More

    ಕನ್ನಡ ಭಾಷೆಯ ಮೆರಗು ಹೆಚ್ಚಲಿ

    ಸುರಪುರ: ಶ್ರೀಗಂಧ ನಾಡು, ಕರುನಾಡು ಬೀಡಾಗಿರುವ ಕರ್ನಾಟಕದಲ್ಲಿ ಕನ್ನಡ ಭಾಷೆಯ ಮೆರಗು ಹೆಚ್ಚಲಿ ಎಂದು ತಹಸೀಲ್ದಾರ್ ಕೆ. ವಿಜಯಕುಮಾರ ಹೇಳಿದರು.

    ತಹಸಿಲ್ ಕಚೇರಿಯಲ್ಲಿ ಹಮ್ಮಿಕೊಂಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಜನಿಸಿರುವ ನಾವೆಲ್ಲರೂ ಪುಣ್ಯವಂತರು. ಎಲ್ಲ ಸಮಾಜ ಬಾಂಧವರು ಒಗ್ಗೂಡಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

    ಹಿಂದುಳಿದ ವರ್ಗಗಳ ಅಧಿಕಾರಿ ತಿಪ್ಪಾರೆಡ್ಡಿ ಮಾಲಿ ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು.

    ಉಪ ಖಜನಾಧಿಕಾರಿ ಸಣ್ಣಕೆಪ್ಪ ಕೊಂಡಿಕಾರ, ಉಪ ತಹಸೀಲ್ದಾರ್ ಮಲ್ಲಯ್ಯ ದಂಡಿ, ತಾಪಂ ಇಒ ಬಸವರಾಜ ಸಜ್ಜನ್, ತಾಲೂಕು ಆರೋಗ್ಯಾಧಿಕಾರಿ ಆರ್.ವಿ. ನಾಯಕ, ಎಂಡಿಎಂ ಯಲ್ಲಪ್ಪ ಚಂದನಕೇರಿ, ಸಮಾಜ ಕಲ್ಯಾಣಾಧಿಕಾರಿ ಮಹ್ಮದ್ ಸಲೀಂ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಎಚ್.ಡಿ.ಪಾಟೀಲ್, ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ, ಚಂದ್ರಶೇಖರ ನಾಯಕ, ಶರಣು ಹೂಗಾರ, ವಜಾಹತ್ ಹುಸೇನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts