More

    ಶಾಲೆಗಳಿಗೆ ಬೇಸಿಗೆ ರಜೆ ಮುಂದುವರಿಸಲು ಚಿಂತನೆ: ಕೇಂದ್ರದಿಂದಲೇ ಆದೇಶ ಸಾಧ್ಯತೆ

    ನವದೆಹಲಿ: ರಾಜ್ಯದಲ್ಲಿ ಏಪ್ರಿಲ್​ 30ರವರೆಗೆ ಲಾಕ್​ಡೌನ್​ ವಿಸ್ತರಣೆಯಾಗಿದೆ. ಹಲವು ರಾಜ್ಯಗಳು ಕೂಡ ಇದೇ ಕ್ರಮ ಅನುಸರಿಸಿವೆ. ಹೀಗಾಗಿ ಹಲವು ನಿರ್ಬಂಧಗಳೊಂದಿಗೆ ಕೇಂದ್ರವೂ ಕೂಡ ದೇಶಾದ್ಯಂತ ಇದೇ ಕ್ರಮ ಅನುಸರಿಸಬಹುದು. ಕೆಲ ಅಗತ್ಯ ಸೇವೆಗಳಿಗೆ ವಿನಾಯ್ತಿ ನೀಡಿ ಲಾಕ್​​ಡೌನ್​ ಮುಂದುವರಿಯಲಿದ್ದು, ರಾಜ್ಯಗಳಿಗೆ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡುವ ಸಾಧ್ಯತೆಗಳಿವೆ.

    ಪ್ರಸ್ತುತ ಶಾಲೆಗಳಿಗೆ ಬೇಸಿಗೆ ರಜೆ ಇದೆ. ಹೀಗಾಗಿ ಜೂನ್ ನಂತರವಷ್ಟೇ ಶಾಲೆಗಳ ಪುನಾರಂಭ ಸಾಧ್ಯ. ಆದರೆ, ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಜೂ.10ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ಈ ನಡುವೆ, ಕೇಂದ್ರ ಸರ್ಕಾರ ಬೇಸಿಗೆ ರಜೆಯನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ ಎಂದು ಹೇಳಲಾಗಿದೆ.

    ಕರೊನಾ ವ್ಯಾಪಿಸುತ್ತಿರುವ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೂ ಶಾಲೆಗಳ ಆರಂಭಕ್ಕೆ ಇನ್ನಷ್ಟು ಸಮಯಾವಕಾಶ ಬೇಕಾಗಲಿದೆ. ಹೀಗಾಗಿ ಅಲ್ಲಿಯವರೆಗೂ ರಜೆ ಘೋಷಿಸುವ ಸಾಧ್ಯತೆಗಳಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಶಾಲೆಗಳ ಬೇಸಿಗೆ ರಜೆಯನ್ನು ಮುಂದುವರಿಸುವ ಚಿಂತನೆ ಇದೆ. ಆದರೆ, ರಾಜ್ಯಗಳ ಹಾಗೂ ವಿವಿಧ ಶಿಕ್ಷಣ ಮಂಡಳಿಗಳ ಸಲಹೆಯನ್ನು ಕೇಳಿದ ಬಳಿಕವಷ್ಟೇ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಆದರೆ, ಇದಕ್ಕೆ ಸಾಕಷ್ಟು ಕಾಲಾವಕಾಶ ಇರುವುದರಿಂದ ಶೀಘ್ರದಲ್ಲಿ ಇಂಥದ್ದೊಂದು ಆದೇಶ ಹೊರಬೀಳುವ ಸಾಧ್ಯತೆಗಳಿಲ್ಲ. ಲಾಕ್​ಡೌನ್​ ಅವಧಿ ಮುಗಿದ ನಂತರವಷ್ಟೇ ಈ ನಿಟ್ಟಿನಲ್ಲಿ ಸಂಪೂರ್ಣ ಚರ್ಚೆ ನಡೆಸಿ ನಿರ್ಧಾರ ಹೊರಬೀಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.(ಏಜೆನ್ಸೀಸ್​)

    ಲಗ್ಗೆ ಇಡಲಿವೆ ಖಾದಿ ಮಾಸ್ಕ್‌; ಡಬಲ್‌ ಲೇಯರ್‌ ಮುಖಗವಸು ತಯಾರಿಕೆ ಕಾರ್ಯಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts