More

    ವಿವೇಕಾನಂದರ ತತ್ವ ಸಾರುವ ಡಿವೈನ್ ಪಾರ್ಕ್

    ಬೀರೂರು: ಸ್ವಾಮಿ ವಿವೇಕಾನಂದರ ಜೀವನ ತತ್ವಗಳ ಮೇಲೆ ಸ್ಥಾಪಿತವಾದ ಆಧ್ಯಾತ್ಮಿಕ ಕೇಂದ್ರವೇ ಡಿವೈನ್ ಪಾರ್ಕ್ ಎಂದು ಸಾಲಿಗ್ರಾಮ ಡಿವೈನ್ ಪಾರ್ಕ್ ಅಧಿಕಾರಿ ಎಂ.ಸುಬ್ರಹ್ಮಣ್ಯ ಹೇಳಿದರು.
    ಪಟ್ಟಣದ ರಾಜಾಜಿನಗರ ಬಡಾವಣೆಯಲ್ಲಿ ಬೀರೂರು-ಕಡೂರು ವಿವೇಕ ಜಾಗೃತ ಬಳಗದಿಂದ ಶನಿವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದಲ್ಲಿ ಮಾತನಾಡಿದರು.
    ಡಿವೈನ್ ಪಾರ್ಕ್ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ತತ್ವಶಾಸ ಮತ್ತು ಆದರ್ಶಗಳನ್ನು ಪ್ರಚಾರ ಮಾಡುವ ಕಾರಣಕ್ಕಾಗಿ ಸಮರ್ಪಿತವಾದ ಸಾರ್ವತ್ರಿಕ ದೇವಾಲಯ. ಸ್ವಾಮಿ ವಿವೇಕಾನಂದರು ಸೂಕ್ಷ್ಮವಾದ ದೈವಿಕ ರೂಪದಲ್ಲಿ ಉಪಸ್ಥಿತರಿದ್ದಾರೆ ಮತ್ತು ಸಂದೇಶಗಳನ್ನು ಪ್ರಸಾರ ಮಾಡುತ್ತಾರೆ. ಮನುಕುಲವನ್ನು ಆಧ್ಯಾತ್ಮಿಕ ಮಾರ್ಗದ ಕಡೆಗೆ ಮಾರ್ಗದರ್ಶನ ಮಾಡಲಾಗುತ್ತದೆ. ಶ್ರೀ ಗುರೂಜಿ ಸ್ವಾಮಿ ವಿವೇಕಾನಂದರ ದಿವ್ಯ ಕ್ಷೇತ್ರವಾಗಿರುವ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ್ ಪಾರ್ಕ್ ವ್ಯಕ್ತಿತ್ವ, ಶ್ರಮ ಮತ್ತು ರಾಷ್ಟ್ರ ನಿರ್ಮಾಣ ಎಂಬ ಧ್ಯೇಯವಾಕ್ಯದಡಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
    ವಿವೇಕ ಜಾಗೃತ ಬಳಗ ಕಡೂರು-ಬೀರೂರು ಅಧ್ಯಕ್ಷರಾದ ಪ್ರೇಮಾ ಶಂಕರಪ್ಪ, ಸಮಾಜ ಸೇವಕ ಗೋಪಾಲಕೃಷ್ಣ, ಶಿಕ್ಷಕಿ ನೇತ್ರಾವತಿ ಮತ್ತು ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts