More

    ಸಮೂಹದ ಜತೆ ಒಗ್ಗೂಡಿದರೆ ಯಶಸ್ಸು

    ಶೃಂಗೇರಿ: ಸಮಾಜ ಎಂದರೆ ಜನ ಸಮೂಹ. ಸಂಘಗಳು ಸಮೂಹದ ಜತೆ ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಂಘ ಯಶಸ್ಸಿಗೊಳಿಸಲು ಸಾಧ್ಯ ಎಂದು ಜಗದ್ಗುರುಗಳ ಆಪ್ತ ಸಹಾಯಕ ಶಂ.ನ.ಕೃಷ್ಣಮೂರ್ತಿ ಹೇಳಿದರು.
    ರಾಜನಗರದ ವಿದ್ಯಾಭಾರತೀ ಸಭಾ ಭವನದಲ್ಲಿ ಭಾನುವಾರ ತಾಲೂಕು ವಿಪ್ರನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡ ವಿದ್ಯಾರ್ಥಿ ವೇತನ, ಯುವ ಪ್ರತಿಭೆಗಳಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ನಾವು ಸಮಾಜ ಜೀವಿಗಳು. ಸಮಾಜದಿಂದ ಪಡೆದ ಸಹಾಯವನ್ನು ಸದುಪಯೋಗ ಮಾಡಿಕೊಂಡು ಸದಾ ಕೃತಜ್ಞರಾಗಿರಬೇಕು. ಅವಕಾಶ ಸಿಕ್ಕಾಗ ಮತ್ತೊಬ್ಬರಿಗೆ ಸಹಾಯ ನೀಡುವುದು ಶ್ರೇಷ್ಠವಾದ ಸೇವೆ. ನೈತಿಕ, ಮಾನವೀಯ ಮೌಲ್ಯಗಳಿಗೆ ಸಂಘಗಳು ಆದ್ಯತೆ ನೀಡಿ ಅರ್ಥಿಕವಾಗಿ ಹಿಂದುಳಿದವರಿಗೆ ಸಹಾ ಮಾಡಿದಾಗ ಮಾತ್ರ ಸಂಘಗಳ ಉದ್ದೇಶ ಈಡೇರುತ್ತದೆ ಎಂದರು.
    ಕಮ್ಮರಡಿ ಬ್ರಾಹ್ಮಣ ಮಿತ್ರ ವೇದಿಕೆ ಅಧ್ಯಕ್ಷ ತೇಜೋಶಂಕರ ಸೋಮಯಾಜಿ ಮಾತನಾಡಿ, ಜನನ ಮಾತ್ರದಿಂದ ನಾವು ಬ್ರಾಹ್ಮಣರು ಎನಿಸಿಕೊಳ್ಳದೆ ಶುಚಿತ್ವ ಮತ್ತು ಅಧ್ಯಯನದಿಂದ ಬ್ರಾಹ್ಮಣತ್ವಗಳಿಸಬೇಕು.ನಾವು ಪಡೆದ ಜ್ಞಾನವನ್ನು ಆಚರಣೆಗೆ ತರಬೇಕು.ಸಂಸ್ಕೃತಿ, ಸಂಸ್ಕಾರಗಳನ್ನು ಮೊದಲು ನಾವು ಜೀವನದಲ್ಲಿ ಅಳವಡಿಸಿಕೊಂಡು ಮತ್ತೊಬ್ಬರಿಗೆ ಮಾರ್ಗದರ್ಶನ ನೀಡಬೇಕು. ನಮ್ಮೊಳಗಿರುವ ಜ್ಞಾನವನ್ನು ಸಂಸ್ಕೃತಿ ಉನ್ನತಿಗಾಗಿ ಬಳಸಿಕೊಳ್ಳಬೇಕು. ಸಂಘಗಳು ಸಮಾಜದ ಜನಸಾಮಾನ್ಯರ ಏಳಿಗೆ ಬಗ್ಗೆ ಚಿಂತಿಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದರು.
    ಶಿಕ್ಷಕ ಎಸ್.ಗುರುಮೂರ್ತಿ ‘ಕಗ್ಗದ ಬೆಳಕಿನಲ್ಲಿ ದಾನ, ಸಹಕಾರ, ಸೇವೆಗಳ ಚಿಂತನೆ’ ಕುರಿತು ಉಪನ್ಯಾಸ ನೀಡಿದರು. ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ, ಯುವ ವಕೀಲೆ ರೋಚಿನೀರಾವ್, ಡಾ.ಗುರುಪ್ರಸಾದ್, ಮನ:ಶಾಸಜ್ಞೆ ಹರ್ಷಿತಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಬಾಲಗಂಗಾಧರ್, ಗೌರವಾಧ್ಯಕ್ಷ ಕೃಷ್ಣ,ಉಪಾಧ್ಯಕ್ಷ ಪಾರ್ವತಿ, ವಿಶ್ವನಾಥ್, ಉದ್ಯಮಿ ಕೈಲಾಸ್ ಕುಮಾರ್, ತಾಲೂಕು ಬ್ರಾಹ್ಮಣ ಮಹಾಸಭಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ರವಿಕುಮಾರ್,ಯುವ ವಿಪ್ರ ವೇದಿಕೆ ಅಧ್ಯಕ್ಷ ಹೆಬ್ಬಿಗೆ ಕೃಷ್ಣಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts