More

    ಬಾಕ್ಸ್​​ ಆಫೀಸ್​ನಲ್ಲಿ 300 ಕೋಟಿ ಬಾಚಿಕೊಂಡ ‘ಗದರ್ 2’ ಸಿನಿಮಾ; ‘ಕೆಜಿಎಫ್ 2’, ‘ಪಠಾಣ್’ ದಾಖಲೆ ಬ್ರೇಕ್​​​

    ಆಗಸ್ಟ್ 11ರಿಂದ ಇಲ್ಲಿಯವರೆಗೆ ‘ಗದರ್ 2’ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಮೂಲಕ ಸಿನಿಮಾ ಗಲ್ಲಾಪಟ್ಟಿಗೆಯನ್ನು ಭರಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಶುಕ್ರವಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತದೆ. ಎರಡನೇ ಶುಕ್ರವಾರ ಎನ್ನುವಾಗ ಸಿನಿಮಾದ ಅಬ್ಬರ ಕೊಂಚ ಕಡಿಮೆ ಆಗಿರುತ್ತದೆ. ಆದರೆ, ‘ಗದರ್ 2’ ಚಿತ್ರ ರಿಲೀಸ್​​ ಆದಾಗಿನಿಂದಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.


    ಬಾಕ್ಸ್ ಆಫೀಸ್​ನಲ್ಲಿ ಕೇವಲ ಎಂಟು ದಿನಕ್ಕೆ ಈ ಚಿತ್ರ 300 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ‘ಗದರ್ 2’ ಯಶ್ ನಟನೆಯ ‘ಕೆಜಿಎಫ್ 2’ ಹಾಗೂ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರ ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದೆ. ವೀಕೆಂಡ್​​ ಆಗಿರೋದ್ರಿಂದ ಇಂದು ಮತ್ತು ನಾಳೆ ಮತ್ತಷ್ಟು ಕಲೆಕ್ಷನ್​​ ಹೆಚ್ಚಲಿದೆ.


    ಸಿನಿಮಾ ರಿಲೀಸ್ ಆದ ಎರಡನೇ ಶುಕ್ರವಾರ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿರೋದು ‘ಗದರ್ 2’ ಚಿತ್ರ ಮತ್ತು ಸನ್ನಿ ಡಿಯೋಲ್​ ಫೇಮನ್ನ ಹೆಚ್ಚುವಂತೆ ಮಾಡಿದೆ. ಈ ಮೊದಲು ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್’(19 ಕೋಟಿ ರೂಪಾಯಿ), ‘ದಂಗಲ್’ (18 ಕೋಟಿ ರೂಪಾಯಿ), ‘ಪಿಕೆ’ (15 ಕೋಟಿ ರೂಪಾಯಿ), ‘ಕೆಜಿಎಫ್ 2’ (11.25) ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದನ್ನು ‘ಗದರ್ 2’ ಹಿಂದಿಕ್ಕಿದೆ.


    ಸನ್ನಿ ಡಿಯೋಲ್ ಸಾಕಷ್ಟು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲೇ ಇದ್ರೂ ಕೂಡಾ ಇಷ್ಟು ದೊಡ್ಡ ಮಟ್ಟಿನ ಯಶಸ್ಸು ಕಂಡಿರಲಿಲ್ಲ. ‘ಗದರ್ 2’ ಚಿತ್ರದ ಮೂಲಕ ಅವರು ಅತಿ ದೊಡ್ಡ ಗೆಲುವು ಕಂಡಿದ್ದಾರೆ ಜೊತೆಗೆ ಮತ್ತಷ್ಟು ಆಫರ್​ಗಳು ಕೂಡಾ ಬರುತ್ತಿವೆಯಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts