More

    ಲಸಿಕೆ ತಗೊಂಡಿದ್ದರೂ, ಆ್ಯಂಟಿಬಾಡಿ ಚಿಕಿತ್ಸೆ ಪಡೆದಿದ್ದರೂ ಒಮಿಕ್ರಾನ್​ ಬರಬಹುದು!; ಏಕೆಂದರೆ…

    ನವದೆಹಲಿ: ಜಗತ್ತಿನೆಲ್ಲೆಡೆ ಆತಂಕ ಉಂಟು ಮಾಡಿರುವ ಒಮಿಕ್ರಾನ್​ ಮತ್ತಷ್ಟು ಭೀತಿ ಹುಟ್ಟಿಸುವಂಥ ವಿಚಾರಗಳು ಬೆಳಕಿಗೆ ಬರಲಾರಂಭಿಸಿವೆ. ಈಗಾಗಲೇ ಲಸಿಕೆ ಪಡೆದಿದ್ದರೂ, ಆ್ಯಂಟಿಬಾಡಿ ಚಿಕಿತ್ಸೆಗೆ ಒಳಗಾಗಿದ್ದರೂ ಒಮಿಕ್ರಾನ್ ಸೋಂಕು ತಗುಲುವ ಸಾಧ್ಯತೆಗಳಿವೆ ಎಂಬುದು ಹೊಸ ಅಧ್ಯಯನವೊಂದರಲ್ಲಿ ಕಂಡುಬಂದಿದೆ.

    ಯುಎಸ್​ನ ಕೊಲಂಬಿಯಾ ಯುನಿವರ್ಸಿಟಿ ಮತ್ತು ಯುನಿವರ್ಸಿಟಿ ಆಫ್ ಹಾಂಗ್​ಕಾಂಗ್​ ನಡೆಸಿದ ಜಂಟಿ ಅಧ್ಯಯನದ ವರದಿ ಗುರುವಾರ ನೇಚರ್ ಜರ್ನಲ್​ನಲ್ಲಿ ಪ್ರಕಟಗೊಂಡಿದ್ದು, ಅದರಲ್ಲಿ ಒಂದಷ್ಟು ವಿಶೇಷ ಮಾಹಿತಿಗಳು ಬಹಿರಂಗಗೊಂಡಿವೆ.

    ಇದನ್ನೂ ಓದಿ: ಭಾರತದ ಈ ಎಲ್ಲ ಮೊದಲ ಮಹಿಳೆಯರ ನೇಮಕಕ್ಕೆ ಮೋದಿಯೇ ಕಾರಣ: ಜೆ.ಪಿ. ನಡ್ಡಾ

    ಸದ್ಯದ ಯಾವುದೇ ಲಸಿಕೆ ಎರಡೂ ಡೋಸ್ ತೆಗೆದುಕೊಂಡಿದ್ದರೂ ಅವುಗಳಿಂದ ಸಿಗುವ ರೋಗನಿರೋಧಕ ಶಕ್ತಿ ಹಳೆಯ ವೈರಸ್​ಗಿಂತ ರೂಪಾಂತರಿ ಒಮಿಕ್ರಾನ್​ ವೈರಸ್​ ವಿಷಯದಲ್ಲಿ ಕಡಿಮೆ ಪರಿಣಾಮಕಾರಿ ಎಂಬ ಅಂಶ ಈ ಅಧ್ಯಯನದಲ್ಲಿ ಕಂಡು ಬಂದಿದೆ.

    ಇದನ್ನೂ ಓದಿ: ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಮಾತ್ರವಲ್ಲ ವೇಗವಾಗಿ ವ್ಯಾಪಿಸುತ್ತಿರುವ ರೂಪಾಂತರಿ ವೈರಸ್​ ಒಮಿಕ್ರಾನ್​ನ ಪ್ರೊಟೀನ್​ ಸ್ಪೈಕ್​ಗಳು ವಿಶಿಷ್ಟವಾಗಿದ್ದು, ಹೊಸ ಸೋಂಕನ್ನು ತಡೆಯಲು ಹೊಸ ಲಸಿಕೆಗಳ ಸಂಶೋಧನೆಯ ಅಗತ್ಯವಿದೆ ಎಂದೂ ಈ ಅಧ್ಯಯನ ಅಭಿಪ್ರಾಯ ಪಟ್ಟಿದೆ. –ಏಜೆನ್ಸೀಸ್​

    ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

    ಇಲ್ಲಿ ನಾವು ಅಧಿಕಾರಕ್ಕೆ ಬಂದರೆ ಇವೆಲ್ಲವನ್ನೂ ಮಾಡ್ತೇವೆ: ಅರವಿಂದ ಕೇಜ್ರಿವಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts