More

    ಹಳ್ಳಿಗಳಲ್ಲಿ ಕರೊನಾ ಸೋಂಕಿಗೆ ಬ್ರೇಕ್ ಹಾಕಲು ತಹಸೀಲ್ದಾರ್​ ಕೈಗೆ ಅಧಿಕಾರ!

    ಬೆಂಗಳೂರು: ಹಳ್ಳಿಗಳಲ್ಲಿ ಕರೊನಾ ಸೋಂಕಿಗೆ ಬ್ರೇಕ್ ಹಾಕಲು ತಹಸೀಲ್ದಾರ್​ ಕೈಗೆ ಅಧಿಕಾರ ನೀಡಲು ಸರ್ಕಾರ ನಿರ್ಧರಿಸಿದೆ.

    ಗ್ರಾಮೀಣ ಪ್ರದೇಶಗಳಲ್ಲಿ ಕರೊನಾ ಹೆಚ್ಚಳವಾಗುತ್ತಿರುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ಗ್ರಾಮೀಣ ಪ್ರದೇಶಗಳಲ್ಲಿ ಜನರ ಓಡಕ್ಕೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದ್ದಾರೆ.

    ಹದಿನೈದು ದಿನಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ನಿಯಂತ್ರಣ ಮಾಡಿ. ಪ್ರತಿ ತಾಲ್ಲೂಕಿನ ತಹಸೀಲ್ದಾರ್​ಗೆ ಜಿಲ್ಲಾಧಿಕಾರಿಗಳ ಮೂಲಕ ಸ್ಪಷ್ಟ ಸಂದೇಶವನ್ನು ರವಾನಿಸಿ. ಪ್ರತಿ ದಿನ ತಹಸೀಲ್ದಾರ್, ಜಿಲ್ಲಾಧಿಕಾರಿಗೆ ತಾಲ್ಲೂಕಿನ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕೆಂದು ಬಿಎಸ್​ವೈ ಹೇಳಿದ್ದಾರೆಂದು ತಿಳಿದುಬಂದಿದೆ.

    ತಹಸೀಲ್ದಾರ್ ಮತ್ತು ಲೋಕಲ್ ಪೊಲೀಸ್​ಗೆ ಪವರ್ ಕೊಟ್ಟು ಲಾಕ್​ಡೌನ್​ ಯಶಸ್ವಿ ಮಾಡಲು ಸರ್ಕಾರ ಸೂಚಿಸಿದೆ. ತಾಲ್ಲೂಕು ತಹಸೀಲ್ದಾರ್​ಗಳ ಜತೆ ಬುಧವಾರದ ಒಳಗೆ ವಿಡಿಯೋ ಸಂವಾದ ನಡೆಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಬಿಎಸ್​ವೈ ಸೂಚನೆ ನೀಡಿದ್ದಾರೆ.

    ಕಳೆದ ವಾರ ಡಿಸಿಗಳ ಜತೆ ವಿಡಿಯೋ ಸಂವಾದ ನಡೆಸಿದ್ದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದರು. ಈಗ ತಹಸೀಲ್ದಾರ್​ಗೆ ತಾಲ್ಲೂಕಿನ ಜವಾಬ್ದಾರಿ ನೀಡಲು ಸರ್ಕಾರ ನಿರ್ಧರಿಸಿದೆ. (ದಿಗ್ವಿಜಯ ನ್ಯೂಸ್​)

    ಸ್ನೇಹಿತನೊಂದಿಗೆ ಅಫೇರ್​: ಸಂದರ್ಶನದಲ್ಲಿ ಕುತೂಹಲ ತೆರೆದಿಟ್ಟ ಬಹುಭಾಷಾ ನಟಿ ಪ್ರಿಯಾಮಣಿ

    ಕೋವಿಡ್‌ಗೆ ಪರಿಣಾಮಕಾರಿಯಾದ ಕೊವ್ಯಾಕ್ಸಿನ್‌ಗೆ ಅನುಮೋದನೆ ಅಡ್ಡಿ! ಆರೋಗ್ಯ ಸಂಸ್ಥೆಗೆ ಕೇಂದ್ರದ ದೌಡು

    ಆನ್​ಲೈನ್ ಡೇಟಿಂಗ್​ ಹೆಸರಲ್ಲಿ​ ವೇಶ್ಯಾವಾಟಿಕೆ: ಹೈದರಾಬಾದ್​ನಲ್ಲಿ ಐವರು ಉಗಾಂಡ ಯುವತಿಯರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts