More

    ಧಾರ್ಮಿಕ ಕಾರ‌್ಯಗಳಿಂದ ಸಂತೃಪ್ತಿ ; ಹನುಮಂತಯ್ಯನಪಾಳ್ಯದಲ್ಲಿ ವೀರಭದ್ರ ಶಿವಾಚಾರ‌್ಯ ಸ್ವಾಮೀಜಿ ಅಭಿಮತ

    ಕೊರಟಗೆರೆ: ನಿತ್ಯದ ಬದುಕಿನಲ್ಲಿ ಶಾಂತಿ, ನೆಮ್ಮದಿ ಇರಬೇಕು ಎಂದರೆ ಆಧ್ಯಾತ್ಮಿಕ ಚಿಂತನೆಯೊಂದಿಗೆ ದೇವಾಲಯಗಳಿಗೆ ಭೇಟಿ ನೀಡಬೇಕು ಎಂದು ಸಿದ್ಧರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ‌್ಯ ಸ್ವಾಮೀಜಿ ತಿಳಿಸಿದರು.

    ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಯ್ಯನಪಾಳ್ಯದಲ್ಲಿ ಭಾನುವಾರ, ಮುತ್ತರಾಯಸ್ವಾಮಿ ಮತ್ತು ಭೂತಪ್ಪಸ್ವಾಮಿ ದೇವಾಲಯ ಉದ್ಘಾಟನೆ ಮತ್ತು ಮುತ್ತುರಾಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಕಾರ‌್ಯಕ್ರಮದ ಸಾನ್ನಿಧ್ಯವಹಿಸಿ ವಾತನಾಡಿದರು.

    ಧಾರ್ಮಿಕ ಕಾರ‌್ಯಕ್ರಮದಲ್ಲಿ ಸಂತೃಪ್ತಿ ಸಿಗುತ್ತದೆ. ಆದ್ದರಿಂದಲೇ ಬಹುತೇಕ ದೇಗುಲಗಳು ಜೀಣೋದ್ಧಾರಗೊಳ್ಳುತ್ತಿವೆ. ಆಧ್ಯಾತ್ಮಿಕ ಚಿಂತನೆಗಳನ್ನು ಪಾಲಕರು ಮಕ್ಕಳಿಗೆ ತಿಳಿಸುವ ಮೂಲಕ ಸುಸಂಸ್ಕೃತರನ್ನಾಗಿ ವಾಡಬೇಕು ಎಂದು ಸಲಹೆಯಿತ್ತರು.
    ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ವಾತನಾಡಿ, ದುರಾಸೆಯ ಫಲವಾಗಿ ಇಂದು ನಮ್ಮ ಬದುಕನ್ನು ಕಳೆದುಕೊಳ್ಳುತ್ತಿದ್ದೇವೆ. ನಮಗೆ ಸಕಲವನ್ನೂ ಕೊಟ್ಟ ಭಗವಂತನಿಗೆ ನಾವು ನೀಡುವುದು ಭಕ್ತಿಯಷ್ಟೇ. ಈ ಹಿನ್ನೆಲೆಯಲ್ಲಿ ನಮ್ಮ ನಡೆ ಸನ್ಮಾರ್ಗದತ್ತ ಇರಬೇಕು. ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಲು ಜನಪ್ರತಿನಿಧಿಗಳು ಪಕ್ಷಭೇದ ಮರೆತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಾಜಿ ಶಾಸಕ ಸುರೇಶ್‌ಗೌಡ ವಾತನಾಡಿ, ಧರ್ಮ ಉಳಿದರೆ ಸವಾಜ ಉಳಿಯುತ್ತದೆ. ನೀರಾವರಿ ಯೋಜನೆ ಅನುಷ್ಠಾನಕ್ಕೆ ನಾನು ಬದ್ಧನಾಗಿರುತ್ತೇನೆ. ಬಡವರಿಗೆ ನಿವೇಶನ ನೀಡಲು ಮನವಿ ಮಾಡಿದ್ದರಿಂದ ವಸತಿ ಸಚಿವ ಸೋಮಣ್ಣ ಅವರು ಎಲೆರಾಂಪುರ ಗ್ರಾಪಂ ವ್ಯಾಪ್ತಿಗೆ 2 ಸಾವಿರ ಮನೆಗಳನ್ನು ಮಂಜೂರು ವಾಡಿಸುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದರು.

    ವೇದಿಕೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಂದೀಶ್, ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಎಸ್.ಆರ್.ಗೌಡ, ಜಿಪಂ ಸದಸ್ಯ ಸಿದ್ದೇಗೌಡ, ದಾವಣಗೆರೆ ಜಿಲ್ಲೆಯ ಬಿಜೆಪಿ ಸಹ ಪ್ರಚಾರಕ ಲಕ್ಷ್ಮೀಶ್, ರಾಜ್ಯ ಯುವ ಮೋರ್ಚಾ ಕಾರ‌್ಯಕಾರಿಣಿ ಸದಸ್ಯ ಟಿ.ಎನ್.ರುದ್ರೇಶ್, ತಾಪಂ ಮಾಜಿ ಅಧ್ಯಕ್ಷ ಆರ್.ಎಸ್.ರಾಜಣ್ಣ, ಎಲೆರಾಂಪುರ ಗ್ರಾಪಂ ಅಧ್ಯಕ್ಷೆ ಗಂಗಾದೇವಿ, ಉಪಾಧ್ಯಕ್ಷ ವೈ.ಎಸ್.ಉಮೇಶ್ ಚಂದ್ರ, ಸದಸ್ಯೆ ಎಂ.ವಿ.ಗೀತಾ, ಪದವೀಧರ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ಎಂ. ಹರೀಶ್, ಎಚ್.ಆರ್.ನರಸಿಂಹರಾಜು, ಮುಖಂಡರಾದ ವಾಜಿ ಚೇರ್ಮನ್ ಚಂದ್ರಣ್ಣ, ಮುನಿಯಪ್ಪ, ನಾಗರಾಜು, ಹನುಮಂತರಾಯ ಸೇರಿ ನೀಲಗೊಂಡನಹಳ್ಳಿ, ವಜ್ಜನಕುರಿಗೆ ಹಾಗೂ ಪಾತಗಾನಹಳ್ಳಿ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.

    ಗಣಪತಿ ಹೋಮ, ಮೃತ್ಯಂಜಯ ಹೋಮ, ಸುದರ್ಶನ ಹೋಮ, ರಾಮತಾರಕ ಹೋಮ ಸೇರಿ ವಿವಿಧ ದಾರ್ಮಿಕ ಕೈಂಕರ‌್ಯಗಳು ನಡೆದವು. ಗ್ರಾಮದ ಹೆಣ್ಣು ಮಕ್ಕಳಿಗೂ ಮಡಿಲು ತುಂಬಿದ ನಂತರ ಹಿರಿಯ ದಂಪತಿ ರಾಜಮ್ಮಮತ್ತು ಪರ್ವಣ್ಣ ಅವರನ್ನು ಸನ್ಮಾನಿಸಲಾಯಿತು.

    ನಮ್ಮೂರಿನ ಸರ್ವತೋಮುಖ ಅಭಿವೃದ್ಧಿಯಾಗಬೇಕು ಎಂಬುದು ನನ್ನ ಹೆಬ್ಬಯಕೆ. ಇದು ಧಾರ್ಮಿಕ ಕಾರ‌್ಯಕ್ರಮದೊಂದಿಗೆ ಆರಂಭವಾಗಿದ್ದು, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿ ಜನಪ್ರತಿನಿಧಿಗಳ ಸಹಕಾರದೊಂದಿಗೆ ಎಲ್ಲವನ್ನೂ ನನ್ನೂರಿಗೆ ಕಲ್ಪಿಸಲು ನಾನು ಸದಾ ಸಿದ್ಧನಿರುತ್ತೇನೆ.
    ಎಚ್.ಪಿ.ನೀಲೇಶ್, ಚಲನಚಿತ್ರ ನಿರ್ವಾಪಕ

    ಸ್ವಾಭಿವಾನ ಮರೆತು ರಾಜಕೀಯ ವಾಡುವ ಸ್ಥಿತಿಗೆ ರಾಜಕಾರಣಿ ತಲುಪಿದ್ದಾನೆ. ಇದು ಬದಲಾಗಬೇಕು, ಮತದಾರರ ಮನಸ್ಥಿತಿ ಬದಲಾದರೆ ರಾಜಕಾರಣಿಯನ್ನು ಬದಲಾಯಿಸಬಹುದು. ಜನಸೇವೆ ವಾಡುವವರು ಯಾರು ಎಂದು ಅರಿತು ನಾಯಕರನ್ನಾಗಿ ವಾಡಬೇಕು.
    ಜ್ಯೋತಿಗಣೇಶ್, ಶಾಸಕ, ತುಮಕೂರು ನಗರ

    ದೇವಾಲಯ ಕಟ್ಟುವಂತಹ ಹುಚ್ಚು ನಮ್ಮ ಜಿಲ್ಲೆಯಲ್ಲಿ ಇಬ್ಬರಿಗಿದೆ. ಅವರೇ ಸಂಸದ ಜಿ.ಎಸ್ ಬಸವರಾಜು ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರೂ ಆದ ವಾಜಿ ಶಾಸಕ ಸುರೇಶ್ ಗೌಡ. ಇವರು ಸಾವಿರಾರು ದೇವಾಲಯಗಳ ಜೀರ್ಣೋದ್ಧಾರ ಮತ್ತು ದೇವಾಲಯಗಳ ನಿರ್ಮಾಣ ಮಾಡಿರುವ ಹಿರಿಮೆ ಹೊಂದಿದ್ದಾರೆ.
    ವೈ.ಎಚ್.ಹುಚ್ಚಯ್ಯ, ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts