More

    ಭಾಷೆ, ನೆಲ, ಜಲ, ವಿಷಯದಲ್ಲಿ ಹೋರಾಟಕ್ಕೆ ಬದ್ಧರಾಗಿ

    ಲಕ್ಷ್ಮೇಶ್ವರ: ಕನ್ನಡಕ್ಕಿರುವ ಶಕ್ತಿ ಬೇರೆ ಯಾವುದೇ ಭಾಷೆಗಳಿಗಿಲ್ಲ ಕನ್ನಡಿಗರ ಜೀವ-ಭಾವ ಕನ್ನಡವೇ ಆಗಿರಬೇಕು. ಪ್ರತಿಯೊಬ್ಬರಲ್ಲೂ ಭಾಷಾಭಿಮಾನ ಬೇಕು. ನಾಡಿನ ಭಾಷೆ, ನೆಲ, ಜಲ, ಗಡಿ ವಿಷಯಕ್ಕೆ ಧಕ್ಕೆ ಬಂದಾಗ ಯುವಕರು ಒಗ್ಗಟ್ಟು, ಸ್ವಾಭಿಮಾನದಿಂದ ಹೋರಾಟಕ್ಕೆ ಬದ್ಧರಾಗಬೇಕು ಎಂದು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.

    ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಲಕ್ಷ್ಮೇಶ್ವರ ತಾಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ, ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಕೇವಲ ರಾಜ್ಯೋತ್ಸವದಂದು ಅಭಿಮಾನ ಹೊಂದದೇ ಕನ್ನಡ ನಿತ್ಯೋತ್ಸವವಾಗಬೇಕು. ಪಾಲಕರು ಇಂಗ್ಲಿಷ್ ಭಾಷೆಯ ವ್ಯಾಮೋಹ ಬಿಟ್ಟು ಮಕ್ಕಳಿಗೆ ಕನ್ನಡ ಸಂಸ್ಕೃತಿ ಕಲಿಸಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮಾತನಾಡಿ, ಮಹದಾಯಿ ನದಿ ಜೋಡಣೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಎಚ್ಚರಿಸಲು ಫೆಬ್ರವರಿ ಮೊದಲ ವಾರದಲ್ಲಿ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಂತರ-ಮಂತರ್​ನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಪ್ರಧಾನಮಂತ್ರಿಗಳ ಗಮನ ಸೆಳೆಯಲಾಗುವುದು ಎಂದರು.

    ಕರವೇ ಉಪಾಧ್ಯಕ್ಷ ಎಚ್.ಎಸ್.ಸೋಂಪುರ, ಪ್ರ. ಕಾರ್ಯದರ್ಶಿ ಬಿ. ಸಣ್ಣೀರಪ್ಪ, ಜಿಲ್ಲಾಧ್ಯಕ್ಷ ಎಚ್.ಎಚ್. ಅಬ್ಬಿಗೇರಿ, ಆನಂದ ಗಡ್ಡದೇವರಮಠ, ಮಹೇಶ ಲಮಾಣಿ ಮಾತನಾಡಿದರು.

    ಬಾಬಾಜಾನ ಸಿದ್ದಾಪುರ, ಜಿ.ಎಂ. ನಾಯಕ, ಬಿ.ಎಚ್. ಸತೀಶಗೌಡ, ಅಶ್ವಿನಿಗೌಡ, ಸಂಗೀತಾ ಶೆಟ್ಟಿ, ಹನುಮಂತ ಮೇಟಿ, ರುದ್ರೇಶ ಹಳವದ, ಕರಿಬಸಯ್ಯ ಬಸರಿಹಳ್ಳಿಮಠ, ಶಿವಕುಮಾರಗೌಡ ಪಾಟೀಲ, ಸಿಪಿಐ ಆರ್.ಎಚ್. ಕಟ್ಟಿಮನಿ, ಸೋಮಣ್ಣ ಬೆಟಗೇರಿ, ಮಹೇಶ ಹೊಗೆಸೊಪ್ಪಿನ, ಸಿಕಂದರ ಕಣಿಕೆ, ಭಾಗ್ಯಶ್ರೀ ಬಾಬಣ್ಣವರ, ಇತರರಿದ್ದರು. ಶರಣು ಗೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ ಅಮರಾಪುರ ಸ್ವಾಗತಿಸಿದರು. ಮಂಜರಿ ಹೊಂಬಾಳಿ ನಿರೂಪಿಸಿದರು.

    ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಬಳಿಕ ಜರುಗಿದ ರಸಮಂಜರಿಯಲ್ಲಿ ಸರಿಗಮಪ ಸಂಗೀತ ಪ್ರತಿಭೆ ರುಬೀನಾ, ಕನ್ನಡ ಕೋಗಿಲೆ ಸಂಗೀತ ಕಾರ್ಯಕ್ರಮದ ಮಹಾನ್ಯಾ ಪಾಟೀಲ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಡಾನ್ಸ್ ಕರ್ನಾಟಕ ಡಾನ್ಸ್ ಪ್ರತಿಭೆಗಳಿಂದ ಡಾನ್ಸ್, ಕುಮಾರ ಪಟ್ಟಣದ ಹರಿಪ್ರಿಯಾ ಡಾನ್ಸ್ ಗ್ರುಪ್​ನವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts