More

    ಕ್ವಾರಂಟೈನ್​ನಿಂದ ಹದಗೆಡುತ್ತೆ ಮಾನಸಿಕ ಸ್ವಾಸ್ಥ್ಯ…!

    ನವದೆಹಲಿ: ಕರೊನಾ ವೈರಸ್ ಸೋಂಕಿತರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸುವುದರಿಂದ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯಕೀಯ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ತಿಳಿಸಿದೆ.
    ಇಲ್ಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ
    ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋವೈದ್ಯಕೀಯ ವಿಭಾಗದ ಉಪನ್ಯಾಸಕ ಉಪೇಂದ್ರ ಸಿಂಗ್ ನೇತೃತ್ವದಲ್ಲಿ ಅಧ್ಯಯನ ನಡೆಸಲಾಗಿದ್ದು, ಸಾಮಾನ್ಯ ಸ್ಥಿತಿಗೆ ಹೋಲಿಸಿದಲ್ಲಿ ಕ್ವಾರಂಟೈನ್ ಅವಧಿ ಕೋವಿಡ್ -19 ರೋಗಲಕ್ಷಣವಿಲ್ಲದ ವ್ಯಕ್ತಿಗಳ ಮೇಲೆ ಹೆಚ್ಚು ಮಾನಸಿಕ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ : ತಲೆ ಮೇಲೆ ಹಲಸಿನ ಹಣ್ಣು ಬಿತ್ತು; ಆಸ್ಪತ್ರೆಗೆ ಹೋದ್ರೆ ಕರೊನಾ ಪಾಸಿಟಿವ್ ಬಂತು!

    ಒಟ್ಟು 380 ವ್ಯಕ್ತಿಗಳು ಅಧ್ಯಯನದಲ್ಲಿ ಭಾಗವಹಿಸಿದ್ದರು. ಕ್ವಾರಂಟೈನ್​​ನಲ್ಲಿದ್ದ ಜನರ ಸರಾಸರಿ ವಯಸ್ಸು 33.5 ವರ್ಷ ಮತ್ತು ಅವರಲ್ಲಿ ಶೇಕಡಾ 72ರಷ್ಟು ಪುರುಷರು. ಭಾಗವಹಿಸಿದವರೆಲ್ಲರೂ ವಿದ್ಯಾವಂತರು. ಅದರಲ್ಲೂ ಶೇಕಡಾ 66 ರಷ್ಟು ಜನರು ಉತ್ತಮ ಶಿಕ್ಷಣ ಪಡೆದವರು.
    ಭಾಗವಹಿಸಿದವರ ಪೈಕಿ ಶೇ.46 ಜನ ತೀವ್ರ ಒತ್ತಡದಿಂದ ಬಳಲುತ್ತಿದ್ದರೆ, ಶೇ.14 ಜನ ಆತಂಕ, ಶೇ.8 ಜನ ಖಿನ್ನತೆಗೊಳಗಾಗಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಬೇರೆಯವರೊಂದಿಗೆ ಸಂಪರ್ಕ, ಸಂವಹನವಿಲ್ಲದಿರುವುದರಿಂದ ಕ್ವಾರಂಟೈನ್​​​ನಲ್ಲಿರುವವರ ಮಾನಸಿಕ ಆರೋಗ್ಯ ಹದಗೆಟ್ಟಿದ್ದು, ಮಾನಸಿಕ ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿ ಒತ್ತಡ, ಆತಂಕ ದ್ವಿಗುಣಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

    ಕೊನೆಗೂ ಹುಟ್ಟಿದ ‘ಲಾಕ್​ಡೌನ್​ ಯಾದವ್​’….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts