಲಿ ನಾಯಿಯು ಭಾಗಿಯಾಗುತ್ತದೆ ಎನ್ನುವುದಕ್ಕೆ ವೈರಲ್​ ಆಗಿರುವ ಈ ವಿಡಿಯೋ ಕೂಡ ಸಾಕ್ಷಿಯಾಗುತ್ತದೆ.

    ತನ್ನ ಮಾಲೀಕನೊಂದಿಗೆ ಸೇರಿಕೊಂಡು ಬಾಲಿವುಡ್​ ಹಾಡೊಂದಕ್ಕೆ ಶ್ವಾನವು ಧ್ವನಿಗೂಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಆ ಹಾಡು ಯಾವುದೆಂದರೆ ಜಾಲತಾಣದಲ್ಲಿ ಸುಮಧುರ ಧ್ವನಿಯ ಮೂಲಕವೇ ಎಲ್ಲರ ಗಮನ ಸೆಳೆದು ಭಿಕ್ಷುಕಿಯಿಂದ ಗಾಯಾಕಿಯಾದ ರಾನು ಮಂಡಲ್​ ಹಾಡಿರುವ ಬಾಲಿವುಡ್​ ನಟ ಹಾಗೂ ಗಾಯಕ ಹಿಮೇಶ್​ ರೆಶ್ಮಿಯಾ ಅವರ “ಹ್ಯಾಪಿ ಹಾರ್ಡಿ ಆ್ಯಂಡ್​ ಹೀರ್​” ಸಿನಿಮಾದ “ತೇರಿ ಮೇರಿ ಕಹಾನಿ” ಹಾಡಿಗೆ ಶ್ವಾನ ಧ್ವನಿಗೂಡಿಸಿದೆ.

    ಈ ವಿಡಿಯೋವನ್ನು ಸಬೀರ್​ ಖಾನ್​ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಮೂರು ದಿನಗಳ ಹಿಂದೆ ಅಪ್​ಲೋಡ್​ ಮಾಡಲಾಗಿದೆ. ವಿಡಿಯೋದಲ್ಲಿ ಪಶ್ಚಿಮ ಬಂಗಾಳದ ಬ್ಯಾರಕ್​ಪೋರ್​ ನಿವಾಸಿಯೊಬ್ಬರು ಹಾರ್ಮೋನಿಯಂ ಸಹಾಯದೊಂದಿಗೆ ತೇರಿ ಮೇರಿ ಕಹಾನಿ ಹಾಡುತ್ತಿರುವುದನ್ನು ಕಾಣಬಹುದಾಗಿದೆ. ಆತನ ಬಾಘ ಹೆಸರಿನ ಶ್ವಾನವೂ ಕೂಡ ಹಾಡಿಗೆ ಧ್ವನಿಗೂಡಿಸಿದೆ. ಈ ವಿಡಿಯೋ ಅನೇಕ ನೆಟ್ಟಿಗರ ಮನಗೆದ್ದಿದ್ದು ಮೆಚ್ಚುಗೆಯ ಮಹಾಪೂರವೇ ಬರುತ್ತಿದೆ.

    ಖಾನ್​ ವಿಡಿಯೋ ಶೇರ್​ ಮಾಡಿಕೊಂಡು ಇದನ್ನು ನೋಡಿ ನೀವು ನಗಬೇಡಿ. ಇಂದು ಬೆಳಗ್ಗೆ ಬಾಘ ಮತ್ತು ನಾನು ಹಾಡುವುದನ್ನು ಅಭ್ಯಾಸ ಮಾಡಿದೆವು ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಈಗಾಗಲೇ ವಿಡಿಯೋ 21 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 26 ಸಾವಿರ ಲೈಕ್ಸ್​ ಮತ್ತು 59 ಸಾವಿರ ಮಂದಿ ವಿಡಿಯೋ ಶೇರ್​ ಮಾಡಿದ್ದಾರೆ. ಒಮ್ಮೆ ನೀವು ಕೂಡ ವಿಡಿಯೋ ನೋಡಿ ಏನಾದರೂ ಹೇಳಬೇಕೆನಿಸಿದರೆ ಹೇಳಿಬಿಡಿ...(ಏಜೆನ್ಸೀಸ್​)

    একদম হাসবেন না,,,,, আজ সকালে আমি আর বাঘা সংগীত চর্চা করলাম কিছুক্ষণ,,,,,

    Subir Khan ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಜನವರಿ 12, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts