More

    ಅವಕಾಶ ಸದುಪಯೋಗ ಪಡಿಸಿಕೊಳ್ಳಿ

    ಎನ್.ಆರ್.ಪುರ: ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಏರ್ಪಡಿಸಿರುವ 4 ದಿನಗಳ ಶೃಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ಐತಿಹಾಸಿಕ ಸ್ಥಳಗಳನ್ನು ಪುಸ್ತಕಗಳಲ್ಲಿ ಗುರುತು ಮಾಡಿಕೊಳ್ಳಬೇಕು ಎಂದು ಪಪಂ. ಸದಸ್ಯೆ ಜುಬೇದ ಸಲಹೆ ಹೇಳಿದರು.
    ಬಿಇಒ ಕಚೇರಿ ಎದುರು ತಾಲೂಕಿನ 11 ಶಾಲೆಗಳ ಪ.ವರ್ಗ, ಪ.ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ 4 ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲ ಮಕ್ಕಳಿಗೂ ಐತಿಹಾಸಿಕ ಸ್ಥಳಗಳನ್ನು ನೋಡುವ ಅವಕಾಶ ಸಿಗುವುದಿಲ್ಲ. ಸರ್ಕಾರವು ನೀಡಿದ ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ವಾಸ್ತು ಕಲೆ ಇರುವ ಹಂಪೆಯಂತಹ ಸ್ಥಳಗಳನ್ನು ನೋಡುವ ಭಾಗ್ಯ ನಿಮ್ಮದಾಗಿದೆ. ಇದರಿಂದ ನಮ್ಮ ದೇಶದಲ್ಲಿ ಯಾವ ಯಾವ ರಾಜರು ಆಳ್ವಿಕೆ ಮಾಡಿದ್ದರು ಎಂಬ ವಿಚಾರ ನಿಮಗೆ ತಿಳಿಯಲಿದೆ. ಪಠ್ಯ ಪುಸ್ತಕದ ಹೊರತಾಗಿ ಹೊಸ ಅನುಭವ ನಿಮ್ಮದಾಗಲಿದೆ ಎಂದರು.
    ಬಿಇಒ ಕೆ.ಆರ್.ಪುಪ್ಪಾ ಮಾತನಾಡಿ, ಪ್ರವಾಸೋದ್ಯಮ ಇಲಾಖೆ ಪ್ರತಿ ವಷರ್ದಂತೆ ಈ ವರ್ಷವೂ ಶೈಕ್ಷಣಿಕ ಪ್ರವಾಸ ಏರ್ಪಡಿಸಿದೆ. 8 ಸರ್ಕಾರಿ ಶಾಲೆ ಹಾಗೂ 3 ವಸತಿ ಶಾಲೆ ಸೇರಿ 11 ಶಾಲೆಗಳ 47 ಮಕ್ಕಳು 4 ದಿನ ಹಂಪೆ, ಚಿತ್ರದುರ್ಗ, ಹೊಸಪೇಟೆ, ಐಹೊಳೆ, ಬಾದಾಮಿ, ಪಟ್ಟದ ಕಲ್ಲು, ಶಿರಸಿ, ಬನವಾಸಿ ಪ್ರವಾಸ ಮಾಡಲಿದ್ದಾರೆ. ದೇಶ ಸುತ್ತ ಬೇಕು ಅಥವಾ ಕೋಶ ಓದಬೇಕು ಎಂಬ ಗಾದೆ ಮಾತಿದೆ. ಇಂತಹ ಐತಿಹಾಸಿಕ ಸ್ಥಳಗಳನ್ನು ಸಂತೋಷದಿಂದ ನೋಡಿಕೊಂಡು ಬರಬೇಕು ಎಂದು ಹಾರೈಸಿದರು.
    ಪಪಂ ಸದಸ್ಯ ಮಹಮ್ಮದ್‌ವಸೀಂ, ಇಸಿಒಗಳಾದ ರಂಗಪ್ಪ, ಸಂಗೀತ, ಸಿಆರ್‌ಪಿಗಳಾದ ಓಂಕಾರಪ್ಪ, ದೇವರಾಜ್, ನೀಲಮ್ಮ, ಕೃಷ್ಣ್ಣಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts