More

    ಪ್ರತಿಯೊಬ್ಬರೂ ಶೌಚಗೃಹ ಬಳಸಿ ಸ್ವಚ್ಛತೆ ಕಾಪಾಡಿ

    ಸುರಪುರ: ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಸಮುದಾಯದ, ವೈಯಕ್ತಿಕ ಶೌಚಗೃಹದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಹೇಳಿದರು.

    ನಗರದ ತಿಮ್ಮಾಪುರ ವಾರ್ಡ್ನಲ್ಲಿ ಭಾನುವಾರ ವಿಶ್ವ ಶೌಚಗೃಹ ಜಾಗೃತಿ ಮತ್ತು ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಶೌಚಗೃಹ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಹಲವಾರು ರೋಗಗಳು ಬರುವ ಸಂಭವವಿದೆ. ಆದ್ದರಿಂದ ಜನ ಸಮುದಾಯಕ್ಕೆ ನೈರ್ಮಲ್ಯದ ಮಹತ್ವ ಹಾಗೂ ಜಾಗೃತಿ ಮೂಡಿಸಬೇಕಿದೆ. ಶೌಚಗೃಹದ ಸ್ವಚ್ಛತೆ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಮನೋಭಾವವಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಬರುತ್ತವೆ. ಆದ್ದರಿಂದ ಜಾಗೃತಿ ವಹಿಸಬೇಕು ಎಂದರು.

    ನಗರಸಭೆ ವ್ಯಾಪ್ತಿಯಲ್ಲಿ ವೈಯಕ್ತಿಕ ಶೌಚಗೃಹಗಳು ಬಳಕೆಯಾಗುತ್ತಿಲ್ಲ. ಇದರ ಕುರಿತು ತಿಳಿವಳಿಕೆ ಮೂಡಿಸುವ ಕೆಲಸವಾಗುತ್ತಿದೆ. ಸರ್ಕಾರ ವಿವಿಧ ಯೋಜನೆ ರೂಪಿಸಿದ್ದು, ಸದ್ಬಳಕೆ ಆಗುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಲಾಭ ಫಲಾನುಭವಿಗಳಿಗೆ ತಲುಪಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

    ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಾ ಮಾತನಾಡಿದರು. ಸುರಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷೆ ಹಾಗೂ ನಗರಸಭೆ ಸದಸ್ಯೆ ಸುವರ್ಣ ಎಲೆಗಾರ, ಸಿದ್ರಾಮ ಎಲಿಗಾರ ಕಂದಾಯ ನಿರೀಕ್ಷಕರಾದ ವೆಂಕಟೇಶ್ ಕಲ್ಬುರ್ಗಿ, ಸಲೀಂ ಮಲ್ಲಿಕ್, ನಗರಸಭೆ ಜೆಇ ಮಹೇಶ ಚವ್ಹಾಣ್, ಎಸ್‌ಐಗಳಾದ ಶಿವಪುತ್ರ, ಗುರುಸ್ವಾಮಿ, ಬಿಲ್ ಕಲೆಕ್ಟರ್‌ಗಳಾದ ದತ್ತು ನಾಗಭುಜಂಗಿ, ಬಾಬುರಾವ್, ಹನುಮಂತ ನಾಯಕ ಇತರರಿದ್ದರು. ವಾರ್ಡ್​ಗಳಲ್ಲಿ ಪೌರಾಯುಕ್ತ ಜೀವನ್ ಕಟ್ಟಿಮನಿ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ, ಪೌರ ಕಾರ್ಮಿಕರು ಮ್ಯಾರಥಾನ್ ನಡೆಗೆಯ ಮೂಲಕ ವಿಶ್ವ ಶೌಚಗೃಹ ಜಾಗೃತಿ ಮೂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts