More

    H3N2 ಸೋಂಕಿಗೆ ಗಾಬರಿ ಪಡೆಬೇಕಾಗಿಲ್ಲ; ಮುಂಜಾಗ್ರತೆ ಕಡ್ಡಾಯ, ಎಚ್ಚರಿಕೆ ಸೂಚನೆಗಳನ್ನು ನೀಡಿದ ಸುಧಾಕರ್​​

    ಬೆಂಗಳೂರು: ಕೆಲವು ದಿನಗಳಿಂದ H3N2 ವೇರಿಯಂಟ್​​ನಿಂದ ದೇಶದಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಗಾಬರಿ ಪಡುವ ಯಾವುದೇ ಸ್ಥಿತಿ ನಿರ್ಮಾಣವಾಗಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಂತರ ಸುದ್ದಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಆತಂಕ ಇರುವುದರಿಂದ ಸಭೆ ನಡೆಸಿದ್ದೇವೆ. ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಮುಂಜಾಗ್ರತಾ ಕ್ರಮ‌ವಹಿಸಬೇಕು ಎಂದು ಸಲಹೆ ನೀಡಿದರು.

    H3N2 ಗೆ ಪ್ರತ್ಯೇಕ ಕೋವಿಡ್ ಮಾರ್ಗಸೂಚಿ ಹೊರಡಿಸುತ್ತೇವೆ. ಕೋವಿಡ್ ರೀತಿಯಲ್ಲೇ ಇದರ ರೋಗಲಕ್ಷಣಗಳು ಇರುತ್ತವೆ. ಕೋವಿಡ್​ಗೆ ಕೊಡುತ್ತಿದ್ದ ಚಿಕಿತ್ಸೆಯನ್ನೇ ಮುಂದುವರೆಸುತ್ತಿದ್ದೇವೆ ಎಂದು ಸುಧಾಕರ್ ಹೇಳಿದರು.

    ಇದನ್ನೂ ಓದಿ: VIDEO| ಉರ್ಫಿ ಜಾವೇದ್ ಹೊಸ ಅವತಾರ; ಮೈಮುಚ್ಚಿಕೊಳ್ಳಲು ಹಾವನ್ನೇ ಬಳಸಿದ ನಟಿ!

    ನಮ್ಮ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ ಎಲ್ಲರೂ ಮಾಸ್ಕ್ ಧರಿಸುತ್ತಿದ್ದರು. ಈಗ ಮಾಸ್ಕ್ ಧರಿಸುತ್ತಿಲ್ಲ. ಎಲ್ಲ ಹೆಲ್ತ್ ಕೇರ್ ಸಿಬ್ಬಂದಿ ಕಡ್ಡಾಯವಾಗಿ ಇನ್ನು ಮುಂದೆ ಮಾಸ್ಕ್ ಧರಿಸಬೇಕು. ನಾವು ಒಂದು ಸಲಹೆ ಕೊಡುತ್ತಿದ್ದು, ವರ್ಷದಲ್ಲಿ ಒಂದು ಬಾರಿ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ಸರ್ಕಾರದಿಂದಲೇ ವ್ಯಾಕ್ಸಿನೇಷನ್‌ ಕೊಡಲಾಗುತ್ತಿದೆ ಎಂದರು.

    ಕೇಂದ್ರ ಸರ್ಕಾರ ಪ್ರತಿವಾರ 25 ಟೆಸ್ಟ್ ಮಾಡಲು ಸೂಚಿಸಿದೆ. ಸ್ಯಾರಿ, ILR ಟೆಸ್ಟ್ ಮಾಡಲು ಸೂಚಿಸಿದೆ. 15 ವರ್ಷದ ಕೆಳಗಿನ ಮಕ್ಕಳಿಗೆ ಈ ವೇರಿಯೆಂಟ್ ಅಪಾಯ ಇದೆ, ಮಕ್ಕಳು ಶಾಲೆಗಳಲ್ಲಿ ಒಟ್ಟಿಗೆ ಕುಳಿತುಕೊಳ್ಳುವುದರಿಂದ ಅಪಾಯ ಹೆಚ್ಚು‌. 65 ವರ್ಷ ಮೇಲ್ಪಟ್ಟ ವಯೋವೃದ್ದರು, ಗರ್ಭಿಣಿಯರಿಗೂ ಇದರ ಅಪಾಯ ಇದೆ. ಶುಚಿತ್ವಕ್ಕೆ ಹೆಚ್ಚು ಮಹತ್ವ ಕೊಡಬೇಕು, ಸೀನುವಾಗ ಕೆಮ್ಮುವಾಗ ಮಾಸ್ಕ್ ಹಾಕಬೇಕು, ಸಾರ್ವಜನಿಕ ಅಂತರ ಕಾಪಾಡಬೇಕು ಎಂದು ಸಲಹೆ ನೀಡಿದರು.

    ಇದನ್ನೂ ಓದಿ: ಹೆಂಡತಿಯನ್ನು 11 ವರ್ಷ ಮನೆಯಲ್ಲಿ ಕೂಡಿ ಹಾಕಿದ ಲಾಯರ್!

    ಅಂಕಿ-ಅಂಶ ಗಮನಿಸಿದಾಗ ಆತಂಕ ಪಡುವ ಅಗತ್ಯ ಇಲ್ಲ. ಜನವರಿಯಿಂದ HINI 20, h3n2 26, ಇನ್ಪುಯೆನ್ಸಾ b 10, ಅಡಿನೋ ವೈರಸ್ 60 ಕೇಸ್ ಪತ್ತೆಯಾಗಿದೆ. ಸೋಂಕಿಗೆ ಒಳಗಾದವರು ಅಂಟಿ ಬಯೋಟಿಕ್ಸ್ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ತಮ್ಮ ವೈಯಕ್ತಿಕ ಚಿಕಿತ್ಸೆ ಪಡೆಯದೆ, ವೈದ್ಯಕೀಯ ಚಿಕಿತ್ಸೆ ಪಡೆಯಿರಿ ಎಂದು ಸೂಚನೆ ನೀಡದರು.

    ಸದ್ಯ ನಮ್ಮಲ್ಲಿ ಯಾವುದೇ ಔಷಧ ಕೊರತೆ ಇಲ್ಲ. ಬೇಸಿಗೆಗೆ ಕಾಲಿಡುತ್ತಿದ್ದು, ತಾಪಮಾನ ಫೆಬ್ರವರಿಯಿಂದ ಹೆಚ್ಚಾಗಿದೆ. ಬಿಸಿಲಿನ ತಾಪಮಾನಕ್ಕೆ ಜನ ಬಳಲುತ್ತಿದ್ದಾರೆ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ವರೆಗೆ ಬಿಸಿಲಿನಲ್ಲಿ ಓಡಾಡುವುದು ಕಡಿಮೆ ಮಾಡಿ. ಕನಿಷ್ಠ 2-3 ಲೀಟರ್ ನಿರು ಸೇವನೆ ಜತೆಗೆ, ಎಳನೀರು, ಮಜ್ಜಿಗೆ ಸೇವಿಸುವುದು ಉತ್ತಮ ಎಂದು ತಿಳಿಸಿದರು.

    ಇದನ್ನೂ ಓದಿ: ತರಬೇತಿಯಲ್ಲಿದ್ದಾಗಲೇ ಮಹಿಳಾ ಸಬ್​ಇನ್ಸ್​ಪೆಕ್ಟರ್ ಬಂಧನ; ಏನಿದು ಪ್ರಕರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts