More

    ನಿರಂತರ ಕಲಿಕೆಯಿಂದ ಯಶಸ್ಸು ಸಾಧ್ಯ: ಸುಮಿತ್ರಾ ರಂಗನಾಥನ್​ ಸಲಹೆ

    ಬೆಂಗಳೂರು: ನಿರಂತರ ಕಲಿಕೆಯಿಂದ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಇಆರ್​ಎಸ್​ಎಚ್​ಸಿಎಲ್​ ಟೆಕ್​ ಕಂಪನಿಯ ಗ್ಲೋಬಲ್​ ಡೆಲಿವರಿ ವಿಭಾಗದ ಹಿರಿಯ ಉಪಾಧ್ಯಕ್ಷೆ ಸುಮಿತ್ರಾ ರಂಗನಾಥನ್​ ಹೇಳಿದ್ದಾರೆ.

    ಬನಶಂಕರಿಯ ಬಿಎನ್​ಎಂಐಟಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನ ಪ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿರುವ ಕಾಲಟ್ಟದಲ್ಲಿ ಎಲ್ಲರೂ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತ ಮುಂದುವರಿಯಬೇಕಿದೆ. ಜತೆಗೆ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಾದ ಅನಿವಾರ್ಯತೆ ಇದೆ. ಯುವ ಸಮೂಹ ದೇಶದ ಸಂಪನ್ಮೂಲವಾಗಿದ್ದು, ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದರು.

    ಐಐಐಟಿ ನಿರ್ದೇಶಕ ಸಡಗೋಪನ್​ ಮಾತನಾಡಿ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಮಹಿಳೆಯರಿಗೆ ವಿಪುಲ ಅವಕಾಶಗಳು ದೊರಕುತ್ತಿವೆ. ಎಲ್ಲ ವಲಯಗಳಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯ ಮೆರೆಯುತ್ತಿದ್ದಾರೆ ಎಂದು ಹೇಳಿದರು.

    ಬಿಎನ್​ಎಂ ಚಾರಿಟಿ ಟ್ರಸ್ಟಿಗಳಾದ ಈಶ್ವರ್​ ಎನ್​.ಮಾನೆ, ಬಿಎನ್​ಎಂಐಟಿ ನಿರ್ದೇಶಕ ಪೊ. ಟಿ.ಜೆ. ರಾಮಮೂರ್ತಿ, ಡೀನ್​ ಈಶ್ವರ್​ ಎನ್​. ಮಾನೆ, ಕಾಲೇಜಿನ ಹೆಚ್ಚುವರಿ ನಿರ್ದೇಶಕ ಡಾ. ಎಸ್​.ವೈ. ಕುಲಕರ್ಣಿ, ಪ್ರಾಂಶುಪಾಲ ಡಾ. ಜಿ.ಎನ್​. ಕೃಷ್ಣಮೂರ್ತಿ ಇತರರಿದ್ದರು.

    ವಿದ್ಯಾರ್ಥಿಗಳಲ್ಲಿ ಕಾಲೇಜು ದಿನಗಳಲ್ಲಿಯೇ ಕೈಗಾರಿಕೆ ಬಗ್ಗೆ ಆಸಕ್ತಿ ಮೂಡಿಸಲು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳು ಕೈಗಾರಿಕೋದ್ಯಮಿಗಳ ಜತೆಗೆ ಸಂವಾದ ನಡೆಸಿ ಅವರ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ.
    > ನಾರಾಯಣ ರಾವ್​ ಮಾನೆ, ಬಿಎನ್​ಎಂಐಟಿ ಚಾರಿಟಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts