More

    ಗ್ರಾಮಸಭೆಯ ಸದುಪಯೋಗ ಪಡೆದುಕೊಳ್ಳಿ

    ಹೊರ್ತಿ: ಸಮಾಜದ ಕಟ್ಟಕಡೆ ವ್ಯಕ್ತಿಗೂ ನ್ಯಾಯ ಸಿಗುವಂತೆ ಅಭಿವೃದ್ಧಿಗೊಳಿಸಲು ಸರ್ಕಾರ ಗ್ರಾಮಸಭೆ ಆಯೋಜನೆ ಮಾಡಿದೆ. ಇದರ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಬೇಕು ಎಂದು ಶಾಸಕ ವಿಠಲ ಕಟಕಧೋಂಡ ಹೇಳಿದರು.

    ಲೋಣಿ ಬಿಕೆ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ತಾಪಂ ಹಾಗೂ ಗ್ರಾಪಂ, ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಗ್ರಾಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

    ಚುನಾವಣೆ ಸಂದರ್ಭದಲ್ಲಿ ಜನರ ಮುಂದೆ ಬಂದು ಕಾಕಾ, ಮಾಮಾ ಎಂದು ಮತಭಿಕ್ಷೆ ಬೇಡುವವನು ನಾನಲ್ಲ. ಪ್ರಾಮಾಣಿಕತೆಯಿಂದ ಗ್ರಾಮಸಭೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಲು ತಮ್ಮ ಮುಂದೆ ಬಂದಿದ್ದೇನೆ. ನಿಮ್ಮ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಕಂಡುಕೊಂಡು ಶೀಘ್ರದಲ್ಲಿ ಪರಿಹರಿಸಲು ಶ್ರಮಿಸುತ್ತೇನೆ. ಗ್ರಾಮಸ್ಥರು ಗ್ರಾಮದ ಅಭಿವೃದ್ಧಿ ಬಂದಾಕ್ಷಣ ಎಲ್ಲರೂ ಒಂದಾಗಬೇಕು. ಅಂದಾಗ ಮಾತ್ರ ಗಾಂಧೀಜಿ ಕಂಡ ಕನಸು ನನಸಾಗಲು ಸಾಧ್ಯ ಎಂದರು.

    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಎಂ. ಕೋರೆ ಮಾತನಾಡಿ, ಚಡಚಣ ತಾಲೂಕಿನಲ್ಲಿ ಲೋಣಿ ಗ್ರಾಮ ಹೆಚ್ಚು ಜನಸಂಖ್ಯೆ ಹೊಂದಿದೆ. ಇದನ್ನು ಹೋಬಳಿಯನ್ನಾಗಿ ಮೇಲ್ದರ್ಜೇಗೇರಿಸಬೇಕು ಎಂದು ಒತ್ತಾಯಿಸಿದರು.

    ಗ್ರಾಮದಲ್ಲಿ ಚರಂಡಿ ನಿರ್ಮಾಣ, ಸಿಸಿ, ಡಾಂಬರು ರಸ್ತೆ, ಕುಡಿಯುವ ನೀರಿನ ಸಮಸ್ಯೆಗಳನ್ನು ಗ್ರಾಮಸ್ಥರು ಶಾಸಕರೆದರು ವಿವರಿಸಿದರು. ಕೂಡಲೇ ಅವುಗಳನ್ನು ಸರಿಪಡಿಸಲು ಕ್ರಮವಹಿಸುವಂತೆ ಮನವಿ ಮಾಡಿದರು.

    ತಾಪಂ ಇಒ ಸಂಜಯ ಖಡಗೇಕರ ಮಾತನಾಡಿ, ನರೇಗಾ ಯೋಜನೆಯಡಿಯಲ್ಲಿ ಬರುವ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
    ಆರೋಗ್ಯ ಅಧಿಕಾರಿ ಜಾನ್ ಕಟವಟೆ, ಸಿಡಿಪಿಒ ಅನಿಲ ಹಳ್ಳಿ, ಕೃಷಿ ಅಧಿಕಾರಿ ಬಲರಾಮ ರಾಠೋಡ, ಗ್ರಾಪಂ ಅಧ್ಯಕ್ಷೆ ಕಮಲವ್ವ ವಡ್ಡರ, ಉಪಾಧ್ಯಕ್ಷ ಶ್ರೀಶೈಲ ಕೋಳಿ, ಮುಖಂಡ ಸತೀಶ ಮೊರುಟಗಿ, ರಮೇಶ ಜಿತ್ತಿ, ಸತೀಶ ಉಟಗಿ, ಬಸವರಾಜ ಝಳಕಿ, ಸುರೇಶ ಜೂಲ್ಪಿ, ಶ್ರೀಶೈಲ್ ಖೈನೂರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು. ಪಿಡಿಒ ಸತೀಶ ಬಿರಾದಾರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts