More

    ಪ್ರತಿಭೆ ಗುರುತಿಸುವುದು ನಮ್ಮ ಉದ್ದೇಶ

    ನಿಪ್ಪಾಣಿ: ಹುಟ್ಟುಹಬ್ಬದ ಆಚರಣೆಯಲ್ಲಿಯೂ ಸಾರ್ವಜನಿಕರಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಹ್ಯಾಸ್ ಟ್ಯಾಲೆಂಟ್ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿಯೊಬ್ಬರಲ್ಲಿ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ಶಾಸಕಿ ಶಶಿಕಲಾ ಜೊಲ್ಲೆ ಹುಟ್ಟುಹಬ್ಬದ ನಿಮಿತ್ತ ಅಂತಹ ಪ್ರತಿಭೆಗಳನ್ನು ಜೊಲ್ಲೆ ಗ್ರೂಪ್ ವೇದಿಕೆಯಡಿ ಗುರುತಿಸುವ ಕೆಲಸ ಮಾಡುವುದು ನಮ್ಮ ಉದ್ದೇಶ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

    ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅಕ್ಕೋಳ ಹ್ಯಾಸ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಪ್ಪಾಣಿ ಕ್ಷೇತ್ರದ 5 ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಹ್ಯಾಸ್ ಟ್ಯಾಲೆಂಟ್ ಪ್ರತಿಭಾ ಸ್ಪರ್ಧೆ ಆಯೋಜಿಸಲಾಗಿದೆ. ಅಲ್ಲಿನ ವಿಜೇತರು ನ.19 ರಂದು ನಡೆಯಲಿರುವ ಅಂತಿಮ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು ಎಂದರು.

    ಮಂದಿರಗಳ ಜೀಣೋದ್ಧಾರದ ಅವಕಾಶ ಸಿಕ್ಕ ನಂತರ ಕ್ಷೇತ್ರದಲ್ಲಿ ಸುಮಾರು 377 ಮಂದಿರ ಅಭಿವೃದ್ಧಿಪಡಿಸಲಾಗಿದೆ. ಕನ್ಹೇರಿಯಲ್ಲಿ ಸ್ಥಾಪಿಸಿದ ಐವಿಎ್ ಕೇಂದ್ರ ಸಂತಾನರಹಿತ ದಂಪತಿಗಳ ಬದುಕಿನಲ್ಲಿ ಬೆಳಕು ಚೆಲ್ಲುತ್ತಿದೆ ಎಂದರು. ಕನ್ಹೇರಿಯ ಸಿದ್ಧಗಿರಿಮಠದ ಐವಿಎ್ ಕೇಂದ್ರದ ವ್ಯವಸ್ಥಾಪಕ ಡಾ. ವಿವೇಕ ಸಿದ್ಧ, ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮತ್ತು ಜೊಲ್ಲೆ ಗ್ರೂಪ್ ಅಡಿ ಸಂತಾನರಹಿತ ದಂಪತಿಗೆ ಆಶಾಕಿರಣವಾಗಿ ಪರಿಣಮಿಸಿರುವ ಐವಿಎ್ ಕೇಂದ್ರದ ಕುರಿತು ಮಾಹಿತಿ ನೀಡಿದರು.

    ಸುಮಾರು 190 ಜನರು ಹೆಸರು ನೋಂದಾಯಿಸಿಕೊಂಡಿದ್ದರು. ಜ್ಯೋತಿಪ್ರಸಾದ ಜೊಲ್ಲೆ, ಚಂದನ ಮುರಾಬಟ್ಟೆ, ಹಾಲಸಿದ್ಧನಾಥ ಕಾರ್ಖಾನೆಯ ಅಧ್ಯಕ್ಷ ಮಲಗೌಡ ಪಾಟೀಲ, ಸಂಚಾಲಕ ರಾವಸಾಹೇಬ ರಾಳೆ, ಸುಹಾಸ ಗೂಗೆ, ಬಾಳಾಸಾಹೇಬ ಕದಂ, ಜಿತೇಂದ್ರ ಕುಲಕರ್ಣಿ, ವಿಕಾಸ ಸಂಕಪಾಳ, ಪೂನಂ ಘಾಳಿ, ಪ್ರಶಾಂತ ಪಾಟೀಲ, ಮಹೇಶ ಕುಲಕರ್ಣಿ, ಸಚಿನ ಜಾಧವ, ಪ್ರವೀಣ ಜಾಧವ ಇತರರಿದ್ದರು. ವಿಜಯ ರಾವುತ ನಿರೂಪಿಸಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts