More

    ಮರಾಠ ಮೀಸಲಾತಿ ಕಾನೂನು ರದ್ದು: ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್

    ನವದೆಹಲಿ: ಮಹಾರಾಷ್ಟ್ರ ಸರ್ಕಾರ ಜಾರಿ ಮಾಡಿದ್ದ ಮರಾಠ ಮೀಸಲಾತಿ ಕಾನೂನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಬುಧವಾರ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

    ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠದಿಂದ ತೀರ್ಪು ಪ್ರಕಟಿಸಲಾಗಿದೆ. ಶೇ. 50 ಮೀಸಲಾತಿ ಮಿತಿಯನ್ನು ದಾಟಿ ಮೀಸಲಾತಿ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್​ನ 1992ರ ಇಂದಿರಾ ಸಾವನಿ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಸರ್ಕಾರಿ ನೌಕರಿ ಮತ್ತು ಶಿಕ್ಷಣದಲ್ಲಿ ಮರಾಠರಿಗೆ ಮೀಸಲಾತಿಯನ್ನು 2018ರಲ್ಲಿ ಆಗಿನ ಬಿಜೆಪಿ ಸರ್ಕಾರ ಘೋಷಿಸಿತ್ತು. ಇದು ಸಮಾನತೆಯ ಉಲ್ಲಂಘನೆ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.

    ಮರಾಠ ಸಮುದಾಯ ಹಿಂದುಳಿದ ಸಮುದಾಯವಲ್ಲ. ಅವರಿಗೆ ಪ್ರತ್ಯೇಕ ಮೀಸಲಾತಿ ಬೇಕಿಲ್ಲ ಎಂದಿರುವ ಸುಪ್ರೀಂಕೋರ್ಟ್, ಮರಾಠ ಮೀಸಲಾತಿ ಕಾನೂನು ಅಸಂವಿಧಾನಿಕ ಎಂದು ಹೇಳಿ ರದ್ದುಗೊಳಿಸಿದೆ.

    ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ನಾಗೇಶ್ವರ ರಾವ್, ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ರವೀಂದ್ರ ಭಟ್ ಒಳಗೊಂಡ ಪಂಚ ಸದಸ್ಯರ ಪೀಠದಿಂದ ತೀರ್ಪು ಹೊರಬಿದ್ದಿದೆ.

    ಸಂಸತ್ತಿನಲ್ಲಿ ಮಾಡಿದ ತಿದ್ದುಪಡಿಯಿಂದಾಗಿ ಯಾವುದೇ ಜಾತಿಯನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಜಾತಿ ಪಟ್ಟಿಗೆ ಸೇರಿಸಲು ರಾಜ್ಯಗಳಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ರಾಜ್ಯಗಳು ಜಾತಿಗಳನ್ನು ಮಾತ್ರ ಗುರುತಿಸಬಹುದು ಮತ್ತು ಕೇಂದ್ರಕ್ಕೆ ಸೂಚಿಸಬಹುದು, ರಾಷ್ಟ್ರಪತಿಗಳು ಮಾತ್ರ ಜಾತಿಯನ್ನು ಸೇರಿಸಬಹುದು ಎಂದು ನ್ಯಾಯಾಲಯ ಹೇಳಿದೆ.

    ಚಾಮರಾಜನಗರ ಆಕ್ಸಿಜನ್​ ದುರಂತ: ರಾಜ್ಯ ಸರ್ಕಾರದಿಂದ ನ್ಯಾಯಾಂಗ ತನಿಖೆಗೆ ಆದೇಶ

    ಕೋವಿಡ್​ ಸಂಬಂಧಿತ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು 50,000 ಕೋಟಿ ರೂ. ಲಿಕ್ವಿಡಿಟಿ ಘೋಷಿಸಿದ ಆರ್​ಬಿಐ

    ಅಮ್ಮಾ ಕ್ಯಾಂಟೀನ್​ ಫ್ಲೆಕ್ಸ್​ ಕಿತ್ತೆಸೆದ ಪಕ್ಷದ ಕಾರ್ಯಕರ್ತರನ್ನು ಬಹಿಷ್ಕರಿಸಿ, ದೂರು ನೀಡಿದ ಡಿಎಂಕೆ: ಇಬ್ಬರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts