More

    ಪುನೀತ್​ಗಾಗಿ ಸಿನಿಮಾ ಅಪ್ಪಿಕೊಳ್ಳಿ; ಲಕ್ಕಿಮ್ಯಾನ್ ಆಡಿಯೋ ಬಿಡುಗಡೆಯಲ್ಲಿ ಸುದೀಪ್..

    ಬೆಂಗಳೂರು: ಅದು ‘ಲಕ್ಕಿಮ್ಯಾನ್’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಮಂಗಳವಾರ (ಆ. 23)ರಂದು ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡ, ಮಾಧ್ಯಮದವರು, ಅತಿಥಿಗಳು, ದೊಡ್ಮನೆ ಕುಟುಂಬದವರು ಜತೆಗೆ ಪುನೀತ್ ರಾಜಕುಮಾರ್ ಅಭಿಮಾನಿಗಳೂ ಕಿಕ್ಕಿರಿದು ಸೇರಿದ್ದರು. ‘ಲಕ್ಕಿಮ್ಯಾನ್’ ಚಿತ್ರದಲ್ಲಿ ಪುನೀತ್ ದೇವರಾಗಿ ನಟಿಸಿದ್ದು, ಎಲ್ಲರೂ ಆ ದೇವರ ನೆನಪು ಮಾಡಿಕೊಂಡರು.

    ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಕಿಚ್ಚ ಸುದೀಪ್, ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ‘ಒನ್ಸ್ ಮೋರ್ ಒನ್ಸ್ ಮೋರ್’ ಎಂಬ ಅಭಿಮಾನಿಗಳ ಘೋಷಣೆ ನಡುವೆ ಎರಡು ಬಾರಿ ‘ಲಕ್ಕಿಮ್ಯಾನ್’ ಟ್ರೇಲರ್ ಪ್ರದರ್ಶನವಾಯಿತು. ನಂತರ ಮಾತನಾಡಿದ ಸುದೀಪ್, ‘ಎಲ್ಲರೂ ಇನ್ನೊಮ್ಮೆ ಜೋರಾಗಿ ಚಪ್ಪಾಳೆ ತಟ್ಟಿ. ಕೆಲವರಿಗೆ ಇರುವಾಗ ಬೆಲೆ ಕೊಡುತ್ತೇವೆ. ಆದರೆ ಅವರು ಇಲ್ಲದಿರುವಾಗ ಇನ್ನೂ ಹೆಚ್ಚು ಬೆಲೆ ಕೊಡುತ್ತೇವೆ. ನಾವು ಅವರನ್ನು ಮಿಸ್ ಮಾಡಿಕೊಳ್ತೀವಿ ನಿಜ. ಆದರೆ, ಈ ಚಿತ್ರದ ಟ್ರೇಲರ್ ನೋಡುವಾಗ ನಾನವರನ್ನು ನೋಡಿ ಖುಷಿಪಡುತ್ತಿದ್ದೆ. ಅವರಿಗೆ ಈ ಸಿನಿಮಾ ತುಂಬಾ ಚೆನ್ನಾಗಿ ಒಪು್ಪತ್ತೆ. ಈ ಸಿನಿಮಾವನ್ನು ಅವರಿಗಾಗಿ ಅಪ್ಪಿಕೊಳ್ಳೋಣ. ಮತ್ತೆ ಬೇಕು ಅಂದರೂ ಸಿಗಲ್ಲ. ಹೀಗಾಗಿ ಈ ಸಿನಿಮಾವನ್ನು ಅನುಭವಿಸಿಬಿಡಿ’ ಎಂದರು.

    ಬಳಿಕ ಮಾತನಾಡಿದ ನಟ ಪ್ರಭುದೇವ, ‘ಟ್ರೇಲರ್ ಕೊನೆಯಲ್ಲಿ ಅಪ್ಪು ದೇವರಂತೆ ಬರುವುದನ್ನು ನೋಡಿ ಭಾವುಕನಾಗಿಬಿಟ್ಟೆ. ವಿ ಮಿಸ್ ಯೂ ಅಪು್ಪ, ವಿ ಆಲ್ವೇಸ್ ಲವ್ ಯೂ. ನನ್ನ ಚಿತ್ರದಲ್ಲಿ ನಿಮ್ಮ ಜತೆ ಒಂದು ಸಾಂಗ್ ಮಾಡಬೇಕು ಅಂತ ಹೇಳಿದ್ದರು. ನಿಮ್ಮ ಎಲ್ಲ ಚಿತ್ರಗಳಿಗೂ ಕರೆಯಿರಿ ಬರುತ್ತೇನೆ ಎಂದಿದ್ದೆ’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು. ಪ್ರಭುದೇವ ಸಹೋದರ ನಾಗೇಂದ್ರಪ್ರಸಾದ್ ಮೊದಲ ಬಾರಿಗೆ ನಿರ್ದೇಶಿಸಿರುವ ‘ಲಕ್ಕಿಮ್ಯಾನ್’ ಚಿತ್ರದಲ್ಲಿ ‘ಡಾರ್ಲಿಂಗ್’ ಕೃಷ್ಣ ನಾಯಕನಾಗಿದ್ದು, ಅವರಿಗೆ ಸಂಗೀತಾ ಶೃಂಗೇರಿ ಮತ್ತು ರೋಶಿನಿ ಪ್ರಕಾಶ್ ನಾಯಕಿಯರು. ಚಿತ್ರ ಇದೇ ಸೆ. 9ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಅಪ್ಪು ಹೇಳಿಕೊಂಡ ಆ ನಾಲ್ಕು ಆಸೆಗಳು

    ‘ಲಕ್ಕಿಮ್ಯಾನ್’ ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ರಾಘವೇಂದ್ರ ರಾಜಕುಮಾರ್, ‘ಅಪ್ಪು ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳಲು ತುಂಬ ಪ್ರಯತ್ನಪಡುತ್ತೇನೆ. ಆದರೆ, ಮಕ್ಕಳು ಹೋಗಲು ತಿಳಿಸುತ್ತಾರೆ. ಸಮಾರಂಭದಿಂದ ಬಂದ ಬಳಿಕ, ಅದರ ಗುಂಗಿನಿಂದ ಹೊರಬರಲು ಎರಡು ದಿನ ಬೇಕಾಗುತ್ತದೆ. ಅಪು್ಪ ಚಿತ್ರರಂಗಕ್ಕೆ ಬಂದ ಪ್ರಾರಂಭದಲ್ಲಿ ನನ್ನ ಬಳಿ ಯಾವಾಗಲೂ ನಾಲ್ಕು ಆಸೆಗಳ ಬಗ್ಗೆ ಹೇಳುತ್ತಿದ್ದ. ಅಪ್ಪಾಜಿ ಜತೆ ನಟಿಸಬೇಕು, ಮಣಿರತ್ನಂ ನಿರ್ದೇಶನದಲ್ಲಿ, ಎ.ಆರ್ ರೆಹಮಾನ್ ಸಂಗೀತ ನಿರ್ದೇಶನದಲ್ಲಿ ನಟಿಸಬೇಕು, ಪ್ರಭುದೇವ ನೃತ್ಯನಿರ್ದೇಶನದಲ್ಲಿ ಡಾನ್ಸ್ ಮಾಡಬೇಕು ಎನ್ನುತ್ತಿದ್ದ. ನಾನು ಹೋದ ಬಳಿಕವೂ, ನನ್ನ ಮಕ್ಕಳು ಹೋದ ಬಳಿಕವೂ ಅವನು ಎಲ್ಲರ ಮನಸ್ಸಿನಲ್ಲೂ ಇರುತ್ತಾನೆ, ಎಲ್ಲರು ಹೋದರೂ ಅಪು್ಪ ಬದುಕಿರುತ್ತಾನೆ’ ಎಂದರು.

    ಕುಂದಾಪುರದ ಫ್ಲೈಓವರ್​ನಲ್ಲಿ ಕೈ ಇಟ್ಟಲ್ಲೆಲ್ಲ ಕರೆಂಟ್!; ವಿದ್ಯುತ್ ಸೋರಿಕೆ, ಸಂಪರ್ಕ ಕಡಿತಗೊಳಿಸಿದ ಮೆಸ್ಕಾಂ

    ಸರ್ಕಾರದಿಂದ ಮತ್ತೊಂದು ಎಡವಟ್ಟು!; ಜೀವಂತ ಇರದವರಿಗೂ ಸದಸ್ಯ ಸ್ಥಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts