More

    ವಿದ್ಯಾರ್ಥಿಗಳಲ್ಲಿರಲಿ ಬದ್ಧತೆ, ಅರ್ಪಣಾ ಮನೋಭಾವ

    ಯಲಬುರ್ಗಾ: ವಿದ್ಯಾರ್ಥಿಗಳು ಬದ್ಧತೆ ಮತ್ತು ಅರ್ಪಣಾ ಮನೋಭಾವದಿಂದ ಅಧ್ಯಯನಶೀಲರಾದಾಗ ಮಾತ್ರ ಜೀವನದಲ್ಲಿ ಯಶಸ್ಸು ಹಿಂಬಾಲಿಸುತ್ತದೆ ಎಂದು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್‌ನ ಹಿರಿಯ ವಿಜ್ಞಾನಿ ಡಾ.ಗೀತಾ ತಿಮ್ಮೇಗೌಡ ಹೇಳಿದರು.

    ತಾಲೂಕಿನ ತಾಳಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಕಠಿಣ ಪರಿಶ್ರಮ, ಗುರಿ ಹೊಂದಿದ್ದರೆ ಮಾತ್ರ ಯಶಸ್ಸು, ಕೀರ್ತಿ ತಂದುಕೊಡಬಲ್ಲದು. ನಮ್ಮನ್ನು ನಾವು ವಿಭಿನ್ನತೆಯಿಂದ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ತಾಳಕೇರಿ ಶಾಲೆ ಕೂಡ ಅಷ್ಟೇ ವಿಭಿನ್ನವಾಗಿ ಗುರುತಿಸಿಕೊಂಡಿದೆ. ವಿಜ್ಞಾನ ಕೇಂದ್ರ ಮತ್ತು ಇನ್ನಿತರ ಶೈಕ್ಷಣಿಕ ಚಟುವಟಿಕೆಗಳು ಮಾಧ್ಯಮದಲ್ಲಿ ಕಂಡು ನಾನು ಇಲ್ಲಿಗೆ ಬಂದಿರುವೆ. ಇಸ್ರೋ ವಿಜ್ಞಾನಿಗಳು ಮತ್ತಿತರ ಗಣ್ಯರು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ್ದಾರೆಂದರೆ ನಿಮ್ಮನ್ನು ನೀವು ವಿಭಿನ್ನವಾಗಿ ಗುರತಿಸಿಕೊಂಡಿದ್ದೀರಿ ಎಂದರು.

    ಬಿಇಒ ಪದ್ಮನಾಭ ಕಣರ್ಂ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯದ ನೆನಪುಗಳು ಅಜರಾಮರ. ಅವು ಬದುಕಿಗೆ ಮಹತ್ವಪೂರ್ಣ ತಿರುವು ನೀಡುತ್ತವೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

    ಜನಪದ ಕಲಾವಿದ ಜೀವನ್‌ಸಾಬ್ ಬಿನ್ನಾಳ, ಅಕ್ಷರ ದಾಸೋಹ ಜಿಲ್ಲಾ ಸಹಾಯಕ ನಿರ್ದೇಶಕ ಹನುಮಂತಪ್ಪ, ಮುಖ್ಯಶಿಕ್ಷಕರಾದ ಬಾಬುಸಾಬ್ ಲೈನ್‌ದಾರ್, ಸಂಗಪ್ಪ ಕಿರೇಸೂರು, ಮಂಜುನಾಥ ಮಾತನಾಡಿದರು. ಇದೇವೇಳೆ ವಿಜ್ಞಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

    ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ಸುರಳ, ಗ್ರಾಪಂ ಸದಸ್ಯ ಪ್ರೇಮ್‌ಕುಮಾರ್ ಸುರಳ, ಸಿಆರ್‌ಪಿ ದೊಡ್ಡನಗೌಡ ಪಾಟೀಲ್, ಶಿಕ್ಷಕರಾದ ದೇವೇಂದ್ರಪ್ಪ ಜಿರ್ಲಿ, ಅಯ್ಯಪ್ಪ ಸುರಳ, ವೆಂಕಟಲಕ್ಷ್ಮೀ ಶೆಟ್ಟರ್, ಎಚ್.ರಮೇಶ, ತಿಮ್ಮಣ್ಣ ಜಗ್ಗಲ್, ಸುನೀಲ್‌ಕುಮಾರ್, ಶೋಭಾ ಬಾಗೇವಾಡಿ, ಮಂಜುನಾಥ ಕೋಳೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts