More

    ನಾಳೆಯಿಂದ ಏ.28ರವರೆಗೆ ಬೇಸಿಗೆ ಹಾಕಿ ತರಬೇತಿ ಶಿಬಿರ

    ಸೋಮವಾರಪೇಟೆ: ಡಾಲ್ಪಿನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಟ್ಟಣದ ಹಾಕಿ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಮಾ.28ರಿಂದ ಏ.28ರವರೆಗೆ ಒಂದು ತಿಂಗಳ ಕಾಲ ಹಾಕಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಎಚ್.ಎನ್.ಅಶೋಕ್ ತಿಳಿಸಿದ್ದಾರೆ.

    ಈ ಶಿಬಿರದಲ್ಲಿ 7 ರಿಂದ 20 ವರ್ಷದೊಳಗಿನ ಆಸಕ್ತ ಯುವಕ, ಯುವತಿಯರು ಪಾಲ್ಗೊಳ್ಳಬಹುದು ಎಂದು ಹೇಳಿದರು. ಪ್ರತಿದಿನ ಬೆಳಿಗ್ಗೆ 6.30ರಿಂದ 8.30 ರವರೆಗೆ ತರಬೇತಿ ನಡೆಯಲಿದ್ದು. ಶಿಬಿರಾರ್ಥಿಗಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ನೀಡಲಾಗುವುದು ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಡಾಲ್ಪಿನ್ಸ್ ಕ್ಲಬ್ ವತಿಯಿಂದ ಬೇಸಿಗೆ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ನಡೆಸಲಾಗುತ್ತಿದೆ. ಪ್ರತಿಭಾವಂತ ಮಕ್ಕಳಿಗೆ ಒಳ್ಳೆಯ ಅವಕಾಶವಿದ್ದು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸೂಚನೆಯಂತೆ ಶಿಬಿರದಲ್ಲಿ ಟರ್ಫ್ ಮೈದಾನಕ್ಕೆ ಬಳಸುವ ಶೂ ಮತ್ತು ಹಾಕಿ ಸ್ಟಿಕ್ ಹೊಂದಿರಬೇಕು. ಶಿಬಿರಕ್ಕೆ ನೋಂದಣಿ ಮಾಡಿಕೊಳ್ಳುವ ಆಸಕ್ತ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್‌ಕಾರ್ಡ್ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಹಾಜರುಪಡಿಸಬೇಕು.

    ಶಾಲಾ-ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ತಿಳಿಹೇಳಬೇಕೆಂದು ಮನವಿ ಮಾಡಿದರು. ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಹಾಕಿ ಆಟಗಾರರಾದ ಎಸ್.ವಿ.ಸುನಿಲ್ ಹಾಗೂ ವಿಕ್ರಂ ಕಾಂತ್ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

    ಕಾರ್ಯದರ್ಶಿ ಕೆ.ಎಸ್.ಪ್ರಕಾಶ್, ಖಜಾಂಚಿ ಪ್ರಸನ್ನನಾಯರ್, ಪದಾಧಿಕಾರಿಗಳಾದ ಪ್ರಜಾ ಪೂಣಚ್ಚ, ರಂಜನ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts