More

    ವಿದೇಶಿ SHAREit ಬದಲು ಸ್ವದೇಶಿ Z share: ಕನ್ನಡಿಗನಿಂದ ತಯಾರಾಗಿದೆ ಹೊಸ ಆ್ಯಪ್‌

    ಬೆಂಗಳೂರು: ಈಗ ಎಲ್ಲೆಲ್ಲೂ ಸ್ವದೇಶಿಯ ಮಾತೇ. ಚೀನಾ ಸೇರಿದಂತೆ ಇತರ ದೇಶಗಳ ವಸ್ತುಗಳನ್ನು, ಆ್ಯಪ್‌ಗಳನ್ನು ಬಹಿಷ್ಕಾರ ಹಾಕುತ್ತಿರುವ ಬೆನ್ನಲ್ಲೇ ನಮ್ಮದೇ ಯುವಕರು ಸ್ವಂತ ಪ್ರಯೋಗ ಮಾಡುತ್ತಿದ್ದಾರೆ. ಈ ಮೂಲಕ ಸಾಕಷ್ಟು ಯಶಸ್ಸನ್ನೂ ಗಳಿಸುತ್ತಿದ್ದಾರೆ.

    ಇದಾಗಲೇ ಚೀನಾಕ್ಕೆ ಸೇರಿರುವ ಅನೇಕ ಆ್ಯಪ್‌ಗಳನ್ನು ಕೋಟ್ಯಂತರ ಮಂದಿ ಅನ್‌ಇಸ್ಟಾಲ್‌ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಪರ್ಯಾಯ ಆ್ಯಪ್‌ಗಳು ಬೇಕು ಎನ್ನುವುದು ಅವರ ಅಭಿಮತ. ಇಂಥ ಪರ್ಯಾಯ ಆ್ಯಪ್‌ಗೆ ಕಾಯುತ್ತಿರುವವರಿಗಾಗಿಯೇ ಹಲವಾರು ಮಂದಿ ಆ್ಯಪ್‌ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗುತ್ತಿದ್ದಾರೆ.

    ಇಂಥವುಗಳಲ್ಲಿ ಒಂದು ಶೇರ್‌ಇಟ್‌ ಆ್ಯಪ್‌. ಯಾವುದೇ ಮಾಹಿತಿಗಳನ್ನು ಸುಲಭದಲ್ಲಿ ಒಂದು ಮೊಬೈಲ್‌ನಿಂದ ಇನ್ನೊಂದು ಮೊಬೈಲ್‌ಗೆ ಶೇರ್‌ ಮಾಡಲು ಈ ಆ್ಯಪ್‌ ಬಳಕೆಯಾಗುತ್ತಿದೆ. ಆದರೆ ಚೀನೀ ಆ್ಯಪ್‌ಗಳ ಬಹಿಷ್ಕಾರದ ಹಿನ್ನೆಲೆಯಲ್ಲಿ ಈ ಆ್ಯಪ್‌ ಕೂಡ ಇದೀಗ ಬಹಿಷ್ಕಾರಗೊಂಡಿದೆ.

    ಇದನ್ನೂ ಓದಿ: ತಯಾರಾಯ್ತು ಖಾದಿ ಪಿಪಿಇ ಕಿಟ್‌: ವಿದೇಶಿ ಕಿರಿಕಿರಿಯಿಂದ ವೈದ್ಯರಿನ್ನು ನಿರಾಳ

    ಇದಕ್ಕೆ ಪರ್ಯಾಯವಾಗಿ ಸ್ವದೇಶಿ ಆ್ಯಪ್‌ ಒಂದನ್ನು ತಯಾರು ಮಾಡಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಕಾನಸೂರು ಹತ್ತಿರದ ಮಾದನಕಳ್ ಗ್ರಾಮದ ಶ್ರವಣ ಹೆಗಡೆ.

    ಇದರ ಹೆಸರು Z share. ಶೇರ್‌ಇಟ್‌ ಆ್ಯಪ್‌ನಲ್ಲಿ ಏನೆಲ್ಲಾ ಪ್ರಯೋಜಗಳು ಇದ್ದವೋ ಅವೆಲ್ಲವೂ ಈ ಹೊಸ ಆ್ಯಪ್‌ನಲ್ಲಿ ಇವೆ ಎನ್ನುವುದು ಅವರ ಅನಿಸಿಕೆ.
    ಆದ್ದರಿಂದ shareit ಗೆ ಬದಲಾಗಿ ದೇಶೀ ಅಪ್ಲಿಕೇಷನ್ “Z share” ಅನ್ನು ಡೌನ್‌ಲೋಡ್‌ ಮಾಡಿಕೊಂಡು ಸ್ವದೇಶಿ ಅಭಿಯಾನಕ್ಕೆ ಸಾಥ್‌ ನೀಡಿ ಎನ್ನುತ್ತಿದ್ದಾರೆ ಶ್ರವಣ್‌.

    ಇದು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯ ಇದೆ. ಅದರ ಲಿಂಕ್‌ ಇಲ್ಲಿದೆ:

    https://play.google.com/store/apps/details?id=com.zshare.india

    ಚೀನಾದ ಈ ಸುಂದರಿಯ ತಾಳಕ್ಕೆ ಕುಣಿಯುತ್ತಿದೆಯೇ ನೇಪಾಳಿ ಕಮ್ಯುನಿಸ್ಟ್ ಪಾರ್ಟಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts