More

    ಮಧುಕೇಶ್ವರ ದೇವಾಲಯಕ್ಕೆ ತಾಡಪಾಲು ಹೊದಿಕೆ

    ಶಿರಸಿ: ಐತಿಹಾಸಿಕ ಪ್ರಸಿದ್ಧ ಶ್ರೀ ಕ್ಷೇತ್ರ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ಮೇಲ್ಛಾವಣಿ ಸೋರಿಕೆಯನ್ನು ಈ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ತಡೆಯುವ ಪ್ರಯತ್ನಕ್ಕೆ ಭಾರತೀಯ ಪುರಾತತ್ವ ಸರ್ವೆಕ್ಷಣ ಇಲಾಖೆ ಮುಂದಾಗಿದೆ.

    ಬನವಾಸಿ ಮಧುಕೇಶ್ವರ ದೇವಸ್ಥಾನ ಮಳೆಗಾಲದಲ್ಲಿ ಸೋರುತ್ತಿರುವ ಕುರಿತು ವಿಜಯವಾಣಿ ಪತ್ರಿಕೆಯು ‘ಮಧುಕೇಶ್ವರನಿಗೆ ಮಳೆ ಸ್ನಾನ’ ಶೀರ್ಷಿಕೆಯಡಿ ವಿಸ್ತ್ರತ ವಿಶೇಷ ವರದಿಯನ್ನು ಜುಲೈ 4ರಂದು ಪ್ರಕಟಿಸಿತ್ತು.

    ವರದಿಯಿಂದ ಎಚ್ಚೆತ್ತುಕೊಂಡಿರುವ ಪುರಾತತ್ವ ಇಲಾಖೆ ಅಧಿಕಾರಿಗಳು ಭಾನುವಾರ ಹಾವೇರಿಯಿಂದ ಆಗಮಿಸಿ ಮಧುಕೇಶ್ವರ ದೇವಸ್ಥಾನದ ಗೋಪುರದ ಮೇಲೆ ಪ್ಲಾಸ್ಟಿಕ್ ತಾಡಪಾಲು ಹಾಕಿ, ನೀರು ಒಳಗೆ ಹೋಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.

    ಹೋರಾಟ ಸಮಿತಿ ಸಂತಸ

    ಹೋರಾಟ ಸಮಿತಿ ಈ ಮೊದಲು ಸಾಕಷ್ಟು ಬಾರಿ ಸೋರಿಕೆ ತಡೆಯುವಂತೆ ಇಲಾಖೆಗೆ ವಿನಂತಿ ಮಾಡಿತ್ತು.

    ಇಲಾಖೆ ಸ್ಪಂದಿಸದೇ ಹೋದಾಗ ಹೋರಾಟದ ಎಚ್ಚರಿಕೆಯನ್ನೂ ನೀಡಲಾಗಿತ್ತು ಎಂದು ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ಗೌರವಾಧ್ಯಕ್ಷ ಸಿ. ಎಫ್. ನಾಯ್್ಕ ಕಾರ್ಯದರ್ಶಿ ವಿಶ್ವನಾಥ್ ವಡೆಯರ್ ತಿಳಿಸಿದ್ದಾರೆ. ಇಲಾಖೆಯ ತಾತ್ಕಾಲಿಕ ಸ್ಪಂದನೆ ಸಂತಸ ತಂದಿದೆ. ಮಳೆಗಾಲ ಮುಗಿದ ನಂತರ ಶಾಶ್ವತವಾಗಿ ಸೋರಿಕೆ ನಿಲುಗಡೆಗಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts