More

    ಸ್ವಾಮಿ ವಿವೇಕಾನಂದರ ಕನಸು ಸಾಕಾರಗೊಳಿಸಿ

    ಅಥಣಿ: ದೇಶದ ಉಜ್ವಲ ಭವಿಷ್ಯಕ್ಕಾಗಿ ಸ್ವಾಮಿ ವಿವೇಕಾನಂದರು ದೇಶಾದ್ಯಂತ ಸಂಚರಿಸಿ ದೇಶಪ್ರೇಮ, ದೇಶಭಕ್ತಿಯನ್ನು ಪ್ರಸಾರ ಮಾಡುವ ಜತೆಗೆ ಭವ್ಯ ಭಾರತದ ನಿರ್ಮಾಣದ ಸಂಕಲ್ಪ ಮಾಡ್ದಿದರು. ಆ ಕನಸನ್ನು ಇಂದಿನ ಯುವಜನಾಂಗ ನನಸು ಮಾಡಬೇಕಿದೆ ಎಂದು ವಿಜಯಪುರದ ರಾಮಕೃಷ್ಣ ವಿವೇಕಾನಂದಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದಜೀ ಹೇಳಿದ್ದಾರೆ.

    ಗುರುವಾರ ಇಲ್ಲಿಯ ಬಣಜವಾಡ ವಸತಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ನನ್ನ ಜೀವನವನ್ನೇ ಯುವಕರಿಗಾಗಿ ಮುಡಿಪಾಗಿಟ್ಟಿದ್ದೇನೆ ಎಂದು ವಿವೇಕಾನಂದರು ಹೇಳುತ್ತಿದ್ದರು. ಅದರಂತೆ ದೇಶಕ್ಕಾಗಿ ಮೂರು ದಿನ ಅನ್ನ ನೀರು ತೆಗೆದುಕೊಳ್ಳಲಿಲ್ಲ. ಅವರು ಯಾವಾಗಲೂ ದೇಶದ ಬಗ್ಗೆ ಚಿಂತನೆ ಮಾಡುತ್ತಿದ್ದರು. ಏಳಿ ಎದ್ದೇಳಿ; ಎಚ್ಚರಗೊಳ್ಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕರ ವಾಣಿ ಯುವಕರಿಗೆ ದಿವ್ಯ ಸಂದೇಶವಾಗಿದೆ ಎಂದರು.

    ಜಗತ್ತಿನ ಮೇರು ವಿಜ್ಞಾನಿ ಐನ್‌ಸ್ಟೀನ್ ಅವರ ಪ್ರಕಾರ ಭಾರತೀಯರ ಶಕ್ತಿ ಎಲ್ಲ ಜ್ಞಾನಗಳ ತವರು ಮನೆಯಾಗಿದೆ. ನಿಜವಾಗಿ ಮೂರು ದೇವತೆಗಳು ಇರುತ್ತವೆ. ಛಲ, ಪ್ರಯತ್ನ ಮತ್ತು ಗುರುಭಕ್ತಿ ಇವು ಮೂರು ಮುಖ್ಯವಾಗಿವೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಬಣಜವಾಡ ವಸತಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಬಸವರಾಜ ಗುರ್ಕಿ, ಮುಖ್ಯ ಅತಿಥಿ ಸ್ಥಳೀಯ ಆಡಳಿತ ಮಂಡಳಿ ಸಮಿತಿ ಸದಸ್ಯ ಅಮರ ದುರ್ಗಣ್ಣವರ ಮಾತನಾಡಿದರು. ಸಂಸ್ಥಾಪಕರಾದ  ಎಲ್.ಎನ್. ಬಣಜವಾಡ, ಉಪನ್ಯಾಸಕರಾದ ಸೈಯ್ಯದರಿಯಾಜ ಖತೀಬ, ಎಂ.ಎನ್. ಧರಿಗೌಡ, ಎಂ.ಡಿ. ದೇಶಪಾಂಡೆ, ಕುಮಾರ ಅಜೂರೆ, ಸತೀಶ ಮಗದುಮ್ಮ, ಬಾಹುಬಲಿ ಚೌಗಲಾ, ಅನಿತಾ ಬಣಜವಾಡ, ಪ್ರಭು ಕೋಟ್ಯಾಳ, ಕಾಶಿನಾಥ ಹೂಗಾರ, ಕಿರಣ ಬಗನಳ್ಳಿ, ಬಸವರಾಜ ಖೋತ, ಗಾಯತ್ರಿ ಖವಟಕೊಪ್ಪ, ಸವಿತಾ ಕೋಳಿ, ಅಪರ್ಣಾ ಹೂಲಿ, ಸುರೇಖಾ ಸಿದ್ಧಾಪುರ, ಅಪೂರ್ವಾ ಮಠಪತಿ, ವರ್ಷಾ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts