More

    ಸನ್ನಿ ಲಿಯೋನ್ ಕುಟುಂಬ ಸಮೇತ ಅಮೆರಿಕಾಗೆ ವಾಪಸ್ಸು ಹೋಗಿದ್ದೇಕೆ?

    ಕಳೆದ ಎಂಟು ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದ ಸನ್ನಿ ಲಿಯೋನ್, ಎರಡು ದಿನಗಳ ಹಿಂದಷ್ಟೇ ಅಮೆರಿಕಾಗೆ ವಾಪಸ್ಸು ಹೋಗಿದ್ದಾರೆ. ಅವರೊಬ್ಬರೇ ಅಲ್ಲ, ಗಂಡ, ಮಕ್ಕಳನ್ನೂ ವಾಪಸ್ಸು ಕರೆದುಕೊಂಡು ಅಮೆರಿಕಾದ ಫ್ಲೈಟ್​ಟ್ ಹತ್ತಿದ್ದಾರೆ. ಲಾಕ್‌ಡೌನ್ ಮುಗಿಯುವವರೆಗೂ ಮುಂಬೈನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬೆಚ್ಚಗಿದ್ದ ಸನ್ನಿ ಲಿಯೋನ್, ಹೀಗೆ ಏಕಾಏಕಿ ಅಮೆರಿಕಾಗೆ ವಾಪಸ್ಸು ಹೋಗಿದ್ದು ಏಕೆ?

    ಇದನ್ನೂ ಓದಿ: ಹೈದರಾಬಾದ್‌ಗೆ ವಾಪಸ್ಸು ಬಾ ಅಂತ ರಶ್ಮಿಕಾಗೆ ಹೇಳಿದ್ದು ಯಾರು?

    ಇಂಥದ್ದೊಂದು ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಲೇ ಇದೆ. ಯಾರಿಗೂ ಹೇಳದೆ ಸದ್ದಿಲ್ಲದೆ ಫ್ಲೈಟ್ ಹತ್ತಿರುವ ಸನ್ನಿ, ಅಮೆರಿಕಾಗೆ ಹೋದ ನಂತರ ತಾವು ಅಲ್ಲಿಗೆ ಬಂದ ಕಾರಣವನ್ನು ತಿಳಿಸಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ತಾವು ಅಂಥ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎಂದು ಹೇಳಿದ್ದಾರೆ. ಸನ್ನಿ ನೀಡಿರುವ ಕಾರಣವೇನು ಗೊತ್ತಾ? ಮಕ್ಕಳ ಸೇಫ್ಟಿ.

    ಹೌದು, ಮಕ್ಕಳ ಸುರಕ್ಷತೆಗಾಗಿ ಭಾರತ ಬಿಟ್ಟು ಅಮೆರಿಕಾಗೆ ಬಂದಿದ್ದಾಗಿ ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ. ‘ಮಕ್ಕಳಿದಾಗ ನಮ್ಮ ಆದ್ಯತೆಗಳು ಬದಲಾಗುತ್ತವೆ. ನಾನು ಮತ್ತು ನನ್ನ ಗಂಡ, ಮಕ್ಕಳೊಂದಿಗೆ ವಾಪಸ್ಸಾಗಿದ್ದೇವೆ. ಕರೊನಾ ವೈರಸ್ ಎಂಬ ಆಗುಂತಕ ಕಿಲ್ಲರ್‌ನಿಂದ ಸುರಕ್ಷಿತವಾಗಿರುವುದಕ್ಕೆ ಇದು ಒಳ್ಳೆಯ ಸ್ಥಳ ಎಂದು ನಮಗನ್ನಿಸಿದೆ. ಹಾಗಾಗಿ ಲಾಸ್ ಆ್ಯಂಜಲೀಸ್‌ನ ನಮ್ಮ ಸೀಕ್ರೆಟ್ ಗಾರ್ಡನ್‌ಗೆ ನಾವೆಲ್ಲರೂ ವಾಪಸ್ಸಾಗಿದ್ದೇವೆ. ನಮ್ಮ ತಾಯಿ ಇದ್ದಿದ್ದರೂ ಬಹುಶಃ ಇದನ್ನೇ ಮಾಡುತ್ತಿದ್ದರೇನೋ?’ ಎಂದು ಸನ್ನಿ ಬರೆದುಕೊಂಡಿದ್ದಾರೆ. ಜತೆಗೆ ತಮ್ಮ ಮಕ್ಕಳೊಂದಿಗೆ ಇರುವ ಒಂದು ಫೋಟೋ ಶೇರ್ ಮಾಡಿದ್ದಾರೆ.

    ಇದನ್ನೂ ಓದಿ: ಲಂಡನ್​ನಿಂದ ತಾಯ್ನಾಡಿಗೆ ಮರಳಿದ ಸೌಂದರ್ಯ! 14 ದಿನಗಳ ಕಾಲ ಕ್ವಾರಂಟೈನ್

    ಇನ್ನು ಸನ್ನಿ ಲಿಯೋನ್ ಗಂಡ ಡ್ಯಾನಿಯಲ್ ವೆಬರ್ ಸಹ ತಮ್ಮ ಫೋಟೋ ಪೋಸ್ಟ್ ಮಾಡಿ, ‘ಕ್ವಾರಂಟೈನ್ – ಪಾರ್ಟ್ 2’ ಎಂದು ಬರೆದಿದ್ದಾರೆ.

    ಅಮೇರಿಕಾದಲ್ಲಿ ವೈರಸ್​ನಿಂದ ಸಾವಿನ ಸಂಖ್ಯೆ ಹೆಚ್ಚಾಗಿ, ಅಲ್ಲಿ ಸುರಕ್ಷತೆ ಇಲ್ಲ ಎಂದು ಅಲ್ಲಿನ ಜನ ಬೊಬ್ಬಿಡುತ್ತಿರುವಾಗ, ಸನ್ನಿ ಮಾತ್ರ ತಮ್ಮ ಕುಟುಂಬದೊಂದಿಗೆ ಅಮರಿಕಾಗೆ ಶಿಫ್ಟ್​ ಆಗಿರುವುದು ವಿಚಿತ್ರ.

    ಇರ್ಫಾನ್​ ನೆನಪಲ್ಲಿ ಹೀಗೊಂದು ಒಳ್ಳೆಯ ಕೆಲಸ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts