More

    ಧರ್ಮದ ತಳಹದಿಯಲ್ಲಿ ಜೀವನ ನಡೆಸಿ: ಮುಮ್ಮಡಿ ಶಿವರುದ್ರ ಸ್ವಾಮೀಜಿ ಅಭಿಪ್ರಾಯ, ಸಲಹೆ ಬಸವೇಶ್ವರ ಸ್ವಾಮಿ ದೇಗುಲ ಜೀರ್ಣೋದ್ಧಾರ

    ಬಿಡದಿ :  ಆಧುನಿಕ ಜಗತ್ತಿನಲ್ಲಿ ಸಂಸ್ಕಾರದ ಕೊರತೆಯಿಂದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮನುಷ್ಯ ವಿಫಲನಾಗಿದ್ದಾನೆ ಎಂದು ಮರಳೇಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಬಿಡದಿ ಪುರಸಭೆ ವ್ಯಾಪ್ತಿಯ ಕೆಂಚನಕುಪ್ಪೆ ಗ್ರಾಮದಲ್ಲಿ ಸೋಮವಾರ ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ದಾರ ಹಾಗೂ ವಿಮಾನ ಗೋಪುರ ಶಿಖರ ಕಲಶಾರೋಹಣ ಕುಂಬಾಭಿಷೇಕ ಮಹೋತ್ಸವದಲ್ಲಿ ಆರ್ಶೀವಚನ ನೀಡಿ ಮಾತನಾಡಿದರು.ಭೂಮಿಯ ಮೇಲೆ ಜನಿಸಿರುವ ಪ್ರತಿಯೊಬ್ಬರ ಬದುಕಿನಲ್ಲಿ ಸಂಸ್ಕಾರ, ಸಂಸ್ಕೃತಿಯ ಜತೆಗೆ ಶಾಂತಿ, ನೆಮ್ಮದಿ, ಸವಾಧಾನ ಅಗತ್ಯವಾಗಿದೆ.

    ಸಂಸ್ಕಾರ ಎಂಬುದು ಗಾಳಿಗೆ ಇಟ್ಟಿರುವ ದೀಪವಾದರೆ, ಶ್ರೀಮಂತಿಕೆ ಎಂಬುದು ಸಂತೆಯ ಮೈದಾನದಂತೆ ಎಂಬುದನ್ನು ಅರಿತು ಪ್ರತಿಯೊಬ್ಬರು ಶ್ರದ್ಧಾಭಕ್ತಿಯಿಂದ ದೇವರ ಪೂಜೆ ನೆರವೇರಿಸಿ ಧರ್ಮದ ತಳಹದಿಯಲ್ಲಿ ಜೀವನ ನಡೆಸಿ ಎಂದು ತಿಳಿಸಿದರು.

    ಧರ್ಮ ರಕ್ಷಿಸುವವರನ್ನು ಧರ್ಮ ಕಾಪಾಡುತ್ತದೆ. ಇಂದಿನ ಸಮುದಾಯಕ್ಕೆ ಜ್ಞಾನದ ಬದುಕು ನಿರ್ವಾಣವಾಗಬೇಕಾಗಿದೆ. ನಂಬಿ ಕರೆದರೆ ದೇವರು ಸಹ ನಿಮಗೆ ಒಳ್ಳೆಯದನ್ನೇ ಬಯಸುತ್ತಾನೆ. ಆ ನಿಟ್ಟಿನಲ್ಲಿ ಧಾರ್ಮಿಕ ಪ್ರವೃತ್ತಿಯನ್ನು ಉಳಿಸಿ ಬೆಳೆಸಿ ಹಿರಿಯರ ಪರಂಪರೆಯನ್ನು ಕಾಪಾಡಿ ಎಂದು ಯುವ ಸಮುದಾಯಕ್ಕೆ ಕಿವಿವಾತು ಹೇಳಿದರು.ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿರಿಯರು ಕಟ್ಟಿದ ದೇವಾಲಯಕ್ಕೆ ಇತಿಹಾಸವಿದ್ದು, ಜೀರ್ಣೋದ್ಧಾರದ ಜತೆಗೆ ಕಳಸ ಪ್ರತಿಷ್ಠಾಪನೆ ಮಾಡಿರುವುದು ಪರಿಪೂರ್ಣವಾಗಿದೆ ಎಂದರ್ಥ. ಅಂತರಂಗದಲ್ಲಿ ಪ್ರಸನ್ನತೆಯೊಂದಿಗೆ ದೇವರನ್ನು ಪೂಜಿಸಿ. ಬದುಕಿರುವಾಗ ಕೈಲಾದ ಒಳ್ಳೆಯ ಕೆಲಸ ಮಾಡಿ ಎಂದರು.ಶಾಸಕ ಎ. ಮಂಜುನಾಥ್, ವಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿದರು. ಅಂಕನಹಳ್ಳಿ ಗವಿಮಠದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಕದಂಬ ಜಂಗಮ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಚೌಕಿಮಠದ ಶ್ರೀ ಹುಚ್ಚಪ್ಪಸ್ವಾಮಿ ಆರ್ಶೀವಚನ ನೀಡಿದರು. ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರಮಿಸಿದ ಗ್ರಾಮಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಪುರಸಭೆ ಮಾಜಿ ಸದಸ್ಯರಾದ ಬಿ.ಎಂ. ರಮೇಶ್‌ಕುವಾರ್, ಟಿ.ಕುವಾರ್, ಮುಖಂಡರಾದ ಪರಮಣ್ಣ, ಚಂದ್ರಶೇಖರ್, ಕೆ.ಪಿ.ಬಾಲಕೃಷ್ಣ (ಬಾಲಾಜಿ), ಮಲ್ಲಪ್ಪ, ಚಂದ್ರಶೇಖರಯ್ಯ, ಗೋವಿಂದಯ್ಯ, ಹೊನ್ನಶೆಟ್ಟಿ, ಕೆಂಚನಕುಪ್ಪೆ ರಾಮಣ್ಣ, ಕೆಂಪಣ್ಣ, ಯೋಗಾನಂದ, ಲೋಕೇಶ್, ಅಂಗಡಿ ಜಯಣ್ಣ, ಕೃಷ್ಣಪ್ಪ, ಜಯಣ್ಣ, ಬಸವರಾಜು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts