More

    ಸುಳ್ಳು ಹೇಳಿ ಬಾಯ್​ಫ್ರೆಂಡ್​​ ನೋಡಲು ಹೋದ ಬ್ಯೂಟಿಷಿಯನ್ ದುರಂತ ಅಂತ್ಯ: ಅಸಲಿ ಕಾರಣ ಬಹಿರಂಗ!​

    ಕೊಟ್ಟಿಯಂ: ಕೇರಳವನ್ನೇ ಬೆಚ್ಚಿಬೀಳಿಸಿದ್ದ ಬ್ಯೂಟಿಷಿಯನ್​ ಸುಚಿತ್ರಾ ಪಿಲ್ಲೈ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ಬುಧವಾರ ಚಾರ್ಜ್​ಶೀಟ್ ಸಲ್ಲಿಸಿದೆ.

    ಸುಚಿತ್ರಾ (40) ಕೊಲ್ಲಂನ ಕೊಟ್ಟಿಯಂ ಬಳಿಯಿರುವ ಥ್ರಿಕ್ಕೊವಿಲ್ವಟ್ಟಂ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬ್ಯೂಟಿಷಿಯನ್​ ಆಗಿದ್ದ ಸುಚಿತ್ರಾ ಅವರ ಮೃತದೇಹ ಕಾಲುಗಳನ್ನು ಕತ್ತರಿಸಿ, ಅರ್ಧ ದೇಹ ಸುಟ್ಟು, ಹೂತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೊಲೆ ತಪ್ಪೊಪ್ಪಿಗೆ ಆಧಾರದ ಮೇಲೆ ಪಲಕ್ಕಾಡ್​ ಜಿಲ್ಲೆಯ ಸಂಗೀತ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿತ್ತು.

    ಇದನ್ನೂ ಓದಿ: ಕೇಂದ್ರ ಸರ್ಕಾರ ಅನ್​ಲಾಕ್​ ಮಾಡುತ್ತಿರುವ ಸಮಯದಲ್ಲೂ ಆಗಸ್ಟ್​ 31ರವರೆಗೆ ಲಾಕ್​ಡೌನ್​ ವಿಸ್ತರಣೆ!

    ಕೊಲ್ಲಂ ಜುಡಿಶಿಯಲ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ (II)ಗೆ ಚಾರ್ಜ್​ಶೀಟ್​ ಸಲ್ಲಿಸಲಾಗಿದೆ. ಎಸಿಪಿ ಬಿ. ಗೋಪಕುಮಾರ್​, ಸೈಬರ್​ ಸೆಲ್​ ಎಸ್​ಐ ವಿ. ಅನಿಲ್​ ಕುಮಾರ್​ ಮತ್ತು ಅಪರಾಧ ವಿಭಾಗದ ಎಸ್​ಐ ನಿಜಾಂ ಅವರು ನ್ಯಾಯಾಧೀಶರಾದ ಅರುಣ್​ ಕುಮಾರ್​ರಿಗೆ ಜಾರ್ಜ್​ಶೀಟ್​ ಹಸ್ತಾಂತರಿಸಿದ್ದಾರೆ.

    ಸುಚಿತ್ರಾ ಅವರ ತಾಯಿ ವಿಜಯಲಕ್ಷ್ಮೀ ಅವರು ಕೊಟ್ಟಿಯಂ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ ಬಳಿಕ ತನಿಖೆ ಆರಂಭಿಸಲಾಯಿತು. ಆದರೆ, ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಕಾಣದಿದ್ದಾಗ, ವಿಜಯಲಕ್ಷ್ಮೀ ಅವರು ಹೈಕೊರ್ಟ್​ ಮೆಟ್ಟಿಲೇರಿದ್ದರು. ಬಳಿಕ ಪ್ರಕರಣ ಜಿಲ್ಲಾ ಅಪರಾಧ ವಿಭಾಗದ ತಂಡಕ್ಕೆ ಒಪ್ಪಿಸಲಾಗಿತ್ತು.

    ತನ್ನ ಹೆಂಡತಿಗೆ ಫ್ಯಾಮಿಲಿ ಫ್ರೆಂಡ್​ ಆಗಿದ್ದ ಸುಚಿತ್ರಾಳೊಂದಿಗೆ ಆರೋಪಿ ಪ್ರಶಾಂತ್​ ಸ್ನೇಹ ಬೆಳೆಸಿದ್ದ. ನಂತರ ದಿನಗಳಲ್ಲಿ ಇಬ್ಬರು ಸಾಮಾಜಿಕ ಜಾಲತಾಣ ಮೂಲಕ ತುಂಬಾ ಪರಿಚಿತರಾದರು. ಅಲ್ಲದೆ, ಸುಚಿತ್ರಾಳಿಂದ ಪ್ರಶಾಂತ್​ 2.75 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದ. ಹಣ ವಾಪಸ್​ ನೀಡುವಂತೆ ಇಬ್ಬರ ನಡುವೆ ಉಂಟಾದ ವಾಗ್ವಾದವೇ ಕೊಲೆಗೆ ಕಾರಣವಾಗಿದೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ಫೋಟೋಗಳನ್ನು ಅಪ್​ಲೋಡ್​ ಮಾಡ್ತಿದ್ದ ಟೆಕ್ಕಿಗಳಿಬ್ಬರ ಬಂಧನ

    ಇದೀಗ ಪ್ರಶಾಂತ್​ ವಿರುದ್ಧ ಅಪಹರಣ, ಆಭರಣಗಳ ಕಳ್ಳತನ, ಮೃತದೇಹಕ್ಕೆ ಅಗೌರವ ತೋರಿಸಿದ್ದು ಮತ್ತು ಸಾಕ್ಷ್ಯಾನಾಶ ಪ್ರಕರಣಗಳನ್ನು ದಾಖಲಾಗಿದೆ.

    ಘಟನೆ ಹಿನ್ನೆಲೆ
    ಕೊಚ್ಚಿಯಲ್ಲಿ ತರಬೇತಿ ಇದೆ ಎಂದು ಹೇಳಿ ಸುಚಿತ್ರಾ ಮಾರ್ಚ್​ 18ರಂದು ಮನೆಯಿಂದ ಹೊರಹೋದರು. ಅದಾದ ಎರಡು ದಿನಗಳಲ್ಲೇ (ಮಾರ್ಚ್​ 20) ಮೊಬೈಲ್​ ಫೋನ್​ ನಾಟ್​ ರೀಚಬಲ್ ಆಗಿತ್ತು. ಗಾಬರಿಗೊಂಡ ಕುಟುಂಬ ಮಾರ್ಚ್​ 22ರಂದು ಕೊಟ್ಟಿಯಂ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು.​ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ತಾಯಿಗೆ ಹುಷಾರಿಲ್ಲ 5 ದಿನ ರಜೆ ಬೇಕೆಂದು ಉದ್ಯೋಗದಾತರ ಬಳಿ ಸುಚಿತ್ರಾ ರಜೆ ಕೇಳಿ, ಮನೆಯಲ್ಲಿ ತರಬೇತಿ ಇದೆ ಎಂದು ಹೇಳಿದ್ದು ಗೊತ್ತಾಯಿತು. ಅನುಮಾನಗೊಂಡ ಪೊಲೀಸರು ಸುಚಿತ್ರಾ ಕಾಲ್​ ಡೀಟೇಲ್ಸ್​ ತೆಗೆದು ನೋಡಿದಾಗ ಪಲಕ್ಕಾಡ್​ ಸಂಗೀತ ಶಿಕ್ಷಕ ಪ್ರಶಾಂತ್​ರೊಂದಿಗೆ ಸಂಪರ್ಕವಿದ್ದಿದ್ದು ತಿಳಿದುಬಂತು. ತನಿಖೆಗಾಗಿ ಕೊಲ್ಲಂ ಪೊಲೀಸ್ ತಂಡ ಪಲಕ್ಕಾಡ್​ಗೆ ತೆರಳಿತು. ಈ ವೇಳೆ ತಾನೇ ಕೊಲೆ ಮಾಡಿದ್ದಾಗಿ ಪ್ರಶಾಂತ್​ ತಪ್ಪೊಪ್ಪಿಕೊಂಡಿದ್ದ.

    ಸುಚಿತ್ರಾಳನ್ನು ತನ್ನ ಮನೆಗೆ ಕರೆತರಲು ತನ್ನ ಕುಟುಂಬವನ್ನು ಮಾರ್ಚ್​ 18ರಂದು ಪ್ರಶಾಂತ್​ ಹೊರಗೆ ಕಳುಹಿಸಿದ್ದ. ಮನೆಗೆ ಬಂದ ಸುಚಿತ್ರಾ ಮತ್ತು ಪ್ರಶಾಂತ್​ ನಡುವೆ ಗಲಾಟೆ ನಡೆದು, ಕೊಲೆಯಲ್ಲಿ ಅಂತ್ಯವಾಗಿದೆ. ಟೇಬಲ್​ ಲ್ಯಾಂಪ್​ನ ಕೇಬಲ್​ ಸಹಾಯದಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಬಳಿಕ ಆಕೆಯ ಮೃತದೇಹದ ಎರಡು ಕಾಲುಗಳನ್ನು ಚಾಕುವಿನಿಂದ ಕೊಯ್ದು, ಸುಡಲು ಯತ್ನಿಸಿ ಕೊನೆಗೆ ಹಾಗೇ ಹೂತಿದ್ದಾನೆ. ಮತ್ತಷ್ಟು ವಿಚಾರಣೆ ನಡೆಸಿದಾಗ ಆರೋಪಿ ಪ್ರಶಾಂತ್​ ಹೇಳಿದಂತೆ ಪಲಕ್ಕಾಡ್​ನ ರಾಮನಾಥಪುರಂ ಬಳಿಯಿರುವ ಆತನ ಬಾಡಿಗೆ ಮನೆಯ ಆವರಣವನ್ನು ಹುಡುಕಾಡಿದಾಗ ಪೊಲೀಸರಿಗೆ ಸುಚಿತ್ರಾ ಮೃತದೇಹ ಪತ್ತೆಯಾಗಿತ್ತು. (ಏಜೆನ್ಸೀಸ್​)

    ಇದನ್ನೂ ಓದಿ: ಒಂಬತ್ತನೇ ಗಂಡನಿಂದ ಕೊಲೆಯಾದ ಮಹಿಳೆಯ ಹಿನ್ನೆಲೆ ಕೇಳಿದ್ರೆ ಶಾಕ್​ ಆಗೋದು ಗ್ಯಾರೆಂಟಿ!

    ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts