More

    ಮಾನವ ಜೀವನಕ್ಕೆ ಆರೋಗ್ಯ ಬಹಳ ಮುಖ್ಯ; ದೇವೇಂದ್ರಪ್ಪ

    ರಾಣೆಬೆನ್ನೂರ: ಮಾನವ ಜೀವನಕ್ಕೆ ಆರೋಗ್ಯವು ಅಪಾರ ಮೌಲ್ಯವನ್ನು ಹೊಂದಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ದೇವೆಂದ್ರಪ್ಪ ಡಿ.ಎಸ್. ಹೇಳಿದರು.
    ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಕ್ಷಯ ರೋಗವು ಸಾಂಕ್ರಾಮಿಕ ರೋಗವಾಗಿದೆ. ಈ ಕಾಯಿಲೆ ಲಕ್ಷಣಗಳಾದ ಸಂಜೆ ಜ್ವರ, ಕೆಮ್ಮು ಜತೆಗೆ ಕಫದಲ್ಲಿ ರಕ್ತ ಬೀಳುವುದು, ಹಸಿವಾಗದಿರುವುದು, ತೂಕ ಕಡಿಮೆ ಆಗುವುದು, ಈ ರೀತಿ ಕಾಣಿಸಿದವರು ಸರ್ಕಾರಿ ಆಸ್ಪತ್ರೆಯಲ್ಲಿ ಕಫ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆ ಪಡೆಯಬಹುದು. ಚಿಕಿತ್ಸೆಯ ಜತೆಗೆ ನಿಕ್ಷಮ್ ಪೋಷಣಾ ಯೋಜನೆಯಲ್ಲಿ 500 ರೂ. ರೋಗಿಯ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.
    ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ನಾಗರಾಜ ಕುಡುಪಲಿ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು. ಆರೋಗ್ಯವನ್ನು ಅತ್ಯುತ್ತಮವಾದ ಕ್ರಿಯಾತ್ಮಕ ಸಾಮರ್ಥ್ಯವನ್ನಾಗಿ ಕಾಪಾಡಿಕೊಳ್ಳಬೇಕು ಎಂದರು.
    ಪ್ರಾಚಾರ್ಯ ಪಿ. ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು.
    ಎನ್‌ಎಸ್‌ಎಸ್ ಯೋಜನಾಧಿಕಾರಿ ಎಚ್. ಶಿವಾನಂದ, ಉಪನ್ಯಾಸಕರಾದ ಸಂತೋಷ ಅಂಗಡಿ, ಶಿಲ್ಪಾ ಕೆಂಚರೆಡ್ಡಿ, ಪೂರ್ಣಿಮಾ ಮಾಗನೂರು, ಚೀರಂಜಿವಿ ಸಿ., ಎಸ್.ಎಂ. ಮಕಾಂದರ, ಜಗದೀಶ ಕೊರಗರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts