More

    ಆರೋಗ್ಯದ ಬಗ್ಗೆ ಇರಲಿ ಮುಂಜಾಗ್ರತೆ

    ಸುರಪುರ: ಆರೋಗ್ಯದ ಬಗ್ಗೆ ಮುಂಜಾಗೃತೆ ವಹಿಸಿದರೆ ಮಾತ್ರ ನಾವು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ರಾಜಾ ವೆಂಕಪ್ಪ ನಾಯಕ ಹೇಳಿದರು.

    ನಗರದ ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ಆರೋಗ್ಯ ಇಲಾಖೆಯ ಪಂಚ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗರ್ಭಾವಸ್ಥೆಯಿಂದ ಮಗು ಜನಿಸುವವರೆಗೂ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
    ಹುಣಸಗಿ ಮತ್ತು ಸುರಪುರ ತಾಲೂಕಿನಲ್ಲಿ ೫೪೩೦೨ ಮಕ್ಕಳಿದ್ದಾರೆ. ೯೧,೮೦೪ ಮನೆಗಳಿಗೆ ಆಶಾ ಕಾರ್ಯಕರ್ತರು ಭೇಟಿ ನೀಡಿ ಅತಿಸಾರಭೇದಿ ನಿಯಂತ್ರಣಕ್ಕಾಗಿ ಒಆರ್‌ಎಸ್ ಮತ್ತು ಜಿಂಕ್ ಮಾತ್ರೆ ವಿತರಿಸುವರು. ತಾಲೂಕಿನಲ್ಲಿರುವ ೩೯೦ ಎಲ್ಲ ಆಶಾ ಕಾರ್ಯಕರ್ತರು ಕಾರ್ಯನಿರ್ವಹಿಸುವರು ಎಂದು ತಿಳಿಸಿದರು.

    ನ.೨೮ರವರೆಗೆ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ ಆಚರಣೆ. ೧೫ರಿಂದ ಡಿಸೆಂಬರ್ ೨ರವರೆಗೆ ಕ್ಷಯರೋಗ ಪತ್ತೆ ಚಿಕಿತ್ಸೆ ಆಂದೋಲನ. ೧೫ರಿಂದ ನ.೨೧ರವರೆಗೆ ರಾಷ್ಟೀಯ ನವಜಾತ ಶಿಶು ಸಪ್ತಾಹ. ೨೦೨೪ ಫೆ.೨ರವರೆಗೆ ನ್ಯುಮೋನಿಯಾವನ್ನು ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಕರ‍್ಯಕ್ರಮ ನಡೆಯಲಿವೆ. ಇದಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

    ಕೆಪಿಎಸ್ ಪ್ರಾಂಶುಪಾಲ ಬಸವರಾಜ ಕೊಡೇಕಲ್, ಅಂಗನವಾಡಿ ಮೇಲ್ವಿಚಾರಕಿ ಪದ್ಮಾವತಿ ಮಾತನಾಡಿದರು. ಉಪ ಪ್ರಾಚಾರ್ಯ ಗುರುಲಿಂಗಪ್ಪ, ನಗರಸಭೆ ಎಸ್‌ಐ ಗುರುಸ್ವಾಮಿ, ಆರೋಗ್ಯ ಸಿಬ್ಬಂದಿ ಮಲ್ಲಣ್ಣ, ರಾಜಶೇಖರ, ಜಯಾ ಪವಾರ, ಜಯಶ್ರೀ, ಹಣಮಂತ, ಸುರೇಶ, ಸಯ್ಯದ್ ಉಸ್ತಾದ್ ಬೈರಿ, ರಾಘವೇಂದ್ರ, ಚಿದಾನಂದ್ ಜ್ಯೋತಿ, ಬಲಭೀಮ, ಶಮೀನಾ, ಸಂಗಪ್ಪ ಚೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts