More

    ಟೈಪಿಂಗ್​ಗಿಂತ ಹ್ಯಾಂಡ್​ರೈಟಿಂಗೇ ಒಳ್ಳೆಯದು: ಕೈಬರಹದಿಂದ ಮೆದುಳು ಚುರುಕು..

    ನಾರ್ವೆ: ಈಗ ಪೆನ್ನು ಹಿಡಿದು ಬರೆಯುವವರಿಗಿಂತ ಬೆರಳ ತುದಿಯಲ್ಲೇ ಬರೆಯುವವರು ಹೆಚ್ಚು. ಅರ್ಥಾತ್​, ಹ್ಯಾಂಡ್​ರೈಟಿಂಗ್​ಗಿಂತ ಟೈಪಿಂಗ್​ ಮೂಲಕವೇ ಹೆಚ್ಚು ಬರೆಯಲಾಗುತ್ತಿದೆ. ಆದರೆ ಕೀಪ್ಯಾಡ್​ ಬಳಸಿ ಬರೆಯುವುದಕ್ಕಿಂತ ಕೈಬರಹವೇ ಅತ್ಯುತ್ತಮ ಎಂದು ಅಧ್ಯಯನವೊಂದು ಹೇಳಿದೆ.

    ನಾರ್ವೆಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ ಆ್ಯಂಡ್ ಟೆಕ್ನಾಲಜಿಯ ಪ್ರೊ. ಆಡ್ರೆ ವ್ಯಾನ್​ ಡರ್ ಮೀರ್ ಅವರು ಈ ಕುರಿತ ಅಧ್ಯಯನವೊಂದನ್ನು ನಡೆಸಿದ್ದು, ಅದರ ಫಲಿತಾಂಶವನ್ನು ಹೇಳಿಕೊಂಡಿದ್ದಾರೆ. ಇವರು 2017ರಿಂದ ಹಲವು ಸಲ ಈ ಬಗ್ಗೆ ಅಧ್ಯಯನ ನಡೆಸಿದ್ದು, 2020ರಲ್ಲೂ ಮತ್ತೊಮ್ಮೆ ಅಧ್ಯಯನ ಮಾಡಿದ್ದಾರೆ. essayscammers reddit

    ಟೈಪಿಂಗ್ ಹಾಗೂ ಕೈಬರಹ ಎರಡನ್ನೂ ಇವರು ಅಧ್ಯಯನಕ್ಕೆ ಒಳಪಡಿಸಿದ್ದಾರೆ ಹಾಗೂ ಅದರ ವಿವರಗಳನ್ನು ಇಇಜಿ ಮೂಲಕ ದಾಖಲಿಸಿಕೊಂಡಿದ್ದಾರೆ. ಮೆದುಳು ಸಕ್ರಿಯಗೊಂಡಾಗ ಇಇಜಿ ಅಲ್ಲಿನ ಬದಲಾವಣೆಗಳನ್ನು ದಾಖಲಿಸಿಕೊಳ್ಳುತ್ತದೆ. ಕೈಬರಹದ ವೇಳೆ ಮೆದುಳಿನಲ್ಲಿ ಹೆಚ್ಚಿನ ಕ್ರಿಯಾಶೀಲತೆ ಕಂಡುಬಂದಿದೆ. ಪೆನ್ನು ಹಾಗೂ ಕಾಗದ ಬಳಕೆ ಮೆದುಳು ಹಾಗೂ ನೆನಪಿನ ಶಕ್ತಿಯನ್ನು ಪ್ರಚೋದಿಸುತ್ತದೆ. ಬರವಣಿಗೆ, ಬರೆಯುವಾಗ ಮಾಡುವ ಧ್ವನಿ ಹಾಗೂ ಅಂಗಾಂಗಗಳ ಚಲನೆ ಮೆದುಳಿನ ವಿವಿಧ ಭಾಗಗಳ ನಡುವೆ ಸಮನ್ವಯತೆ ಸಾಧಿಸುವುದರಿಂದ ಮಕ್ಕಳ ಮೆದುಳಿನ ಮೇಲೆ ವಿಶೇಷ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

    ಟೈಪಿಂಗ್ ಮೇಲಿನ ಅವಲಂಬನೆ, ಕೀಪ್ಯಾಡ್ ಬಳಕೆ ಹೀಗೇ ಮುಂದುವರಿದರೆ ಮುಂದಿನ ಪೀಳಿಗೆ ಕೈಬರಹದ ಕೌಶಲವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರೀಯ ಮಾರ್ಗಸೂಚಿಗಳಲ್ಲಿ, ಶಾಲೆಗಳಲ್ಲಿ ಮಕ್ಕಳು ಕನಿಷ್ಠ ಇಂತಿಷ್ಟು ಕೈಬರಹ ನಡೆಸಲೇಬೇಕು ಎಂಬ ನಿಯಮ ಮಾಡಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts