More

    ಪ್ರವಾಹಕ್ಕೆ ತುತ್ತಾಗುವ ಭಾಗಗಳ ಸರ್ವೆ

    ಕಾರವಾರ: ಜಿಲ್ಲೆಯಲ್ಲಿ ಮತ್ತೆ, ಮತ್ತೆ ಉಂಟಾಗುತ್ತಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

    ಪತ್ರಿಕಾ ಭವನದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಸಂವಾದ ನಡೆಸಿದ ಅವರು, ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳ ಸರ್ವೆ ನಡೆಸಿ ನಕ್ಷೆ ತಯಾರಿಸಲಾಗುವುದು. ಅಣೆಕಟ್ಟೆಗಳ ಅಥವಾ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಎಷ್ಟು ಮಳೆಯಾದರೆ, ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ತುಂಬಲಿದೆ ಎಂಬ ಬಗ್ಗೆ ತನ್ನಿಂದ ತಾನೇ ಮಾಹಿತಿ ನೀಡಬಲ್ಲ ಹಾಗೂ ಪ್ರವಾಹ ಬರುವುದಕ್ಕೂ ಪೂರ್ವದಲ್ಲೇ ಸಂಬಂಧಪಟ್ಟವರಿಗೆ ಮುನ್ನೆಚ್ಚರಿಕೆ ನೀಡುವ ವೆಬ್​ಸೈಟ್ ತಯಾರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಮುಂದಿನ ಮಳೆಗಾಲಕ್ಕೂ ಪೂರ್ವದಲ್ಲಿ ಈ ವ್ಯವಸ್ಥೆ ಸಿದ್ಧವಾಗಲಿದೆ. ಈ ಸಂಬಂಧ ಈಗಾಗಲೇ ಕೇಂದ್ರೀಕೃತ ನಿಯಂತ್ರಣ ಕೊಠಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿದ್ಧವಾಗಿದೆ ಎಂದರು.

    ಕಳೆದ ಜುಲೈ ತಿಂಗಳ ಪ್ರವಾಹದಲ್ಲಿ ಜಿಲ್ಲೆಯಲ್ಲಿ 8872 ಮನೆಗಳಿಗೆ ನೀರು ನುಗ್ಗಿದೆ. ಎಲ್ಲ ಕುಟುಂಬಗಳಿಗೆ ತಲಾ 10 ಸಾವಿರ ರೂ. ವಿತರಿಸಲಾಗಿದೆ. ಮನೆ ನಿರ್ವಣಕ್ಕೆ ಸಹಾಯಧನ ನೀಡಲು ಆರ್​ಜಿಆರ್​ಎಚ್​ಸಿಎಲ್​ವೆಬ್​ಸೈಟ್​ನಲ್ಲಿ ಮಾಹಿತಿ ಅಪ್​ಡೇಟ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಬೆಳೆ ಹಾನಿಯ ವಿವರಗಳನ್ನೂ ಪರಿಹಾರ ವೆಬ್​ಸೈಟ್​ನಲ್ಲಿ ಅಪ್​ಡೇಟ್ ಮಾಡಲಾಗುತ್ತಿದೆ. ಪ್ರವಾಹದಿಂದ ಉಂಟಾದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ 100 ಕೋಟಿ ರೂ. ಬಿಡುಗಡೆಯಾಗಿದ್ದು, ಕ್ರಿಯಾ ಯೋಜನೆ ಸಿದ್ಧಪಡಿಸಿಟ್ಟುಕೊಳ್ಳಲಾಗುವುದು. ಮಳೆಗಾಲ ಮುಗಿಯುತ್ತಿದ್ದಂತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ವಿವರಿಸಿದರು.

    ಶೇ. 67 ಜನರಿಗೆ ಲಸಿಕೆ

    ಜಿಲ್ಲೆಯಲ್ಲಿ 18 ವರ್ಷದ ಕೆಳಗಿನ 10,04,218 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದುವರೆಗೆ 6,75,551 ಜನರಿಗೆ (ಶೇ.67) ಮೊದಲ ಡೋಸ್, ಶೇ. 32 ರಷ್ಟು ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಜಿಲ್ಲೆಗೆ ಸದ್ಯ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗುತ್ತಿದೆ. ಇನ್ನು 10 ದಿನ ಇದೇ ರೀತಿ ಲಸಿಕೆ ಪೂರೈಕೆಯಾದಲ್ಲಿ ಜಿಲ್ಲೆಯ ಶೇ. 91 ರಷ್ಟು ಜನರಿಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

    ಸೀ ಪ್ಲೇನ್ ಇಳಿದಾಣ

    ಅರಬ್ಬಿ ಸಮುದ್ರ ಹಾಗೂ ಕಾಳಿ ನದಿ ಸೇರುವ ಸಂಗಮ ಪ್ರದೇಶದಲ್ಲಿ ಸೀ ಪ್ಲೇನ್ ಇಳಿದಾಣ ನಿರ್ವಣದ ಬಗ್ಗೆ ಸರ್ಕಾರ ಯೋಜನೆ ರೂಪಿಸಿದ್ದು, ಆ ಹಂತದಲ್ಲೇ ಚರ್ಚೆಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಶರಾವತಿ, ಅಘನಾಶಿನಿ ನದಿಗಳಲ್ಲಿ ಒಳನಾಡು ಜಲಸಾರಿಗೆ ಅಭಿವೃದ್ಧಿಯ ಬಗ್ಗೆಯೂ ಸಮಗ್ರ ಯೋಜನೆ ಜಾರಿಯಲ್ಲಿದೆ ಎಂದು ವಿವರಿಸಿದರು.

    ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ

    • ಜಿಲ್ಲೆಯ ಪ್ರವಾಸೋದ್ಯಮದ ಅವಕಾಶಗಳ ಕುರಿತು ಸಮಗ್ರ ಮಾಹಿತಿ ಇರುವ ವೆಬ್​ಸೈಟ್ ರಚನೆ. ಅದಕ್ಕೆ ಬೇಕಾದ ಮಾಹಿತಿ ಕಲೆ ಹಾಕುವ ಕಾರ್ಯ ಆರಂಭ.
    • ಮುರ್ಡೆಶ್ವರದಲ್ಲಿ ಸ್ಕೂಬಾ ಡೈವಿಂಗ್​ಗೆ ಟೆಂಡರ್ ನೀಡಲು ಪೂರ್ವ ಸಿದ್ಧತಾ ಸಭೆ. ತಜ್ಞರ ಸಲಹೆಯಂತೆ ಟೆಂಡರ್ ಕರೆದು, ಶೀಘ್ರ ಕಾರ್ಯಚಟುವಟಿಕೆಗೆ ಅವಕಾಶ.
    • ಭಾರತೀಯ ನೌಕಾ ಸೇನೆಯ ನಿವೃತ್ತ ಯುದ್ಧ ವಿಮಾನ ಟಪ್ಲು ವನ್ನು ಕಾರವಾರದಲ್ಲಿ ಮ್ಯೂಸಿಯಂ ಮಾಡುವ ಕಾರ್ಯ ಕೋವಿಡ್​ನಿಂದ ವಿಳಂಬ. ಚೆನ್ನೈನಿಂದ ವಿಮಾನವನ್ನು ತಂದು ಮರು ಜೋಡಣೆಗೆ ನೌಕಾಸೇನೆ ಟೆಂಡರ್ ಕರೆದಿದ್ದು, ಕೆಲವೇ ತಿಂಗಳಲ್ಲಿ ಕಾರ್ಯ ಪೂರ್ಣ.
    • ರಾಕ್ ಗಾರ್ಡನ್ ವಿಷಯದಲ್ಲಿ ಇದ್ದ ಗೊಂದಲ ಬಗೆಹರಿದಿದೆ. ಶೀಘ್ರ ಅದನ್ನು ಮರು ಪ್ರಾರಂಭಿಸಲು ಯೋಜಿಸಲಾಗುವುದು.
    • ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅಕ್ವೇರಿಯಂ ನಿರ್ವಣ. ಶಿಥಿಲವಾದ ಸಾಗರ ಮತ್ಸಾ್ಯಲಯ ಕಟ್ಟಡ ಶೀಘ್ರ ಕೆಡವಲಾಗುವುದು.
    • ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕೌಶಲ ಬೆಳೆಸುವ
    • ಕೋರ್ಸ್​ಗಳು ಪ್ರಾರಂಭ ಈ ನಿಟ್ಟಿನಲ್ಲಿ ಈಗಾಗಲೇ ಯೋಜನೆ ರೂಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts