More

    ಕರ್ತವ್ಯ ಲೋಪವೆಸಗಿದ ವೈದ್ಯಾಧಿಕಾರಿ ಅಮಾನತು

    ಬೆಂಗಳೂರು: ಸಮಾಲೋಚನೆಗೆ ಗೈರು ಹಾಜರಾಗಿದ್ದ ಹಾಗೂ ಚುನಾವಣಾ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ. ಆರ್. ನಾರಾಯಣ್ ಅವರ ವಿರುದ್ಧ ಶಿಸ್ತು ಕ್ರಮ ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಅದೇಶ ಹೊರಡಿಸಿದೆ.

    ನಾರಾಯಣ್ ಅವರನ್ನು ಆರೋಗ್ಯ ಇಲಾಖೆಯ ಉಪನಿರ್ದೇಶಕರು (ಇಎಂಆರ್‌ಐ) ಹುದ್ದೆಯಿಂದ ಬಿಡುಗಡೆಗೊಳಿಸಿದ ನಂತರ ಇಲಾಖೆ ಸೂಚನೆಯಂತೆ ಕಳೆದ ಮಾ. 14ರಂದು ಆಯುಕ್ತಾಲಯದಲ್ಲಿ ವರದಿ ಮಾಡಿಕೊಂಡಿರುತ್ತಾರೆ. ಆದರೆ ನಂತರದಲ್ಲಿ ಮುಂದಿನ ಸ್ಥಳನಿಯುಕ್ತಿ ಸಂಬಂಧ ಮಾ. 21ರಂದು ಹಾಗೂ ಮೇ 16ರಂದು ನಡೆಸಲಾದ ಸಮಾಲೋಚನೆಗೆ ಗೈರುಹಾಜರಾಗಿರುತ್ತಾರೆ. ಮಾ. 29ರಂದು ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಮಾಲೋಚನೆ ಮುಂದೂಡಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ. ಆದರೆ ಚುನಾವಣಾ ಕರ್ತವ್ಯಕ್ಕೂ ವರದಿ ಮಾಡಿಕೊಂಡಿಕೊಳ್ಳದೆ ಸರ್ಕಾರಿ ನೌಕರರಿಗೆ ವಿರುದ್ಧವಾದ ರೀತಿಯಲ್ಲಿ ವರ್ತಿಸಿ ಕೆಸಿಎಸ್ (ನಡತೆ) 1966ರ ನಿಯಮ (1) (11) (111)ನ್ನು ಉಲ್ಲಂಸಿ ಕರ್ತವ್ಯ ಲೋಪವೆಸಗಿರುತ್ತಾರೆ.

    ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10 (29) ರಲ್ಲಿನ ಪ್ರದತ್ತವಾಗಿರುವ ಅಧಿಕಾರದನ್ವಯ ಡಾ. ನಾರಾಯಣ್ ಅವರನ್ನು ವಿಚಾರಣೆಯಿಂದ ಬಾಕಿಯಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಅಮಾನತು ಅವಧಿಯಲ್ಲಿ ವೈದ್ಯಾಧಿಕಾರಿಯು ನಿಯಮಾನುಸಾರ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ ಮತ್ತು ಅಮಾನತ್ತಿನ ಅವಧಿಯಲ್ಲಿ ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆಯದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸೂಚಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts