More

    ಸಂತೆ ಮಾರುಕಟ್ಟೆಯಲ್ಲಿ ಶುದ್ಧಗಂಗಾ ಘಟಕ ಆರಂಭ

    ಬೀರೂರು: ಪಟ್ಟಣದ ಹೃದಯ ಭಾಗ ಸಂತೆ ಮಾರುಕಟ್ಟೆಯಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕ ತೆರೆಯಲಾಗಿದೆ ಎಂದು ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್ ತಿಳಿಸಿದರು.
    ಸಂತೆ ಬೀದಿಯಲ್ಲಿರುವ ಭಾರತಿ ಶಿಶುವಿಹಾರದ ಆವರಣದಲ್ಲಿ ಪುರಸಭೆ ಸಹಯೋಗದಲ್ಲಿ ಟಿ.ಸುಬ್ರಮಣ್ಯಂ ಶುದ್ಧ ಗಂಗಾಜಲ ಸಮಿತಿ ಸ್ಥಾಪಿಸಿರುವ ನೂತನ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ತರಕಾರಿ, ಸೊಪ್ಪು, ಹೂ ಹಣ್ಣುಗಳನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಾರೆ. ಅವರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು. ಅಲ್ಲದೆ ಈ ಭಾಗದ ಬಹಳಷ್ಟು ಜನತೆಗೆ ಅನುಕೂಲವಾಗುವ ಉದ್ದೇಶದಿಂದ ಪುರಸಭೆ ಸಹಯೋಗದಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ ಎಂದರು.
    ಈಗಾಗಲೇ ಎಸ್.ಎಂ.ಕೃಷ್ಣ ಸಮುದಾಯ ಭವನ ಮತ್ತು ಮಹಾನವಮಿ ಬಯಲಿನಲ್ಲಿ ನೀರಿನ ಘಟಕ ಸ್ಥಾಪಿಸಲಾಗಿದೆ. ಇಲ್ಲಿ 1ರೂ.ಗೆ 4ಲೀ ಮತ್ತು 5 ರೂ.ಗೆ 20ಲೀಟರ್ ಶುದ್ಧ ಕುಡಿಯುವ ನೀರನ್ನು ಪಡೆಯ ಬಹುದಾಗಿದೆ. ಅದಕ್ಕೆ ಕೇವಲ ನಾಣ್ಯಗಳನ್ನು ಬಳಸಬಹುದು. ಪುರಸಭೆ ಕೊಳವೆ ಬಾವಿಯನ್ನು ಬಳಸಿಕೊಂಡು ಗುತ್ತಿಗೆದಾರ ಮಾಸಿಕ 1 ಸಾವಿರ ರೂ.ಪಾವತಿಸುತ್ತಾನೆ. ಅದರ ಸಂಪೂರ್ಣ ನಿರ್ವಹಣೆ ಗುತ್ತಿಗೆದಾರನಿಗೆ ಸೇರಿರುತ್ತದೆ ಎಂದು ಹೇಳಿದರು.
    ಪುರಸಭೆ ಸದಸ್ಯರಾದ ಮಾನಿಕ್ ಬಾಷಾ, ಬಿ.ಕೆ.ಶಶಿಧರ್, ಎನ್.ಎಂ.ನಾಗರಾಜ್, ಲೋಕೇಶಪ್ಪ, ಲಕ್ಷ್ಮಣ್ ಮತ್ತು ಮುಖಂಡರಾದ ರವಿ ಹಾಗೂ ಸ್ಥಳೀಯರಾದ ಬೀರಯ್ಯ, ನಂಜಯ್ಯ, ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts