More

    ಹಿಮಾಚಲ ಪ್ರದೇಶ : ಕಾಂಗ್ರೆಸ್​ ಶಾಸಕರ ಅಮಾನತ್ತು ವಾಪಸ್

    ಶಿಮ್ಲಾ : ಹಿಮಾಚಲ ಪ್ರದೇಶದ ವಿಧಾನಭೆಯಿಂದ ಐವರು ಕಾಂಗ್ರೆಸ್ ಶಾಸಕರ ಅಮಾನತ್ತನ್ನು ಇಂದು ಸರ್ವಾನುಮತದಿಂದ ರದ್ದುಪಡಿಸಲಾಗಿದೆ ಎಂದು ಸ್ಪೀಕರ್ ವಿಪಿನ್ ಪರ್ಮಾರ್ ತಿಳಿಸಿದ್ದಾರೆ. ಅಮಾನತು ರದ್ದುಗೊಳಿಸುವಂತೆ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಭರದ್ವಾಜ್ ಮಂಡಿಸಿದ ನಿರ್ಣಯವನ್ನು ಸದನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು ಎನ್ನಲಾಗಿದೆ.

    ಪ್ರತಿಪಕ್ಷದ ಮುಖಂಡ ಮುಖೇಶ್ ಅಗ್ನಿಹೋತ್ರಿ ಮತ್ತು ಶಾಸಕರಾದ ಹರ್ಷ್ ವರ್ಧನ್ ಚೌಹಾನ್, ಸತ್ಪಾಲ್ ರೈಜಾದ, ಸುಂದರ್ ಸಿಂಗ್ ಮತ್ತು ವಿನಯ್ ಕುಮಾರ್ ಅವರು ಅಮಾನತ್ತು ಎದುರಿಸಿದ್ದ ಶಾಸಕರು. ಫೆಬ್ರವರಿ 26 ರಂದು ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಅವರನ್ನು ಬಲವಂತವಾಗಿ ತಡೆದು ನಿಲ್ಲಿಸಿದ ಆರೋಪದ ಮೇಲೆ ಈ ಶಾಸಕರನ್ನು ಕಲಾಪಗಳಲ್ಲಿ ಭಾಗವಹಿಸದಂತೆ ಅಮಾನತುಗೊಳಿಸಲಾಗಿತ್ತು.

    ಇದನ್ನೂ ಓದಿ: ಕೇಂದ್ರ ಸರ್ಕಾರದ ಉದ್ಯೋಗ ಆಕಾಂಕ್ಷಿಗಳಾ? ಇಲ್ಲಿದೆ 152 ಹುದ್ದೆಗಳು- ₹2 ಲಕ್ಷಕ್ಕೂ ಅಧಿಕ ಸಂಬಳ

    ರಾಜ್ಯ ವಿಧಾನಸಭೆಯಲ್ಲಿ 2021-22ರ ರಾಜ್ಯ ಬಜೆಟ್ಅನ್ನು ನಾಳೆ ಮಂಡಿಸಲಾಗುವುದು. ಇದಕ್ಕೆ ಮುನ್ನ ಈ ಐದು ಶಾಸಕರನ್ನು ಅಮಾನತುಗೊಳಿಸಿದ ನಿರ್ಧಾರವನ್ನು ರದ್ದುಪಡಿಸಲಾಗಿದೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹೆಚ್ಚಿದ ಆನ್​ಲೈನ್​ ಶಾಪಿಂಗ್ ಫ್ರಾಡ್​ : ಸೈಬರ್​ ಲ್ಯಾಬ್​ಗಳ ಸ್ಥಾಪನೆ

    ಜಾರಕಿಹೊಳಿ ಮತ್ತು ಯುವತಿ ಪ್ರಬುದ್ಧರು, ಅದರಲ್ಲಿ ತಪ್ಪೇನಿದೆ?

    ಅಧಿಕಾರದ ಬೆನ್ನುಹತ್ತಿ…? ಓಡಿಕೊಂಡು ಪ್ರಚಾರ ಸಭೆಗೆ ಹೋದ ಪ್ರಿಯಾಂಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts